ETV Bharat / state

ಈಶ್ವರಪ್ಪಗೆ ಬೇಸರ ಇದ್ದರೆ ಸಂಪುಟದಿಂದ ಆಚೆ ಇದ್ದು ಮಾತಾಡಲಿ: ಆಯನೂರು ಮಂಜುನಾಥ್

author img

By

Published : Apr 1, 2021, 8:39 PM IST

ಖಾತೆ ವಿಚಾರವಾಗಿ ರಾಜ್ಯಪಾಲರಿಗೆ ಪತ್ರ ಬರೆದಿರುವ ಸಚಿವ ಕೆ ಎಸ್​ ಈಶ್ವರಪ್ಪ ವಿರುದ್ಧ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ. ಈಶ್ವರಪ್ಪನವರು ಮುಖ್ಯಮಂತ್ರಿಗಳ ಜೊತೆ ಕುಳಿತು ಮಾತನಾಡಲಿ. ರಾಜ್ಯಪಾಲರು ಬಗೆಹರಿಸಲಿ‌ ಅನ್ನೋ ನಿಲುವು ಒಳ್ಳೆಯದಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ayanur-manjunath
ಆಯನೂರು ಮಂಜುನಾಥ್

ಬೆಂಗಳೂರು: ಈಶ್ವರಪ್ಪನವರಿಗೆ ಮುಖ್ಯಮಂತ್ರಿಗಳ ಬಗ್ಗೆ ಬೇಸರ ಇದ್ರೆ ಅವರು ಸಂಪುಟದಿಂದ ಆಚೆ ಇದ್ದು ಮಾತನಾಡಲಿ ಎಂದು ವಿಧಾನ ಪರಿಷತ್​ ಸದಸ್ಯ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ.

ಇಂದು ಶಾಸಕರ ಭವನದಲ್ಲಿ ಮಾತನಾಡಿದ ಅವರು, ಸಂಪುಟದ ಒಳಗೆ ಇದ್ದು ಈಶ್ವರಪ್ಪ ಮಾತಾಡುವುದು ಸರಿಯಲ್ಲ. ಈಶ್ವರಪ್ಪನವರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದು, ನನಗೆ ನೋವು ತಂದಿದೆ ಎಂದಿದ್ದಾರೆ.

ಈಶ್ವರಪ್ಪ ನಮ್ಮ ಜಿಲ್ಲೆಯವರೇ ಆಗಿರಬಹುದು. ಆದರೆ ಅವರು ದೂರು ಕೊಟ್ಟಿದ್ದು ಸರಿಯಲ್ಲ. ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ಇದೆ. ಇಲಾಖೆಗಳಿಗೆ ಅನುದಾನ ಕೊಡುವ ವಾಪಸ್ ಪಡೆಯುವ ಅಧಿಕಾರ ಸಿಎಂಗೆ ಇದೆ. ಪ್ರಧಾನಿಯವರ ಬಳಿ ಯಾವುದೇ ಖಾತೆ ಇಲ್ಲ. ಹಾಗಂತ ಇಲಾಖೆಗಳ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶ ಮಾಡಬಾರದು ಅಂತ ಇದ್ಯಾ?. ಈಶ್ವರಪ್ಪ ನವರ ಹೇಳಿಕೆ, ದೂರು ಪಕ್ಷಕ್ಕೆ ಮುಜುಗರ ತಂದಿದೆ ಎಂದು ಕಿಡಿ‌ಕಾರಿದರು.

