ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದರು. ಬಜರಂಗಿ ಧ್ವಜಗಳ ಪ್ರದರ್ಶನದ ಮೂಲಕ ಕಾರ್ಯಕರ್ತರು ಮೋದಿಗೆ ಸ್ವಾಗತ ಕೋರುವ ಮೂಲಕ ಕಾಂಗ್ರೆಸ್ನ ಬಜರಂಗದಳ ನಿಷೇಧ ಪ್ರಸ್ತಾಪಕ್ಕೆ ಟಕ್ಕರ್ ನೀಡಿದ್ದಾರೆ.
ಜೆಪಿ ನಗರ 5ನೇ ಹಂತದಿಂದ ಆರಂಭಗೊಂಡ ಮೋದಿ ರೋಡ್ ಶೋಗೆ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಂಡು ಮೋದಿಗೆ ಪುಷ್ಪಮಳೆ ಸುರಿಸಿದರು. ಈವರೆಗಿನ ರೋಡ್ ಶೋಗಳಲ್ಲಿ ಕೇವಲ ಬಿಜೆಪಿ ಧ್ವಜ ಹಾಗೂ ಭಗವಾಧ್ವಜ ರಾರಾಜಿಸುತ್ತಿದ್ದವು. ಆದರೆ, ಇಂದು ಇವುಗಳ ಜೊತೆ ಬಜರಂಗಿ ಧ್ವಜ ಸೇರ್ಪಡೆಯಾಗಿದೆ. ಎಲ್ಲೆಡೆ ಬಜರಂಗಿ ಧ್ವಜಗಳನ್ನೇ ಪ್ರದರ್ಶನ ಮಾಡಿ ಬಜರಂಗದಳಕ್ಕೆ ಬೆಂಬಲ ವ್ಯಕ್ತಪಡಿಸಲಾಗಿದೆ. ರೋಡ್ ಶೋನಲ್ಲಿ ಹಲವರು ಬಜರಂಗದಳದ ಮುಖವಾಡ ಧರಿಸಿದ್ದೂ ಕೂಡಾ ಕಂಡು ಬಂದಿತು.
-
ಬಜರಂಗಿ... ಬಜರಂಗಿ.. ಎಲ್ಲೆಲ್ಲೂ ಬಜರಂಗಿ...
— BJP Karnataka (@BJP4Karnataka) May 6, 2023 " class="align-text-top noRightClick twitterSection" data="
ಕಾಂಗ್ರೆಸ್ಗೆ ತಕ್ಕ ಉತ್ತರ ನೀಡುತ್ತಿರುವ ಬೆಂಗಳೂರಿಗರು...#NammaBengaluralliNammaModi #PoornaBahumata4BJP pic.twitter.com/H2Q7MqaUeU
">ಬಜರಂಗಿ... ಬಜರಂಗಿ.. ಎಲ್ಲೆಲ್ಲೂ ಬಜರಂಗಿ...
— BJP Karnataka (@BJP4Karnataka) May 6, 2023
ಕಾಂಗ್ರೆಸ್ಗೆ ತಕ್ಕ ಉತ್ತರ ನೀಡುತ್ತಿರುವ ಬೆಂಗಳೂರಿಗರು...#NammaBengaluralliNammaModi #PoornaBahumata4BJP pic.twitter.com/H2Q7MqaUeUಬಜರಂಗಿ... ಬಜರಂಗಿ.. ಎಲ್ಲೆಲ್ಲೂ ಬಜರಂಗಿ...
— BJP Karnataka (@BJP4Karnataka) May 6, 2023
ಕಾಂಗ್ರೆಸ್ಗೆ ತಕ್ಕ ಉತ್ತರ ನೀಡುತ್ತಿರುವ ಬೆಂಗಳೂರಿಗರು...#NammaBengaluralliNammaModi #PoornaBahumata4BJP pic.twitter.com/H2Q7MqaUeU
ಕಾಡು ಮಲ್ಲೇಶ್ವರ ದೇವಸ್ಥಾನದತ್ತ ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಕಾರ್ಯಕರ್ತರು, ಬಜರಂಗಿಯ ಮುಖವಾಡ ಧರಿಸಿ ಜೈ ಶ್ರೀರಾಮ್ ಜೈ ಶ್ರೀರಾಮು ಮತ್ತು ಜೈ ಭಜರಂಗಿ ಎಂದು ಘೋಷಣೆ ಮೊಳಗಿಸಿದರು. ಇದೇ ಮೊದಲ ಬಾರಿಗೆ ಬಜರಂಗಧ್ವಜಗಳು ಹಾಗೂ ಮುಖವಾಡಗಳು ಮೋದಿ ರೋಡ್ ಶೋನಲ್ಲಿ ರಾರಾಜಿಸಿದ್ದು, ಇಡೀ ರೋಡ್ ಶೋವನ್ನ ಬಜರಂಗಿಮಯ ಮಾಡಿ ಬಜರಂಗದಳಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಬಹಿರಂಗವಾಗಿಯೇ ನಾವು ಬಜರಂಗಿಗಳು ಎನ್ನುವ ಘೋಷಣೆ ಕೂಗಿ ಕಾಂಗ್ರೆಸ್ಗೆ ಕೌಂಟರ್ ನೀಡಿದರು.
