ETV Bharat / state

ಇವಿಎಂ ಬಗ್ಗೆ ಅನುಮಾನ ಇದೆ, ಅದನ್ನು ಕೈಬಿಟ್ಟು ಬ್ಯಾಲೆಟ್​ ಪೇಪರ್​ ಬಳಸಬೇಕು: ಸಿದ್ದರಾಮಯ್ಯ

ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಿಣಿ ಸಭೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ಈ ಒಂದು ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ಇವಿಎಂ ಮಷಿನ್​​ ಕೈ ಬಿಟ್ಟು, ಬ್ಯಾಲೆಟ್​​ ಪೇಪರ್​​ ತರುತ್ತಿದ್ದೆ ಎಂದಿದ್ದಾರೆ.

ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಣಿ ಸಭೆ
author img

By

Published : Sep 9, 2019, 4:39 PM IST

Updated : Sep 9, 2019, 5:25 PM IST

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಿಣಿ ಸಭೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ಈ ಒಂದು ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ಇವಿಎಂ ಮಷಿನ್ ಕೈ ಬಿಡುತ್ತಿದೆ. ಚುನಾವಣಾ ಆಯೋಗದವರು ಬದಲಾವಣೆ ಮಾಡಬೇಕು. ಇವಿಎಂ ಯಂತ್ರದ ಬದಲು ಬ್ಯಾಲೆಟ್ ಪೇಪರ್ ಬರಬೇಕು ಎಂದಿದ್ದಾರೆ.

ಅಮೆರಿಕಾ, ರಷ್ಯಾ, ಯುರೋಪ್ ಅಂತಹ ದೇಶಗಳಲ್ಲಿ ಇವಿಎಂ ತಿರಸ್ಕಾರ ಮಾಡಿದ್ದಾರೆ. ರಾಜ್ಯದ ನೆರೆ-ಬರ ಸಮಸ್ಯೆಗೆ ಒಂದು ಪೈಸೆ ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಯಡಿಯೂರಪ್ಪ ಒಲ್ಲದ ಶಿಶು. ಅಕ್ರಮವಾಗಿ ಸರ್ಕಾರ ರಚನೆ ಮಾಡಿದ್ದಾರೆ. ಧಮ್ಕಿ ಹಾಕಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿಯವರಿಗೂ ಯಡಿಯೂರಪ್ಪಗೆ ಸಿಎಂ ಮಾಡೋ ಮನಸ್ಸಿರಲಿಲ್ಲ. ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನೂ ವಿಷ ಕುಡಿದ ಮಕ್ಳು ಬದುಕ್ತಾವಾ? ಎಂದು ಹೇಳುವ ಮೂಲಕ ಯಡಿಯೂರಪ್ಪ ಹಾಗೂ ಅವರ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದರು. ನಳೀನ್ ಕುಮಾರ್ ಕಟೀಲ್​​ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ರಾಜ್ಯದ ದೌರ್ಭಾಗ್ಯ ಎಂದರು. ಮೋದಿ ಎಲ್ಲ ಸಂಸ್ಥೆಯನ್ನು ತಮ್ಮ ಹಿಡಿತಕ್ಕೆ ಪಡೆದಿದ್ದಾರೆ. ಸರ್ವಾಧಿಕಾರ ದೇಶದಲ್ಲಿದೆ. ದೇಶ ಉಳಿಸಲು ನಾವು ಬೀದಿ ಗಿಳಿಯೋಣ, ನಮಗೆ ಭವಿಷ್ಯ ಇದೆ. ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜನ ಬಿಜೆಪಿಗೆ ಪಾಠ ಕಲಿಸಲು ಕಾದಿದ್ದಾರೆ. 17 ಕ್ಷೇತ್ರದ ಉಪಚುನಾವಣೆಯಲ್ಲಿ ಬಹುತೇಕ ಸ್ಥಾನ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.

