ETV Bharat / state

ಆರೋಪಿ ಸಂಬಂಧಿಕರು ತನಿಖೆಗೆ ಅಡ್ಡಿಪಡಿಸಿದ ಕಾರಣಕ್ಕೆ ಜಾಮೀನು ರದ್ದು ಸಾಧ್ಯವಿಲ್ಲ: ಹೈಕೋರ್ಟ್

ಅರ್ಜಿದಾರರ ಸಹೋದರ ರಿಯಾಜ್ ಮತ್ತು ಅವರ ಪತ್ನಿ ಪ್ರಕರಣದ ಎರಡನೇ ಆರೋಪಿಗೆ ವಿವಿಧ ಸಂಖ್ಯೆಗಳ ಫೋನ್​​ಗಳಿಂದ ಕರೆ ಮಾಡಿ ವಿಚಾರಣೆಗೆ ಸಹಕರಿಸದಂತೆ ಒತ್ತಡ ಹೇರಿದ್ದರು. ಈ ಸಂಬಂಧ ತನಿಖಾಧಿಕಾರಿಗಳು ಜಾಮೀನು ಮಂಜೂರಾದ ಸಂದರ್ಭದಲ್ಲಿ ವಿಧಿಸಿರುವ ಷರತ್ತುಗಳನ್ನು ಪ್ರತಿವಾದಿ ಉಲ್ಲಂಘಿಸಿದ್ದು, ಜಾಮೀನು ರದ್ದು ಮಾಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

author img

By

Published : Nov 28, 2022, 12:14 PM IST

ಆರೋಪಿಯ ಸಂಬಂಧಿಕರು ತನಿಖೆಗೆ ಅಡ್ಡಿಪಡಿಸಿದ ಕಾರಣಕ್ಕೆ ಜಾಮೀನು ರದ್ದು ಸಾಧ್ಯವಿಲ್ಲ: ಹೈಕೋರ್ಟ್
Bail cannot be revoked because relatives of accused obstruct investigation: HC

ಬೆಂಗಳೂರು : ಕ್ರಿಮಿನಲ್ ಪ್ರಕರಣದಲ್ಲಿ ಜಾಮೀನು ಪಡೆದಿರುವ ಆರೋಪಿಯ ಸಂಬಂಧಿಕರು ತನಿಖೆಗೆ ಸಹಕರಿಸದಂತೆ ಇತರೆ ಆರೋಪಿಗಳಿಗೆ (ಎರಡನೇ ಆರೋಪಿ) ಬೆದರಿಕೆ ಹಾಕಿದಲ್ಲಿ, ಅದೇ ಕಾರಣಕ್ಕೆ ಆರೋಪಿಯ ಜಾಮೀನು ರದ್ದು ಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟ ಪಡಿಸಿದೆ.

ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್) ಕಾಯಿದೆಯಡಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ರಾಯಚೂರು ಮೂಲದ ಅಬ್ದುಲ್ ಖಾದಿರ್ ಘೌಸ್ ಪೀರ್ ಎಂಬುವರ ಜಾಮೀನು ರದ್ದು ಮಾಡುವಂತೆ ಕೋರಿ ಮಾದಕ ವಸ್ತುಗಳ ನಿಯಂತ್ರಣ ಕಚೇರಿಯ ಗುಪ್ತಚರ ಅಧಿಕಾರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ, ಆರೋಪಿ ವಿರುದ್ಧ ಬಲವಾದ ಸಾಕ್ಷ್ಯಗಳಿದ್ದಲ್ಲಿ ಮಾತ್ರ ಜಾಮೀನು ರದ್ದು ಮಾಡಬಹುದು ಎಂದು ತಿಳಿಸಿದೆ. ಅಲ್ಲದೇ, ಸುಪ್ರೀಂಕೋರ್ಟ್‌ನ ವಿವಿಧ ಆದೇಶಗಳನ್ನು ಪ್ರಸ್ತಾಪಿಸಿರುವ ನ್ಯಾಯಪೀಠ, ಆರೋಪಿತರ ಸಂಬಂಧಿಕರು ತನಿಖೆ/ವಿಚಾರಣೆಗೆ ಅಡ್ಡಿ ಪಡಿಸಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ವಿನಃ, ಆರೋಪಿಗೆ ಮಂಜೂರಾಗಿರುವ ಜಾಮೀನು ರದ್ದು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಅಬ್ದುಲ್‌ಖಾದಿರ್ ಘೌಸ್ ಪೀರ್ ಎಂಬುವರ ರಾಯಚೂರಿನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ವಿದೇಶದಿಂದ ನಿಷೇಧಿತ ಮೆಥೈಲೆನೆಡಿಯೋಕ್ಸಿ-ಮೆಥಾಂಫೆಟಮೈನ್ (ಎಂಡಿಎಂಎ) ರವಾನೆಯಾಗಿತ್ತು. ಈ ಬಗ್ಗೆ ಮಾಹಿತಿಯ ಮೇರೆಗೆ ಬೆಂಗಳೂರಿನ ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಗೆ ಭೇಟಿ ನೀಡಿದ್ದ ಎನ್​ಸಿಬಿ ಅಧಿಕಾರಿಗಳು ಸುಮಾರು 1.5 ಕೆಜಿಯಷ್ಟು ನಿಷೇಧಿತ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದರು.