ಆಯಾ ವಿಧಾನಸಭಾ ಕ್ಷೇತ್ರಗಳಿಗೆ ರೋಡ್ ಶೋ ಬರುತ್ತಿದ್ದಂತೆ ಆಯಾ ಕ್ಷೇತ್ರದ ಅಭ್ಯರ್ಥಿಗಳು ರೋಡ್ ಶೋಗೆ ಸ್ವಾಗತ ಕೋರಿದರು. ವಿಜಯನಗರ ಕ್ಷೇತ್ರದ ಅಭ್ಯರ್ಥಿ ರವೀಂದ್ರ ಮೋದಿ ರೋಡ್ ಶೋಗೆ ಹರ್ಷ ವ್ಯಕ್ತಪಡಿಸಿದ್ದು, ಮೋದಿ ಆಗಮನದಿಂದ ನಮಗೆ ಮತ್ತಷ್ಟು ಶಕ್ತಿ ಬಂದಿದೆ. ಕಳೆದ ಬಾರಿ ಕಡಿಮೆ ಅಂತರದ ಸೋಲಾಗಿತ್ತು. ಈ ಬಾರಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕರ್ತರಲ್ಲೂ ಕೂಡ ಮೋದಿ ರೋಡ್ ಶೋ ಎಲ್ಲಿಲ್ಲದ ಖುಷಿ ತಂದಿದೆ. ಹತ್ತಿರದಿಂದ ಮೋದಿ ಅವರನ್ನು ನೋಡುವ ಅವಕಾಶ ಸಿಕ್ಕಿದೆ. ಮೋದಿ ಸರ್ವಶ್ರೇಷ್ಠ ನಾಯಕ, ಅವರಿಗೆ ಸ್ವಂತ ಕುಟುಂಬ ಇಲ್ಲ. ದೇಶವೇ ಅವರ ಕುಟುಂಬ, ದೇಶಕ್ಕಾಗಿ ಕೆಲಸ ಮಾಡುತ್ತಿರುವ ವಿಶ್ವಗುರು ಅವರು ಎಂದು ಅಭಿಮಾನದ ನುಡಿಗಳನ್ನಾಡಿದರು.
-
#NammaBengaluralliNammaModi #PoornaBahumata4BJP pic.twitter.com/YsQ3jMehEz
— BJP Karnataka (@BJP4Karnataka) May 6, 2023 " class="align-text-top noRightClick twitterSection" data="
">#NammaBengaluralliNammaModi #PoornaBahumata4BJP pic.twitter.com/YsQ3jMehEz
— BJP Karnataka (@BJP4Karnataka) May 6, 2023#NammaBengaluralliNammaModi #PoornaBahumata4BJP pic.twitter.com/YsQ3jMehEz
— BJP Karnataka (@BJP4Karnataka) May 6, 2023
ಮೋದಿ ಮೋದಿ ಎನ್ನುವ ಜಯಕಾರಗಳನ್ನು ಮೊಳಗಿಸಿ ಮೋದಿಗೆ ನಮನ ಸಲ್ಲಿಸಿದರು. ಈ ಬಾರಿ ಮತ್ತೊಮ್ಮೆ ಬಿಜೆಪಿ ಎನ್ನುವ ಘೋಷಣೆ ಕೂಗಿದರು. ನಿವೇಶನ ಬೆಲೆ ಹೆಚ್ಚಾಗುತ್ತಿರುವಾಗ ಗ್ಯಾಸ್ ಬೆಲೆ ಹೆಚ್ಚಾಗಬಾರದೇ ಎಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಇನ್ನು ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ಕಾರ್ಯಕರ್ತರು, ರೋಡ್ ಶೋ ಸಮರ್ಥಿಸಿಕೊಂಡರು.