ಬಿಎಸ್​ವೈ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ:

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾವು ಕಳೆದ ಚುನಾವಣೆಯ ಸೋಲನ್ನು ಸರಿಯಾಗಿ ವಿಷ್ಲೇಶಿಸಲಾಗುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲೂ ಹಿನ್ನಡೆ ಆಯಿತು. ನಮಗೆ ವಿಧಾನಸಭೆಯಲ್ಲಿ ಮತ ಹೆಚ್ಚು ಬಂದರೂ, ಸೀಟು ಕಡಿಮೆ ಆಯಿತು. ಇದು‌ ಪ್ರಜಾಪ್ರಭುತ್ವದ ವಿಪರ್ಯಾಸ, ಏನೇ ಬಂದರೂ ಒಪ್ಪಬೇಕು. ಭಾವನಾತ್ಮಕ ವಿಚಾರ ಮುಂದಿಟ್ಟ ಕಾರಣ, ನಮ್ಮ ಸರ್ಕಾರದ ಕಾರ್ಯ ಗೌಣವಾಯಿತು. ಕೊಟ್ಟ ಮಾತಂತೆ ನಡೆದುಕೊಂಡ ಸರ್ಕಾರ ನಮ್ಮದು. ನಾವು ಪರಿಣಾಮಕಾರಿಯಾಗಿ ಜನರನ್ನು ತಲುಪಲು ಆಗಲಿಲ್ಲ. ಅವರ ಅಪಪ್ರಚಾರಕ್ಕೆ ಸರಿಯಾದ ಪ್ರತ್ಯುತ್ತರ ನೀಡಲಿಲ್ಲ. ಇವಿಎಂ ಮೇಲೆ ನನಗೆ ಈಗಲೂ ಅನುಮಾನ ಇದೆ. 14 ತಿಂಗಳು ಮೈತ್ರಿ ಸರ್ಕಾರ ಮಾಡಿದ್ದೆವು. ನಮ್ಮ 14 ಹಾಗೂ ಜೆಡಿಎಸ್​​ನ 3 ಶಾಸಕರನ್ನು ಬಿಜೆಪಿಯವರು ಸೆಳೆದರು. ಆಪರೇಷನ್ ಕಮಲಕ್ಕೆ ಸರ್ಕಾರ ಬಿತ್ತು. ಸ್ವಯಂ ಪ್ರೇರಣೆಯಿಂದ ಶಾಸಕರು ರಾಜೀನಾಮೆ ನೀಡಿರಲಿಲ್ಲ. ಯಡಿಯೂರಪ್ಪ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದರು.

ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಣಿ ಸಭೆ

ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಪಕ್ಷ:

