ETV Bharat / state

ಚರ್ಚೆ ಬಿಡಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ: ಪಕ್ಷದ ಮುಖಂಡರಿಗೆ ಬಿ ಎಲ್ ಸಂತೋಷ್ ಸೂಚನೆ - ಲೋಕಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ

ಪ್ರತಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರ ನೇಮಕ ಬಗ್ಗೆ ತಲೆಕೆಡಿಸಿಕೊಳ್ಳದೇ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸೂಚನೆ ನೀಡಿದ್ದಾರೆ.

ಬಿ ಎಲ್ ಸಂತೋಷ್
ಬಿ ಎಲ್ ಸಂತೋಷ್
author img

By ETV Bharat Karnataka Team

Published : Aug 31, 2023, 7:41 PM IST

ಬೆಂಗಳೂರು: ರಾಜ್ಯಾಧ್ಯಕ್ಷರ ನೇಮಕ, ಪ್ರತಿಪಕ್ಷ ನಾಯಕನ ಆಯ್ಕೆಯ ಚರ್ಚೆ ಬಿಟ್ಟು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕು ಎಂದು ಪಕ್ಷದ ನಾಯಕರಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸೂಚನೆ ನೀಡಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮತದಾರ ಚೇತನ ಮಹಾಭಿಯಾನದ ನಿಮಿತ್ತ ಇಂದು ನಡೆದ ಲೋಕಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಕಾರ್ಯಾಗಾರದ ಸಮಾರೋಪವನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರತಿಪಕ್ಷ ನಾಯಕನ ನೇಮಕ ಆಗಿಲ್ಲ ಅನ್ನುವುದನ್ನೇ ದೊಡ್ಡದು ಮಾಡಿ ಚರ್ಚಿಸುವ ಅಗತ್ಯವೇನಿದೆ? ಪ್ರತಿಪಕ್ಷ ನಾಯಕ ಆಯ್ಕೆಯಾಗಿಲ್ಲ ಎನ್ನುವ ಕಾರಣದಿಂದ ಪಕ್ಷದ ಯಾವುದೇ ಚಟುವಟಿಕೆಯಾಗಲಿ, ಪ್ರತಿಪಕ್ಷವಾಗಿ ಜವಾಬ್ದಾರಿ ನಿರ್ವಹಣೆ ವಿಚಾರದಲ್ಲಿಯಾಗಲಿ ಯಾವುದೇ ಸಮಸ್ಯೆ ಆಗಿಲ್ಲ. ಪ್ರತಿಪಕ್ಷವಾಗಿ ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಆದರೂ ಪ್ರತಿಪಕ್ಷ ನಾಯಕರ ಆಯ್ಕೆಯಾಗಬೇಕಿತ್ತು, ಆದರೆ ವಿಳಂಬವಾಗಿದೆ. ಇದನ್ನು ನಾನು ಒಪ್ಪುತ್ತೇನೆ. ಮನೆಯಲ್ಲಿ ಮದುವೆ ಆಗದ ಮಗಳು ಇದ್ದರೆ ಹೊರಹಾಕಲು ಆಗುತ್ತಾ? ಕೆಲಸ ಸಿಗದ ಮಗ ಇದ್ದರೆ ಮನೆಯಿಂದ ಹೊರಹಾಕುತ್ತೀರಾ? ತಡವಾಗಿದೆ ಎಂಬುದು ಎಷ್ಟು ಸತ್ಯವೋ ನೇಮಕ ಆಗುವುದೂ ಅಷ್ಟೇ ಸತ್ಯ. ಹಾಗಾಗಿ ನೀವು ಈ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಅದು ನಿಮ್ಮ ಕೆಲಸವೂ ಅಲ್ಲ. ಹಾಗಾಗಿ ನಿಮ್ಮ ಜವಾಬ್ದಾರಿ ಆಗಿರುವ ಸಂಘಟನಾತ್ಮಕ ಚಟುವಟಿಕೆಯಲ್ಲಿ ತೊಡಗಿ ಎಂದು ಸಲಹೆ ನೀಡಿದರು.

