ಬೆಂಗಳೂರು : ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಸಾವಿರಾರು ಜನರು ಊಟ ಇಲ್ಲದೇ ಕಷ್ಟ ಪಡುತ್ತಿದ್ದರು. ಈ ಸಂಧರ್ಭದಲ್ಲಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಕಷ್ಟದಲ್ಲಿರುವ ಜನರ ಕಷ್ಟಕ್ಕೆ ಸ್ಪಂದಿಸಿದರು. ಭುವನ್ ಕೋವಿಡ್ ಹೆಲ್ಪ್ 24/7 ಎಂಬ ಟ್ರಸ್ಟ್ ಆರಂಭಿಸಿ ಸಾಕಷ್ಟು ಜನರ ಕಷ್ಟಕ್ಕೆ ಹರ್ಷಿಕಾ ಹಾಗೂ ಭುವನ್ ನೆರವಿಗೆ ಬಂದಿದ್ದರು.
ಇದೀಗ ಈ ಸಮಾಜ ಸೇವೆಯನ್ನು ಗುರುತಿಸಿ ಹರ್ಷಿಕಾ ಪೂಣಚ್ಛ ಹಾಗೂ ಭುವನ್ ಪೊನ್ನಣ್ಣಗೆ ಪ್ರತಿಷ್ಠಿತ ಮದರ್ ತೆರೆಸಾ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗಿದೆ. ಜುಲೈ 3ರಂದು ಬೆಂಗಳೂರಿನಲ್ಲೇ ನಡೆದ ಕಾರ್ಯಕ್ರಮದಲ್ಲಿ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಸಂಸ್ಥೆಗಳು ಹರ್ಷಿಕಾಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕೊರೊನಾ ಸಮಯದಲ್ಲಿ, ಲಾಕ್ ಡೌನ್ ಆದ ಸಂದರ್ಭದಲ್ಲಿ, ಭುವನಂ ಫೌಂಡೇಷನ್ ವತಿಯಿಂದ, ಬಡವರು, ನಿರ್ಗತಿಕರಿಗೆ ಹದಿನೈದು ದಿನಗಳಿಗೆ ಆಗುವಷ್ಟು ಆಹಾರ ಪದಾರ್ಥಗಳ ಕಿಟ್ಗಳನ್ನು ವಿತರಣೆ ಮಾಡಿದರು. ಈ ಸೇವೆಯನ್ನ ಗುರುತಿಸಿ, ಪ್ರತಿಷ್ಠಿತ ಮದರ್ ತೆರೆಸಾ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿಯನ್ನ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣನಿಗೆ ನೀಡಲಾಗಿದೆ.
ಸದ್ಯ ಹರ್ಷಿಕಾ ಪೂಣಚ್ಚಾ ಕನ್ನಡ, ತೆಲುಗು, ಕೊಂಕಣಿ, ತಮಿಳು, ಭೋಜ್ ಪುರಿ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಕನ್ನಡದಲ್ಲಿ ರಾಘವೇಂದ್ರ ರಾಜ್ ಕುಮಾರ್ ಜೊತೆ ಸ್ತಬ್ಧ ಎನ್ನುವ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಸಾಂಸ್ಕೃತಿಕ ನಗರಿಯಲ್ಲಿ ಹೊಯ್ಸಳ ಚಿತ್ರೀಕರಣ.. ಆ್ಯಕ್ಷನ್ ಮೂಡ್ನಲ್ಲಿ ಡಾಲಿ