ರಾಜ್ಯಸರ್ಕಾರ ಬಂದು ಒಂದೂವರೆ ತಿಂಗಳು, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದು 100 ದಿನ ಆಗಿದೆ. ಹಿಂದೆ ಕೂಡ ಏನೂ ಮಾಡಿರಲಿಲ್ಲ, ಈಗೂ ಆಗಿಲ್ಲ. ಮೋದಿಯ ಐದು ವರ್ಷದ ಆಡಳಿತದ ಫಲವಾಗಿ ಜಿಡಿಪಿ ಶೇ. 5 ಕ್ಕೆ ಕುಸಿದಿದೆ. ಇದು ವಾಸ್ತವವಾಗಿ ಶೇ. 3.5 ಆಗಿದೆ ಎಂದರು. ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಪಕ್ಷ. ನಾವು ನೀಡಿದ ಸಾಮಾಜಿಕ ನ್ಯಾಯವನ್ನು ಕಿತ್ತು ಹಾಕಿದ್ದಾರೆ. ಸಮಾನತೆ ಯಾವಾಗ ಬರಲಿದೆ. ಅಧಿಕಾರ, ಸಂಪತ್ತಿನಲ್ಲಿ ಎಲ್ಲರಿಗೂ ಪಾಲು ಸಿಗದಿದ್ದರೆ ಸಾಮಾಜಿಕ ನ್ಯಾಯ ಹೇಗೆ ಬರುತ್ತದೆ. ಇದನ್ನು ನಾವು ಜನರಿಗೆ ತಿಳಿಸಬೇಕು. ಸತ್ಯವನ್ನು ನಾವು ಹೇಳುವುದಕ್ಕೆ ಆಗದಿದ್ದರೆ ಹೇಗೆ? ಹೇಳಿಲ್ಲ ಎಂಬ ಕೊರಗು ನನ್ನದು. ಕಾಂಗ್ರೆಸ್ ಪಕ್ಷ ನಾಲ್ಕು ಗೋಡೆ ಮಧ್ಯ ಇರುವುದನ್ನು ಬಿಡಬೇಕು, ಬೀದಿಗಿಳಿಯಬೇಕು ಎಂದಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಇಂದಿನ ಆರ್ಥಿಕ ಕುಸಿತ ಮೋದಿ ಸರ್ಕಾರದ ಕೆಟ್ಟ ನಿರ್ಧಾರದಿಂದ ಆಗಿದ್ದು, 100 ದಿನದ ಸಾಧನೆ ಬಗ್ಗೆ ಮಾತಾಡುತ್ತಿದ್ದಾರೆ. ನೋಟು ಅಮಾನ್ಯ, ಅವೈಜ್ಞಾನಿಕ ಜಿಎಸ್​ಟಿ ಇಂದಾಗಿ ದೇಶದ ಆರ್ಥಿಕ ಸ್ಥಿತಿ ಕುಸಿದಿದೆ ಎಂದು ಆರ್​​ಬಿಐ ಹೇಳಿದೆ. ರಾಜ್ಯದಲ್ಲಿ ಹಿಂಬಾಗಿಲಿಂದ ಅಧಿಕಾರ ಹಿಡಿದ ಬಿಜೆಪಿ ಜನ ವಿರೋಧಿ ನೀತಿ ವಿರುದ್ಧ ದನಿ ಎತ್ತಬೇಕಿದೆ ಎಂದರು.

