ಬೆಂಗಳೂರು: ಭಾನುವಾರ ನಡೆದ ಚುನಾವಣೆಯಲ್ಲಿ ಡಾ. ಬಿ. ಎಲ್ ಶಂಕರ್ ಅವರು ಸತತವಾಗಿ 4ನೇ ಬಾರಿಗೆ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೂರು ವರ್ಷಗಳ ಅವಧಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರು ಆಗಿರುವ ಬಿ. ಎಲ್ ಶಂಕರ್ ಅವರು ಗೆಲುವು ಸಾಧಿಸಿದ್ದಾರೆ.
ಕುಮಾರಕೃಪಾ ರಸ್ತೆಯ ಚಿತ್ರಕಲಾ ಪರಿಷತ್ನಲ್ಲಿ ನಡೆದ ಚುನಾವಣೆಯಲ್ಲಿ 2022-23 ರಿಂದ 2024-25ರ ಮೂರು ವರ್ಷಗಳ ಅವಧಿಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಆಯ್ಕೆ ನಡೆಯಿತು. ಈ ಚುನಾವಣೆಯಲ್ಲಿ ಕೆಳಕಂಡವರು ಚುನಾಯಿತರಾಗಿರುತ್ತಾರೆಂದು ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ.
ಬಿ. ಎಲ್ ಶಂಕರ್ ಅಧ್ಯಕ್ಷರು, ಪ್ರೊ. ಕೆ ಅಪ್ಪಾಜಯ್ಯ, ಪ್ರಭಾಕರ್ ಟಿ ಹಾಗೂ ಏ ರಾಮಕೃಷ್ಣಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶಶಿಧರ್ ಎಸ್. ಎನ್ ಪ್ರಧಾನ ಕಾರ್ಯದರ್ಶಿಯಾಗಿ, ಟಿ. ಚಂದ್ರಶೇಖರ್, ಬಿ. ಎಲ್ ಶ್ರೀನಿವಾಸ್ ಸಹಾಯಕ ಕಾರ್ಯದರ್ಶಿಯಾಗಿ, ಡಾ. ಲಕ್ಷ್ಮಿಪತಿ ಬಾಬು ಎಸ್. ಖಜಾಂಚಿಯಾಗಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಟಿ. ವಿ ತಾರಕೇಶ್ವರಿ, ಆರ್. ಜಿ ಭಂಡಾರಿ, ಸಿ. ಪಿ ಉಷಾರಾಣಿ, ಸುಬ್ರಮಣ್ಯ ಕುಕ್ಕೆ, ಅಮೃತ ವಿಮಲನಾಥನ್ ಎಸ್, ವಿನೋದ ಬಿ. ವೈ ಹಾಗೂ ತಾರಕೇಶ್ವರ್ ಮಗರ್ ಆಯ್ಕೆಯಾಗಿದ್ದಾರೆ.
ಓದಿ: ಆರ್ಎಸ್ಎಸ್ ಪ್ರಮುಖರಿಗೆ ಶಾಸಕರು, ಸಚಿವರಿಂದ ಕಮಿಷನ್ ಹೋಗ್ತಿದೆ: ಕುಮಾರಸ್ವಾಮಿ