-
ಪ್ರಧಾನ ಸೇವಕ @narendramodi
— BJP Karnataka (@BJP4Karnataka) May 6, 2023 " class="align-text-top noRightClick twitterSection" data="
ಮಕ್ಕಳು ಮೆಚ್ಚುವ ನರೇಂದ್ರ ಮೋದಿ
ಹಿರಿಯರು ಹರಸುವ ನರೇಂದ್ರ ಮೋದಿ
ದೇಶದ ಹೆಮ್ಮೆಯೇ ನರೇಂದ್ರ ಮೋದಿ!
PM Shri Narendra Modi is adored by children, blessed by elders, and insignia of national pride.#NammaBengaluralliNammaModi #PoornaBahumata4BJP pic.twitter.com/HJIYO2lBju
">ಪ್ರಧಾನ ಸೇವಕ @narendramodi
— BJP Karnataka (@BJP4Karnataka) May 6, 2023
ಮಕ್ಕಳು ಮೆಚ್ಚುವ ನರೇಂದ್ರ ಮೋದಿ
ಹಿರಿಯರು ಹರಸುವ ನರೇಂದ್ರ ಮೋದಿ
ದೇಶದ ಹೆಮ್ಮೆಯೇ ನರೇಂದ್ರ ಮೋದಿ!
PM Shri Narendra Modi is adored by children, blessed by elders, and insignia of national pride.#NammaBengaluralliNammaModi #PoornaBahumata4BJP pic.twitter.com/HJIYO2lBjuಪ್ರಧಾನ ಸೇವಕ @narendramodi
— BJP Karnataka (@BJP4Karnataka) May 6, 2023
ಮಕ್ಕಳು ಮೆಚ್ಚುವ ನರೇಂದ್ರ ಮೋದಿ
ಹಿರಿಯರು ಹರಸುವ ನರೇಂದ್ರ ಮೋದಿ
ದೇಶದ ಹೆಮ್ಮೆಯೇ ನರೇಂದ್ರ ಮೋದಿ!
PM Shri Narendra Modi is adored by children, blessed by elders, and insignia of national pride.#NammaBengaluralliNammaModi #PoornaBahumata4BJP pic.twitter.com/HJIYO2lBju
ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಪ್ರಧಾನಿ ಮೋದಿ ರೋಡ್ ಶೋ : 34 ರಸ್ತೆಗಳು ಬಂದ್
ಪ್ರಧಾನಿ ಮೋದಿ ಜೆಪಿ ನಗರದ ಬ್ರಿಗೇಡ್ ಮಿಲೇನಿಯಂನಿಂದ ಸರ್ಕಲ್ ಮಾರಮ್ಮ ದೇವಸ್ಥಾನದವರೆಗೆ ಅಂದರೆ ಬರೋಬ್ಬರಿ 26 ಕಿ.ಮೀ. ರೋಡ್ ಶೋ ನಡೆಸಿದರು. ರೋಡ್ ಶೋ ಆರಂಭಕ್ಕೂ ಮುನ್ನ ಸಂಸದರಾದ ತೇಜಸ್ವಿ ಸೂರ್ಯ, ಸದಾನಂದಗೌಡ, ಪಿ.ಸಿ. ಮೋಹನ್ ಹಾಗೂ ಯಶವಂತಪುರ ಶಾಸಕ ಹಾಗೂ ಸಚಿವ ಎಸ್.ಟಿ ಸೋಮಶೇಖರ್ ಮತ್ತಿತರರು ಜೆ.ಪಿ. ನಗರದಲ್ಲಿ ಪ್ರಧಾನಿ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಕಾರಿನ ಮೂಲಕ ಜೆ.ಪಿ. ನಗರದ ಲೊಯೊಲಾ ಕಾಲೇಜು ಹೆಲಿಪ್ಯಾಡ್ನಿಂದ ಆಗಮಿಸಿದ ಮೋದಿಗೆ ಕಲಾತಂಡಗಳ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ರೋಡ್ ಶೋ ಆರಂಭವಾವಾಗುತ್ತಿದ್ದಂತೆ ಹೂವಿನ ಮಳೆಗರೆದು ಅಭಿಮಾನಿಗಳು ಅಭಿಮಾನ ಮೆರೆದರು.