ಬಳಿಕ ರಾಯಚೂರಿಗೆ ಹೋಗಿ ಅರ್ಜಿದಾರರನ್ನು ವಿಚಾರಣೆ ನಡೆಸಿ ಬಂಧನಕ್ಕೊಳಪಡಿಸಿದ್ದರು. ಪ್ರತಿವಾದಿಯನ್ನು ಮೊದಲ ಆರೋಪಿ, ಅವರ ಬಳಿ ಕೆಲಸ ಮಾಡುತ್ತಿದ್ದವನನ್ನು ಎರಡನೇ ಆರೋಪಿಯನ್ನಾಗಿ ಮಾಡಿದ್ದರು. ಮೊದಲ ಪ್ರತಿವಾದಿ ಜಾಮೀನು ಪಡೆದುಕೊಂಡಿದ್ದರು. ಆದರೆ, ಎರಡನೇ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ನಡುವೆ, ಅರ್ಜಿದಾರರ ಸಹೋದರ ರಿಯಾಜ್ ಮತ್ತು ಅವರ ಪತ್ನಿ ಪ್ರಕರಣದ ಎರಡನೇ ಆರೋಪಿಗೆ ವಿವಿಧ ಸಂಖ್ಯೆಗಳ ಫೋನ್​​ಗಳಿಂದ ಕರೆ ಮಾಡಿ ವಿಚಾರಣೆಗೆ ಸಹಕರಿಸದಂತೆ ಒತ್ತಡ ಹೇರಿದ್ದರು. ಈ ಸಂಬಂಧ ಜಾಮೀನು ಮಂಜೂರಾದ ಸಂದರ್ಭದಲ್ಲಿ ವಿಧಿಸಿರುವ ಷರತ್ತುಗಳನ್ನು ಪ್ರತಿವಾದಿ ಉಲ್ಲಂಘಿಸಿದ್ದು, ಜಾಮೀನು ರದ್ದು ಮಾಡಬೇಕು ಎಂದು ತನಿಖಾಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ವಾದ - ಪ್ರತಿವಾದ: ಎನ್​ಸಿಬಿ ಗುಪ್ತಚರ ಅಧಿಕಾರಿಗಳ ಪರ ವಾದ ಮಂಡಿಸಿದ ವಕೀಲರು, ವಿದೇಶದಿಂದ ಬಂದಿರುವ ವಸ್ತು ಪ್ರತಿವಾದಿಗೆ ಬಂದಿದೆ. ಅವರು ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶ ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಷರತ್ತುಗಳಲ್ಲಿ ಸಾಕ್ಷ್ಯಾಧಾರ ನಾಶ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಸೂಚನೆ ನೀಡಲಾಗಿತ್ತು.

ಆದರೆ, ಪ್ರತಿವಾದಿ ಸಹೋದರ ಮತ್ತವರ ಪತ್ನಿ ಪ್ರಕರಣದ ಎರಡನೇಯ ಆರೋಪಿಗೆ ತನಿಖೆ ಸಹಕರಿಸದಂತೆ ಒತ್ತಡ ಹೇರಿದ್ದಾರೆ. ಈ ಸಂಬಂಧ ಎರಡನೇ ಆರೋಪಿ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದು, ಅದನ್ನು ದಾಖಲಿಸಲಾಗಿದೆ. ಇದು ಸಹ ಆರೋಪಿಗೆ ಬೆದರಿಕೆ ಹಾಕಿ ತನಿಖೆ ಅಡ್ಡಿ ಪಡಿಸಲಾಗಿರುವ ಆರೋಪವಾಗಿದ್ದು, ಜಾಮೀನು ರದ್ದು ಮಾಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಪ್ರತಿವಾದಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹಸ್ಮತ್ ಪಾಷಾ, ಪ್ರಕರಣದಲ್ಲಿ ತನಿಖೆಗೆ ಸಹಕರಿಸದಂತೆ ಬೆದರಿಕೆ ಹಾಕಲಾಗಿದೆ ಎಂದು ಹೇಳಿಕೆ ನೀಡಿರುವವರು ಸಾಕ್ಷಿ ಅಲ್ಲ. ಬದಲಿಗೆ ಎರಡನೇ ಆರೋಪಿಯಾಗಿದ್ದಾರೆ. ಪ್ರತಿವಾದಿ ಬೆದರಿಕೆ ಹಾಕಿಲ್ಲ. ಬದಲಿಗೆ ಅವರ ಸಹೋದರ‌ನ ಮೇಲಿನ ಆರೋಪವಾಗಿದೆ.

ಅಲ್ಲದೇ ಎರಡನೆಯ ಆರೋಪಿ 2021ರ ನವೆಂಬರ್ ನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಎಲ್ಲ ಸಾಕ್ಷ್ಯಗಳನ್ನು ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಹೀಗಿರುವಾಗ ಸಾಕ್ಷ ನಾಶದ ಆರೋಪ ಬರುವುದಿಲ್ಲ. ಹೀಗಾಗಿ ಈಗಾಗಲೇ ಮಂಜೂರಾಗಿರುವ ಜಾಮೀನು ರದ್ದು ಪಡಿಸುವುದಕ್ಕೆ ಅವಕಾಶವಿಲ್ಲ. ಅದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ: ಟೀಕೆಯ ಭಯದಿಂದ ಜಾಮೀನು ನೀಡಲು ಹಿಂಜರಿಕೆ: ಸಿಜೆಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.