Intro:newsBody:ಕೆಪಿಸಿಸಿ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಣಿ ಸಭೆ, ಬಿಜೆಪಿ ವಿರುದ್ಧ ಆಕ್ರೋಶ ಸ್ಫೋಟ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಿಣಿ ಸಭೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು.
ರಾಜ್ಯದ 17 ಕ್ಷೇತ್ರಕ್ಕೆ ನಡೆಯಲ್ಲಿರುವ ಉಪಚುನಾವಣೆ ಗೆಲುವಿನ ಸಂಬಂಧ ತಂತ್ರಗಾರಿಕೆ ರೂಪಿಸಲು ಕಾಂಗ್ರೆಸ್ ಪಕ್ಷ ಈ ಮಹತ್ವದ ಸಭೆ ಹಮ್ಮಿಕೊಂಡಿದ್ದು, ಮೈತ್ರಿ ಸರಕಾರ ಪತನಕ್ಕೆ ಕಾರಣವಾದ 17 ಶಾಸಕರ ರಾಜೀನಾಮೆ ಹಾಗೂ ಅವರ ಅನರ್ಹತೆಯಿಂದ ತೆರವಾಗಿರುವ ಕ್ಷೇತ್ರಕ್ಕೆ ಸದ್ಯವೇ ಚುನಾವಣೆ ನಡೆಯಲಿದ್ದು ಎಲ್ಲಾ 17 ಕ್ಷೇತ್ರವನ್ನು ಗೆಲ್ಲುವ ಸಂಬಂಧ ಯೋಜನೆ ರೂಪಿಸುವ ಮಹತ್ವದ ಚರ್ಚೆ ನಡೆದಿದೆ. ಎಲ್ಲಾ 17 ಕ್ಷೇತ್ರಗಳ ಉಪಚುನಾವಣೆ ಪೂರ್ವಭಾವಿ ಚರ್ಚೆ ಸಂಬಂಧ ಕೆಪಿಸಿಸಿ ಈ ಸಭೆ ಹಮ್ಮಿಕೊಂಡಿತ್ತು.
ಕಾರ್ಯಕಾರಿಣಿ ಸಭೆಯಲ್ಲಿ ಎಐಸಿಸಿ ರಾಜ್ಯ ಓಬಿಸಿ ಘಟಕಗಳ ಉಸ್ತುವಾರಿ ಆಗಿರುವ ರೋತೋಸ್ ಬಸಯ್ಯ, ಹೈದರಾಬಾದ್, ಚೆನ್ನೈ ಉಸ್ತುವಾರಿ ರೆಡ್ಡಿ ಆಗಮಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಕೆಪಿಸಿಸಿ ಓಬಿಸಿ ಘಟಕದ ಅಧ್ಯಕ್ಷ ಎಂ ಡಿ ಲಕ್ಷ್ಮಿನಾರಾಯಣ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾವು ಕಳೆದ ಚುನಾವಣೆ ಸೋಲನ್ನು ಸರಿಯಾಗಿ ವಿಷ್ಲೇಷಿಸಲಾಗುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲೂ ಹಿನ್ನಡೆ ಆಯಿತು. ನಮಗೆ ಶೇಕಡಾವಾರು ಮತ ವಿಧಾನಸಭೆ ಯಲ್ಲಿ ಮತ ಹೆಚ್ಚು ಬಂದರೂ, ಸೀಟು ಕಡಿಮೆ ಆಯಿತು. ಇದು‌ ಪ್ರಜಾಪ್ರಭುತ್ವದ ವಿಪರ್ಯಾಸ, ಏನೇ ಬಂದರೂ ಒಪ್ಪಬೇಕು. ಭಾವನಾತ್ಮಕ ವಿಚಾರ ಮುಂದಿಟ್ಟ ಕಾರಣ ನಮ್ಮ ಸರ್ಕಾರದ ಕಾರ್ಯ ಗೌಣವಾಯಿತು. ಕೊಟ್ಟ ಮಾತಂತೆ ನಡೆದುಕೊಂಡ ಸರ್ಕಾರ ನಮ್ಮದು. ನಾವು ಪರಿಣಾಮಕಾರಿಯಾಗಿ ಜನರನ್ನು ತಲುಪಲು ಆಗಲಿಲ್ಲ. ಅವರ ಅಪಪ್ರಚಾರಕ್ಕೆ ಸರಿಯಾದ ಪ್ರತ್ಯುತ್ತರ ನೀಡಲಿಲ್ಲ. ಇವಿಎಂ ಮೇಲೆ ನನಗೆ ಈಗಲೂ ಅನುಮಾನ ಇದೆ. 