ETV Bharat / state

ಧಾರ್ಮಿಕ ಕೇಂದ್ರಗಳಲ್ಲಿ ಟ್ರಾಫಿಕ್ ರೂಲ್ಸ್ ಅರಿವು: ಸಂಚಾರಿ ಪೊಲೀಸರಿಂದ ವಿನೂತನ ಪ್ರಯತ್ನ

ನೂತನವಾಗಿ ಜಾರಿಗೆ ತರಲಾಗಿರುವ ಸಂಚಾರಿ ನಿಯಮಗಳನ್ನು ಸಾರ್ವಜನಿಕರಿಗೆ ತಿಳಿಸಲು, ಟ್ರಾಫಿಕ್ ಪೊಲೀಸರು ವಿನೂತನವಾಗಿ ಧಾರ್ಮಿಕ ಕೇಂದ್ರಗಳಲ್ಲಿನ ಗುರುಗಳಿಂದ ಪ್ರಚಾರ ಮಾಡಿಸುತ್ತಿದ್ದಾರೆ. ​

ಪೊಲೀಸರಿಂದ ವಿನೂತನ ಪ್ರಯತ್ನ
author img

By

Published : Sep 15, 2019, 7:19 PM IST

ಬೆಂಗಳೂರು: ಬದಲಾಗಿರುವ ಸಂಚಾರಿ ನಿಯಮಗಳ ಬಗ್ಗೆ ನಗರ ಉತ್ತರ ವಿಭಾಗದ ಸಂಚಾರ ಪೊಲೀಸರು, ಧಾರ್ಮಿಕ ಕೇಂದ್ರಗಳಿಗೆ ತೆರಳಿ ಟ್ರಾಫಿಕ್ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಉತ್ತರ ವಿಭಾಗಕ್ಕೆ ಬರುವ ಹೆಬ್ಬಾಳ, ಆರ್.ಟಿ. ನಗರ, ಚಿಕ್ಕಜಾಲ ಸೇರಿದಂತೆ ಏಳು ಟ್ರಾಫಿಕ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಮಸೀದಿ, ಚರ್ಚ್ ಹಾಗೂ ದೇವಸ್ಥಾನಗಳಿಗೆ ತೆರಳಿ ಹೊಸ ಟ್ರಾಫಿಕ್ ರೂಲ್ಸ್​ ಬಗ್ಗೆ ಸಂಚಾರಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಚರ್ಚ್​ನಲ್ಲಿ ಫಾದರ್​ಗಳಿಂದ, ಮಸೀದಿಯಲ್ಲಿ ಮೌಲ್ವಿಗಳಿಂದ ಹಾಗೂ ದೇವಸ್ಥಾನಗಳಲ್ಲಿ ಅರ್ಚಕರಿಂದ ಭಕ್ತರಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮುಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಈ ಬಗ್ಗೆ ಸಂಚಾರಿ ವಿಭಾಗದ ಡಿಸಿಪಿ ಸಾರಾ ಫಾತಿಮಾ ಮಾತನಾಡಿ, ಇಂದು ಭಾನುವಾರ ಆಗಿದ್ದರಿಂದ ಚರ್ಚ್​ಗಳಿಗೆ ಹೆಚ್ಚಿನ ಜನರು ಆಗಮಿಸುತ್ತಾರೆ. ಈ ವೇಳೆ ಅಲ್ಲಿನ ಚರ್ಚ್ ಫಾದರ್​ಗಳಿಂದ ಟ್ರಾಫಿಕ್ ರೂಲ್ಸ್​ ಬಗ್ಗೆ ತಿಳಿವಳಿಕೆ ಮೂಡಿಸಿದರೆ ಜನರಿಗೆ ಬೇಗ ವಿಷಯ ತಲುಪುತ್ತದೆ.‌ ಹಾಗೆಯೇ ಮಸೀದಿ ಹಾಗೂ ದೇವಸ್ಥಾನಗಳಲ್ಲಿ ಕೂಡ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

Intro:Body:ಧಾರ್ಮಿಕ ಕೇಂದ್ರಗಳಿಗೆ ತೆರಳಿ ಟ್ರಾಫಿಕ್ ರೂಲ್ಸ್ ಬಗ್ಗೆ ಅರಿವು ಮೂಡಿಸುತ್ತಿರುವ ಟ್ರಾಫಿಕ್ ಪೊಲೀಸರು

ಬೆಂಗಳೂರು: ಬದಲಾಗಿರುವ ಸಂಚಾರಿ ನಿಯಮಗಳ ಬಗ್ಗೆ ನಗರ ಉತ್ತರ ವಿಭಾಗದ ಸಂಚಾರ ಪೊಲೀಸರು ಧಾರ್ಮಿಕ ಕೇಂದ್ರಗಳಿಗೆ ತೆರಳಿ ಟ್ರಾಫಿಕ್ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಉತ್ತರ ವಿಭಾಗಕ್ಕೆ ಬರುವ ಹೆಬ್ಬಾಳ, ಆರ್.ಟಿ.ನಗರ, ಚಿಕ್ಕಜಾಲ ಸೇರಿದಂತೆ ಏಳು ಟ್ರಾಫಿಕ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರು ಮಸೀದಿ, ಚರ್ಚ್ ಹಾಗೂ ದೇವಸ್ಥಾನಗಳಿಗೆ ತೆರಳಿ ಹೊಸ ಟ್ರಾಫಿಕ್ ರೂಲ್ಸ್ ಗಳ ಬಗ್ಗೆ ಸಂಚಾರಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.
ವಿಶೇಷ ಅಂದ್ರೆ.. ಇಂದು ಚರ್ಚ್ ಫಾದರ್ ಗಳಿಂದ, ಮಸೀದಿಯಲ್ಲಿ ಮೌಲ್ವಿಗಳಿಂದ ಹಾಗೂ ದೇವಸ್ಥಾನಗಳಲ್ಲಿ ಅರ್ಚಕರಿಂದ ಭಕ್ತರಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮುಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಂಚಾರಿ ವಿಭಾಗದ ಡಿಸಿಪಿ ಸಾರಾ ಫಾತಿಮಾ ಮಾತನಾಡಿ ಇಂದು ಭಾನುವಾರ ಆಗಿದ್ದರಿಂದ ಚರ್ಚ್ ಗಳಿಗೆ ಹೆಚ್ಚಿನ ಜನರು ಆಗಮಿಸುತ್ತಾರೆ. ಈ ವೇಳೆ ಅಲ್ಲಿನ ಚರ್ಚ್ ಫಾದರ್ ಗಳಿಂದ ಟ್ರಾಫಿಕ್ ರೂಲ್ಸ್ ಗಳ ಬಗ್ಗೆ ತಿಳಿವಳಿಕೆ ಮೂಡಿಸಿದರೆ ಬೇಗ ವಿಷಯ ತಲುಪುತ್ತದೆ.‌ ಇದೇ ಮಸೀದಿ ಹಾಗೂ ದೇವಸ್ಥಾನಗಳಿಗೆ ಇಂತಹ ಜಾಗೃತಿ ಮೂಡಿಸಿದ್ದೇವೆ ಎಂದಿದ್ದಾರೆ.
Conclusion:https://twitter.com/DCPTrNorthBCP/status/1173143731270115328?s=08
ETV Bharat Logo

Copyright © 2024 Ushodaya Enterprises Pvt. Ltd., All Rights Reserved.