ರಾಜ್ಯಪಾಲರಿಗೆ ಈಶ್ವರಪ್ಪ ಬರೆದ ಪತ್ರದ ಕುರಿತು ಪ್ರತಿಕ್ರಿಯಿಸಿದ ಆಯನೂರ್ ಮಂಜುನಾಥ್

ಈಶ್ವರಪ್ಪ ಹೇಳಿಕೆ ಸಮುದಾಯದವರೆಗೂ ಹೋಗಿ ಮುಟ್ಟಬಹುದು. ಈಶ್ವರಪ್ಪನವರು ಸಿಎಂ ಜೊತೆ ಮಾತಾಡಿ ಬಗೆಹರಿಸಿಕೊಳ್ಳಲಿ. ವಿಷಯ ಎಲ್ಲಿಂದ ಎಲ್ಲಿಗೋ ಹೋಗಿ ಮುಟ್ಟುವ ಅಪಾಯ ಇದೆ. ಈಶ್ವರಪ್ಪನವರು ಮುಖ್ಯಮಂತ್ರಿಗಳ ಜೊತೆ ಕುಳಿತು ಮಾತನಾಡಲಿ. ರಾಜ್ಯಪಾಲರು ಬಗೆಹರಿಸಲಿ‌ ಅನ್ನೋ ನಿಲುವು ಒಳ್ಳೆಯದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯತ್ನಾಳ್, ಈಶ್ವರಪ್ಪರಂತೆ ಮಾತಾಡುವ ವಿಚಾರದಲ್ಲಿ ಪಕ್ಷ ಗಟ್ಟಿ ನಿಲುವು ತಳೆಯಬೇಕು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ‌. ನಡ್ಡಾ ದುರ್ಬಲ ನಾಯಕರಲ್ಲ. ಇಂಥ ಸಂದರ್ಭದಲ್ಲಿ ಅವರು ಸುಮ್ಮನಿರೋದು ಸರಿಯಲ್ಲ ಎಂದು ಪರೋಕ್ಷವಾಗಿ ಕ್ರಮ ಕೈಗೊಳ್ಳುವಂತೆ ಆಯನೂರು ಮಂಜುನಾಥ್ ಆಗ್ರಹಿಸಿದರು.

ಈಶ್ವರಪ್ಪ ಪ್ರಬುದ್ಧ, ಅನುಭವಿ ನಾಯಕರು. ಅವರು ಸದಾ ಸಿಡಿಯುವ ನಾಯಕರಲ್ಲ. ಆದ್ರೆ ಯಾವಾಗ ಸಿಟ್ಟಾಗ್ತಾರೆ, ಸಿಡಿಯುತ್ತಾರೆ ಅಂತ ಗೊತ್ತಿಲ್ಲ. ಅದು ಅವರಿಗೆ ಮಾತ್ರ ಗೊತ್ತಿರುವ ಟೆಕ್ನಿಕ್ ಎಂದರು.

ಬಸನಗೌಡ ಪಾಟೀಲ್‌ ಹುಚ್ಚ ವೆಂಕಟ್ ಇದ್ದಂತೆ..!

ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯತ್ನಾಳ್​ ಸ್ವಲ್ಪ ಪ್ರಚಾರ ಪ್ರಿಯ, ಯತ್ನಾಳ್ ತಮ್ಮನ್ನೇ ತಾವು ಮೋಹಿಸಿಕೊಳ್ಳುವವರು ಎಂದು ಆಯನೂರು ವ್ಯಂಗ್ಯವಾಡಿದರು. ಪ್ರಚಾರ ಸಿಕ್ಕ ಕೂಡಲೇ ನಾಯಕರಾಗಲ್ಲ. ಯತ್ನಾಳ್​​ಗೂ ತಿದ್ದಿಕೊಳ್ಳುವ ಸಮಯ ಬರುತ್ತದೆ. ನಾನು ತುಂಬಾ ದಿನದಿಂದ ನೋಡುತ್ತಿದ್ದೇನೆ,‌ ಹುಚ್ಚ ವೆಂಕಟ್ ರೀತಿ ಅವರು ಆಗಿದ್ದಾರೆ. ಮಾಧ್ಯಮಗಳನ್ನು ಕಂಡರೆ ಕೆಲವರಿಗೆ ಪ್ರಿಯ. ಹಾಗಾಗಿ ನಿಮ್ಮನ್ನ ಕಂಡರೆ ಅವರು ಓಡೋಡಿ ಬರ್ತಾರೆ. ನಮ್ಮ ಪಕ್ಷದಲ್ಲಿ ಅಂತಹ ಐದಾರು ಮಂದಿ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಾವುಟ ಮೇಲಿದೆ ಅಂತ ಹಾರಾಡಬಾರದು. ಹಾಗೊಂದು ವೇಳೆ ಇದ್ದರೆ ದಾರ ಸುತ್ತಿ ಅದನ್ನ ಕಟ್ಟಿಹಾಕ್ತೇವೆ. ಈಶ್ವರಪ್ಪ ಆ ಮಟ್ಟಿಗೆ ಹೋಗಿಲ್ಲ. ಈಗ ಯತ್ನಾಳ್​ಗೆ ಅಂತಹ ಯೋಗ ಬಂದಿದೆ. ಹೈಕಮಾಂಡ್ ಮೃದು ಧೋರಣೆಯನ್ನ ದುರ್ಬಳಕೆ ಮಾಡಿಕೊಳ್ತಿದ್ದಾರೆ ಎಂದು ಯತ್ನಾಳ್​ ವಿರುದ್ಧವೂ ಸಿಡಿಮಿಡಿಗೊಂಡರು.

ಇದನ್ನೂ ಓದಿ: ಸಚಿವ ಈಶ್ವರಪ್ಪ ವಿರುದ್ಧ ಸ್ವಪಕ್ಷಿಯರ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.