14 ತಿಂಗಳು ಮೈತ್ರಿ ಸರ್ಕಾರ ಮಾಡಿದ್ದೆವು. ನಮ್ಮ 14 ಹಾಗೂ ಜೆಡಿಎಸ್ ನ 3 ಶಾಸಕರನ್ನು ಬಿಜೆಪಿಯವರು ಸೆಳೆದರು. ಆಪರೇಷನ್ ಕಮಲಕ್ಕೆ ಸರ್ಕಾರ ಬಿತ್ತು. ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿರಲಿಲ್ಲ ಶಾಸಕರು. ಅವರು ಅನರ್ಹರಾಗಿದ್ದಾರೆ. ಯಡಿಯೂರಪ್ಪ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಡಿಸಿಎಂ, ಸ್ಪೀಕರ್, ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಇವರ ಇಷ್ಟದಂತೆ ಆಗಿಲ್ಲ. ಸರ್ಕಾರ ಬಂದು ಒಂದೂವರೆ ತಿಂಗಳು, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದು 100 ದಿನ ಆಗಿದೆ. ಹಿಂದೂ ಏನೂ ಮಾಡಿರಲಿಲ್ಲ, ಈಗೂ ಆಗಿಲ್ಲ. ಮೋದಿ ಐದು ವರ್ಷದ ಆಡಳಿತದ ಫಲವಾಗಿ ಜಿಡಿಪಿ ಶೇ. 5 ಕ್ಕೆ ಕುಸಿದಿದೆ. ಇದು ವಾಸ್ತವವಾಗಿ ಶೇ. 3.5 ಆಗಿದೆ ಎಂದರು.
ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಪಕ್ಷ. ನಾವು ನೀಡಿದ ಸಾಮಾಜಿಕ ನ್ಯಾಯವನ್ನು ಕಿತ್ತು ಹಾಕಿದ್ದಾರೆ. ಸಮಾನತೆ ಯಾವಾಗ ಬರಲಿದೆ. ಅಧಿಕಾರ, ಸಂಪತ್ತಿನಲ್ಲಿ ಎಲ್ಲರಿಗೂ ಪಾಲು ಸಿಗದಿದ್ದರೆ ಸಾಮಾಜಿಕ ನ್ಯಾಯ ಹೇಗೆ ಬರುತ್ತದೆ. ಇದನ್ನು ನಾವುಜನರಿಗೆ ತಿಳಿಸಬೇಕು. ಸತ್ಯವನ್ನೂ ನಾವು ಹೇಳುವುದಕ್ಕೆ ಆಗದಿದ್ದರೆ ಹೇಗೆ? ಹೇಳಿಲ್ಲ ಎಂಬ ಕೊರಗು ನನ್ನದು. ಕಾಂಗ್ರೆಸ್ ಪಕ್ಷ ನಾಲ್ಕು ಗೋಡೆ ಮಧ್ಯ ಇರುವುದನ್ನು ಬಿಡಬೇಕು, ಬೀದಿಗಿಳಿಯಬೇಕು. ಯಡಿಯೂರಪ್ಪ ನಮ್ಮ ಯೋಜನೆಯನ್ನು ಹಿಸುಕಿ ಹಿಸುಕಿ ನೋಡುತ್ತಿದ್ದಾರೆ. ನಾವು ಜನಪರ ಹೋರಾಟದ ಮೂಲಕ ಜನರಿಗೆ ನಮ್ಮ ವಿವರ ನೀಡಬೇಕು. ಬಿಎಸ್ವೈ ವರ್ಗಾವಣೆ ದಂಧೆ, ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ವಾಣಿಜ್ಯ ವರ್ಷ ಆರಂಭವಾಗಿ ಆರು ತಿಂಗಳು ಕಳೆದಿದೆ, ಯಾವ ಕೆಲಸವೂ ಆಗಿಲ್ಲ. ಕಾಂಗ್ರೆಸ್ ಪಕ್ಷ ಮಾತ್ರ ಬಿಜೆಪಿಗೆ ಪರ್ಯಾಯ ಪಕ್ಷ. ಇದನ್ನು ಮುಗಿಸಿದರೆ ಸರ್ವಾಧಿಕಾರಿ ತರ ಇರಬಹುದು ಎಂಬ ಭ್ರಮೆಯಲ್ಲಿ ಇದ್ದಾರೆ. ಅದು ಮೋದಿ, ಶಾ ಅವರಿಂದ ಸಾಧ್ಯವಿಲ್ಲ. ಭಾವನಾತ್ಮಕ ವಿಚಾರ ಮುಂದಿಟ್ಟು ಜನರ ಮುಂದೆ ಹೋಗಿ ಮರಳು ಮಾಡಿದ್ದಾರೆ. ನಾವು ಜನ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಉಳಿಯಬೇಕು, ಬೆಳೆಯಬೇಕು, ಅಧಿಕಾರಕ್ಕೆ ಬರಬೇಕು. 