bjp
ಬಿಜೆಪಿ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಕಾರ್ಯಾಗಾರದ ಸಮಾರೋಪ

ರಾಜ್ಯಾಧ್ಯಕ್ಷರ ಅವಧಿ ಮುಗಿದಿದೆ. ಹೊಸಬರ ನೇಮಕ ಬಾಕಿ ಇದೆ, ಇದನ್ನು ಪಕ್ಷದ ವರಿಷ್ಠರು ನೋಡಿಕೊಳ್ಳಲಿದ್ದಾರೆ. ಈ ಬಗ್ಗೆ ನೀವು ಗೊಂದಲ ಮಾಡಿಕೊಳ್ಳಬೇಕಿಲ್ಲ, ಈ ಹಿಂದೆ 2013 ರ ಚುನಾವಣೆಯಲ್ಲಿ ಪಕ್ಷ ಪೂರ್ಣ ನೆಲಸಮವಾಗುತ್ತದೆ ಎಂದೇ ವಿಶ್ಲೇಷಣೆ ಮಾಡಿದ್ದರು. ಆದರೆ ಅಂದಿನ ಆಂತರಿಕ ವಿದ್ಯಮಾನದ ನಡುವೆಯೂ ನಾವು 40 ಸ್ಥಾನ ಗೆದ್ದೆವು. ಈ ಚುನಾವಣೆಯಲ್ಲಿ 66 ಸ್ಥಾನ ಗೆದ್ದಿದ್ದೇವೆ. ಈಗ ಪ್ರತಿಪಕ್ಷವಾಗಿ ಇನ್ನಷ್ಟು ಶಕ್ತಿಯುತವಾಗಿದ್ದೇವೆ. ಹಾಗಾಗಿ ನೀವೆಲ್ಲಾ ನಮ್ಮ ಹೊಸ ರಾಜ್ಯಾಧ್ಯಕ್ಷರ ಆಯ್ಕೆ, ಪ್ರತಿಪಕ್ಷ ನಾಯಕನ ಚರ್ಚೆ ವಿಷಯದ ಬಗ್ಗೆ ಚಿಂತೆ ಬಿಟ್ಟು ಸಂಘಟನೆಯಲ್ಲಿ ತೊಡಗಬೇಕು. ಕೇವಲ ಸಂಘಟನಾತ್ಮಕ ಚಟುವಟಿಕೆ ವಿಷಯ ಸೀಮಿತವಾಗಿ ಕೆಲಸ ಮಾಡಬೇಕು. ಆ ಮೂಲಕ ಬೂತ್ ಬಲವರ್ಧನೆ ಮಾಡಿ ಪಕ್ಷವನ್ನು ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸಬೇಕು ಎಂದು ಹೇಳಿದ್ದಾರೆ.

ಇನ್ನು ಆಪರೇಷನ್ ಹಸ್ತಕ್ಕೆ ಯಾರೂ ಚಿಂತಿಸಬೇಕಿಲ್ಲ. ಅಂತಹ ವಿದ್ಯಮಾನ ನಡೆಯುತ್ತಿಲ್ಲ, ವಾಸ್ತವವೇ ಬೇರೆ ಇದೆ, ಬಿಜೆಪಿಯಿಂದ ಯಾರೂ ಕಾಂಗ್ರೆಸ್​​ನತ್ತ ಹೋಗುತ್ತಿಲ್ಲ. ಇನ್ನು ಮೂಲ ಬಿಜೆಪಿಗರು ವಲಸಿಗ ಬಿಜೆಪಿಗರು ಎನ್ನುವ ಚರ್ಚೆ ಮಾಡಬೇಡಿ, ಅದು ಸರಿಯಲ್ಲ. ಅವರು ಕಷ್ಟ ಕಾಲಕ್ಕೆ ನಮ್ಮ ಜೊತೆ ಬಂದಿದ್ದಾರೆ. ಅವರು ಹೋಗುತ್ತಾರೆ ಎಂದು ನಾವೇ ಪದೇ ಪದೇ ಚರ್ಚಿಸಿದರೆ ಅವರ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಹುದು? ಇದೆಲ್ಲಾ ಚರ್ಚೆ ಅನಗತ್ಯ, ಯಾರೂ ಪಕ್ಷ ಬಿಡಲ್ಲ, ಅದರ ಚಿಂತೆ ಬಿಡಿ. ಹಾಗೆ ನೋಡಿದರೆ ನನ್ನ ಜೊತೆಗೆ 40-45 ಕಾಂಗ್ರೆಸ್​ನ ಮುಖಂಡರು ಸಂಪರ್ಕದಲ್ಲಿದ್ದಾರೆ. ವರಿಷ್ಠರು ಒಪ್ಪಿದರೆ ಒಂದೇ ದಿನದಲ್ಲಿ ಅವರನ್ನೆಲ್ಲಾ ಕರೆತರಬಲ್ಲೆ. ಆದರೆ ಅದರ ಅಗತ್ಯ ನಮಗಿಲ್ಲ. ಹಾಗಾಗಿ ಆಪರೇಷನ್ ಹಸ್ತ, ಪ್ರತಿಪಕ್ಷ ನಾಯಕರ, ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಬಿಟ್ಟು ಲೋಕಸಭೆ ಚುನಾವಣೆಗೆ ಬೇಕಾದ ಸಿದ್ಧತೆಯತ್ತ ಗಮನ ಹರಿಸಿ ಎಂದು ನಾಯಕರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಬಿ ಎಲ್ ಸಂತೋಷ್ ಸಂಪರ್ಕದಲ್ಲಿ 40 ಕಾಂಗ್ರೆಸ್ ನಾಯಕರು: ರಿವರ್ಸ್ ಆಪರೇಷನ್ ಸುಳಿವು ನೀಡಿದ ಬಿಜೆಪಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.