ETV Bharat / state

ಡಿಕೆಶಿ ಜ್ಞಾನ ನೋಡಿ, ಒಂದು ವೇಳೆ ಸರ್ವಜ್ಞ ಬದುಕಿದ್ದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ; ಬಿ.ಸಿ.ಪಾಟೀಲ್​ - ಬೆಂಗಳೂರು ಸುದ್ದಿ

ಒಳಗೊಂದು ಹೊರಗೊಂದು ಮಾತನಾಡುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಅಭ್ಯಾಸವಾಗಿ ಬಿಟ್ಟಿದೆ. ಅವರೊಬ್ಬ ಸೀಸನಲ್​ ರಾಜಕಾರಣಿ. ಅವರು ತಮ್ಮ ತೆವಳಿಗೆ ಮಾತನಾಡುವುದನ್ನು ಬಿಡಲಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಡಿಕೆಶಿಗೆ ತಿರುಗೇಟು ನೀಡಿದರು.

B C Patil
ಬಿ.ಸಿ.ಪಾಟೀಲ್​
author img

By

Published : Sep 23, 2020, 4:41 PM IST

Updated : Sep 23, 2020, 5:03 PM IST

ಬೆಂಗಳೂರು: ಕೃಷಿ ಸಚಿವರಿಗೆ ಜ್ಞಾನ ಇಲ್ಲ ಎಂದು ಡಿಕೆಶಿ ಹೇಳಿದ್ರು.‌ ಡಿಕೆಶಿ ಒಬ್ಬ ಮಹಾಜ್ಞಾನಿ. ಅವರ ಜ್ಞಾನ ನೋಡಿ ಸರ್ವಜ್ಞ ಒಂದು ವೇಳೆ ಇದ್ದಿದ್ದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದನು. ಅವರಷ್ಟು ನನಗೆ ಜ್ಞಾನ ಇಲ್ಲ ಎಂದು ಡಿಕೆಶಿಗೆ ಬಿ.ಸಿ.ಪಾಟೀಲ್ ಟಾಂಗ್ ನೀಡಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ತೆವಳಿಗೆ ಮಾತನಾಡುವುದನ್ನು ಬಿಡಲಿ. ಒಳಗೊಂದು ಹೊರಗೊಂದು ಮಾತನಾಡುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಅಭ್ಯಾಸವಾಗಿ ಬಿಟ್ಟಿದೆ. ಅವರೊಬ್ಬ ಸೀಸನಲ್​ ರಾಜಕಾರಣಿ. ನಿನ್ನೆ ಸದನದ ಒಳಗೆ ಬಿ.ಸಿ.ಪಾಟೀಲ್ ನನ್ನ ಆತ್ಮೀಯ ಸ್ನೇಹಿತ ಎಂದವರು ಸಂಜೆ ಹೊತ್ತಿಗೆ ತಮ್ಮ ಮಾತು ಬದಲಾಯಿಸಿದ್ದಾರೆ. ಒಳಗೊಂದು, ಹೊರಗೊಂದು, ರೂಂನಲ್ಲೊಂದು ಮಾತನಾಡುವುದು ಶಿವಕುಮಾರ್‌ಗೆ ಅಭ್ಯಾಸವಾಗಿದೆ. ಅವರು ತಮ್ಮ ತೆವಳಿಗೆ ಮಾತನಾಡುವುದನ್ನು ಬಿಡಲಿ ಎಂದು ಕೃಷಿ ಸಚಿವರು ತಿರುಗೇಟು ನೀಡಿದರು.

ಬಿ.ಸಿ.ಪಾಟೀಲ್​

ರೈತರು ಹೋರಾಟ ಮಾಡೋದ್ರಲ್ಲಿ ಅರ್ಥವಿಲ್ಲ. ಎಪಿಎಂಸಿ ಕಾಯ್ದೆಯಿಂದ ಯಾವುದೇ ನಷ್ಟವಿಲ್ಲ.‌ ರೈತರಿಗೆ ಒಳ್ಳೆಯದೇ ಆಗಲಿದೆ. ರೈತರು ಯಾವ ಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆಂಬುದು ಸ್ಪಷ್ಟವಾಗಬೇಕು. ರೈತರು ತಮ್ಮ ಹೋರಾಟ ಕೈಬಿಡಬೇಕೆಂದು ಮನವಿ ಮಾಡಿದರು.

Last Updated : Sep 23, 2020, 5:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.