17 ಕ್ಷೇತ್ರ ಉಪಚುನಾವಣೆ, ವಿಧಾನಸಭೆ ಚುನಾವಣೆ ಕೂಡ ಯಾವುದೇ ಸಂದರ್ಭದಲ್ಲಿ ಘೋಷಣೆ ಆಗಬಹುದು. ನಾವು ಸಿದ್ಧವಾಗಬೇಕಿದೆ. ಬ್ಯಾಲೆಟ್ ಗೆ ಹೋಗುವುದೇ ಸರಿಯಾದ ಕ್ರಮ. ರಾಷ್ಟ್ರದ ಎಲ್ಲಾ ಪಕ್ಷಗಳೂ ಕಾಂಗ್ರೆಸ್ ನೇತೃತ್ವದಲ್ಲಿ ಹೋರಾಟ ನಡೆಸಬೇಕು. ಮೋದಿ ಎಲ್ಲ ಸಂಸ್ಥೆಯನ್ನು ತಮ್ಮ ಹಿಡಿತಕ್ಕೆ ಪಡೆದಿದ್ದಾರೆ. ಸರ್ವಾಧಿಕಾರ ದೇಶದಲ್ಲಿದೆ. ದೇಶ ಉಳಿಸಲು ನಾವು ಬೀದಿಗಿಳಿಯೋಣ, ನಮಗೆ ಭವಿಷ್ಯ ಇದೆ. ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜನ ಬಿಜೆಪಿಗೆ ಪಾಠ ಕಲಿಸಲು ಕಾದಿದ್ದಾರೆ. 17 ಕ್ಷೇತ್ರದ ಉಪಚುನಾವಣೆ ಯಲ್ಲಿ ಬಹುತೇಕ ಸ್ಥಾನ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.
ನನ್ನ ಕೈಯಲ್ಲಿ ಇದ್ದಿದ್ರೆ ಇವಿಎಂ ಮೆಷಿನ್ ಕೈ ಬಿಡುತ್ತಿದೆ. ಚುನಾವಣಾ ಆಯೋಗದವರು ಬದಲಾವಣೆ ಮಾಡಬೇಕು. ಇವಿಎಂ ಯಂತ್ರದ ಬದಲು ಬ್ಯಾಲೆಟ್ ಪೇಪರ್ ಬರಬೇಕು. ಅಮೇರಿಕಾ, ರಷ್ಯಾ ಯುರೋಪ್ ಅಂತಹ ದೇಶಗಳಲ್ಲಿ ಇವಿಎಂ ತಿರಸ್ಕಾರ ಮಾಡಿದ್ದಾರೆ. ರಾಜ್ಯದ ನೆರೆ-ಬರ ಸಮಸ್ಯೆಗೆ ಒಂದು ಪೈಸೆ ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಯಡಿಯೂರಪ್ಪ ಒಲ್ಲದ ಶಿಶು. ಅಕ್ರಮವಾಗಿ ಸರ್ಕಾರ ರಚನೆ ಮಾಡಿದ್ದಾರೆ. ಧಮ್ಕಿ ಹಾಕಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿಯವರಿಗೂ ಯಡಿಯೂರಪ್ಪ ಗೆ ಸಿಎಂ ಮಾಡೋ ಮನಸ್ಸಿರಲಿಲ್ಲ. ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನೂ ವಿಷ ಕುಡಿದ ಮಕ್ಳು ಬದುಕ್ತಾವಾ? ಯಡಿಯೂರಪ್ಪ ಹಾಗೂ ಅವರ ಸರ್ಕಾರದ ಬಗ್ಗೆ ವ್ಯಂಗ್ಯ ವಾಡಿದರು.
ರಾಜ್ಯದ ದೌರ್ಭಾಗ್ಯ
ನಳೀನ್ ಕುಮಾರ್ ಕಟೀಲು ಅನ್ನುವವರು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ರಾಜ್ಯದ ದೌರ್ಭಾಗ್ಯ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಬೆಂಕಿ ಹಚ್ಚುವುದು ಗೊತ್ತಿದೆ, ಆರಿಸುವುದೂ ಗೊತ್ತಿದೆ ಎನ್ನುತ್ತಾರೆ, ಯಡಿಯೂರಪ್ಪ, ಆರ. ಅಶೋಕ್, ಈಶ್ವರಪ್ಪ ಅಂತವರು ಇದ್ದಾರೆ. ಇವರಿಂದ ಅಭಿವೃದ್ಧಿ ಅಸಾಧ್ಯ ಎಂದರು.
ಮೋದಿ ಸರ್ಕಾರದ ಕೆಟ್ಟ ನಿರ್ಧಾರ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಇಂದಿನ ಆರ್ಥಿಕ ಕುಸಿತ ಮೋದಿ ಸರ್ಕಾರದ ಕೆಟ್ಟ ನಿರ್ಧಾರದಿಂದ ಆಗಿದ್ದು, 100 ದಿನದ ಸಾಧನೆ ಮಾತಾಡುತ್ತಿದ್ದಾರೆ. ನೋಟು ಅಮಾನ್ಯ, ಅವೈಜ್ಞಾನಿಕ ಜಿಎಸ್ಟಿ ಇಂದಾಗಿ ದೇಶದ ಆರ್ಥಿಕ ಸ್ಥಿತಿ ಕುಸಿದಿದೆ ಎಂದು ಆರ್ಬಿಐ ಹೇಳಿದೆ. ರಾಜ್ಯದಲ್ಲಿ ಹಿಂಬಾಗಿಲಿಂದ ಅಧಿಕಾರ ಹಿಡಿದ ಬಿಜೆಪಿ ಜನ ವಿರೋಧಿ ನೀತಿ ವಿರುದ್ಧ ದನಿ ಎತ್ತಬೇಕಿದೆ. ಜನರಿಗೆ ಇದು ಶಾಪ. ಜನ ವಿರೋಧಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ನೆರೆ-ಬರದಿಂದ ಎಲ್ಲರೂ ತತ್ತರಿಸಿದ್ದಾರೆ, ಇವರು ದ್ವೇಶದ ರಾಜಕಾರಣ ಮಾಡುತ್ತಿದ್ದಾರೆ. ಚಿದಂಬರಂ, ಡಿ.ಕೆ. ಶಿವಕುಮಾರ್ ಬಂಧನ ಮೂಲಕ ತಮ್ಮ ವೈಫಲ್ಯ ಮುಚ್ಚಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷ ಧಮನವೇ ಇವರ ಕೆಲಸ. ಅವಹೇಳನ ಕಾರಿ ಹೇಳಿಕೆ ನೀಡಿ ತಮ್ಮ ತಪ್ಪು ಮರೆ ಮಾಚಿಕೊಳ್ಳುತ್ತಿದ್ದಾರೆ. ಕೇಂದ್ರ ಪರಿಹಾರ ಘೋಷಿಸಿಲ್ಲ. ಇದರ ಬಗ್ಗೆ ಸರ್ಕಾರ ದನಿ ಎತ್ತುತ್ತಿಲ್ಲ. ಜನ ಕಷ್ಟದಲ್ಲಿದ್ದು, ಪ್ರಧಾನಿ ಬಂದರೂ ಒಂದು ಸಭೆ ಮಾಡಿಲ್ಲ. ಇವೆಲ್ಲವನ್ನೂ ಜನರ ಗಮನಕ್ಕೆ ನಾವು ತರಬೇಕಿದೆ. ನಮ್ಮ ಯೋಜನೆಗಳ ತನಿಖೆ‌ಮಾಡಿಸುತ್ತಿದ್ದಾರೆ. ಇವರ ಆದ್ಯತೆ ಕೇವಲ ನಕಾರಾತ್ಮಕ ವಿಚಾರವೇ ಪ್ರಾಧಾನ್ಯವಾಗಿದೆ. ಇವನ್ನು ನಮ್ಮವರು ಜನರ ಗಮನಕ್ಕೆ ತರಬೇಕು. ಬಿಜೆಪಿ ಕುತಂತ್ರವನ್ನು ಎಲ್ಲರಿಗೂ ಮುಟ್ಟಿಸುವ ಕಾರ್ಯ ಮಾಡಬೇಕಿದೆ. ಉಪಚುನಾವಣೆ ನಮಗೆ ಸವಾಲು. ಇಲ್ಲಿ ಗೆದ್ದರೆ ದೊಡ್ಡ ಯಶಸ್ಸು ಸಿಗಲಿದೆ. ಮುಂದೆ ನಮ್ಮ ನೈತಿಕ ಬಲ ಹೆಚ್ಚಲಿದೆ. ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅನರ್ಕ ಶಾಸಕರ ಕ್ಷೇತ್ರಕ್ಕೆ ಕೋಟಿ ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಇವರು ರಾಜ್ಯಕ್ಕೆ ಎಂದರು.

Conclusion:news
Last Updated : Sep 9, 2019, 5:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.