ETV Bharat / state

ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕಿ : ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಪೋಷಕರ ಮಡಿಲಿಗೆ

ತರಗತಿ ಬಿಟ್ಟು ಮಾಲ್​ಗೆ ಹೋದ ಬಾಲಕಿಗೆ ಬುದ್ಧಿವಾದ ಹೇಳಿದ ಪೋಷಕರು - ಬೇಸರಗೊಂಡು ಮನೆ ಬಿಟ್ಟು ತೆರಳಿದ ಅಪ್ರಾಪ್ತೆ - ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಮರಳಿ ಪೋಷಕರ ಮಡಿಲಿಗೆ

auto-driver-helps-police-to-unite-runaway-girl-with-parents
ಪೋಷಕರು ಬುದ್ದಿವಾದಕ್ಕೆ ಮನೆ ಬಿಟ್ಟು ಹೋದ ಬಾಲಕಿ
author img

By

Published : Jan 8, 2023, 10:55 PM IST

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪೋಷಕರ ಮಹತ್ವ ಅರಿಯಲಾರದೆಯೋ ಅಥವಾ ಬೌದ್ಧಿಕ ಮಟ್ಟದ ಕೊರತೆಯಿಂದಲೋ ಕ್ಷುಲ್ಲಕ ವಿಚಾರಗಳಿಗೆ ಮಕ್ಕಳು ಮನೆ ಬಿಟ್ಟು ಹೋಗುವ ಅಥವಾ ಆತ್ಮಹತ್ಯೆಯಂತಹ ಆತುರದ ನಿರ್ಧಾರ ತೆಗೆಗೊಳ್ಳುತ್ತಿರುವ ಘಟನೆಗಳು ಅತಿಯಾಗಿ ವರದಿಯಾಗುತ್ತಿವೆ. ಅಂತಹದ್ದೇ ಮತ್ತೊಂದು ಪ್ರಕರಣ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆಟೋ ಚಾಲಕನ ಸಾಮಾಜಿಕ ಪ್ರಜ್ಞೆಯು ಮನೆ ಬಿಟ್ಟು ತೆರಳಬೇಕಿದ್ದ ಬಾಲಕಿಯನ್ನು ಮರಳಿ ಪೋಷಕರ ಮಡಿಲು ಸೇರುವಂತೆ ಮಾಡಿದೆ.

ತರಗತಿ ಬಿಟ್ಟು ಮಾಲ್​​ಗೆ ಹೋದ ಬಾಲಕಿ: ಬೆಂಗಳೂರಿನ ವಿಜಯನಗರದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದ 14 ವರ್ಷದ ಬಾಲಕಿ ಜನವರಿ 4ರಂದು ತರಗತಿಗೆ ಹೋಗದೇ ಸ್ನೇಹಿತರ ಜೊತೆ ಸಮೀಪದ ಮಾಲ್​​ಗೆ ಹೋಗಿದ್ದಾಳೆ. ವಿಷಯ ತಿಳಿದ ಶಾಲಾ ಆಡಳಿತ ಮಂಡಳಿ ಬಾಲಕಿಯ ಪೋಷಕರನ್ನು ಕರೆಯಿಸಿ ಬುದ್ಧಿವಾದ ಹೇಳಿದ್ದರು. ಪೋಷಕರೂ ಸಹ ಮಗಳಿಗೆ ಬೈದು ಬುದ್ಧಿ ಹೇಳಿದ್ದಾರೆ. ಇದರಿಂದ ಬೇಸತ್ತ ಬಾಲಕಿ‌ ಅದೇ ದಿನ ಸಂಜೆ ಮನೆಯಲ್ಲಿದ್ದ ಸ್ಕೂಟರ್ ಹತ್ತಿ ಹೊರಟವಳು ಮನೆಗೆ ಮರಳಿರಲಿಲ್ಲ. ಗಾಬರಿಯಾದ ಪೋಷಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್​​ ಠಾಣೆಗೆ ದೂರು ನೀಡಿದ್ದರು. ತಕ್ಷಣ ಎಚ್ಚೆತ್ತ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಾಲಕಿಯ ಪತ್ತೆಗಾಗಿ ಆಕೆಯ ಫೋಟೋಗಳನ್ನು ಸುತ್ತಮುತ್ತಲಿನ ಠಾಣೆಗಳಿಗೆ ರವಾನಿಸಿದ್ದರು.

ಆಟೋ ಚಾಲಕನ ಸಮಯ ಪ್ರಜ್ಞೆ: ಅದೇ ದಿನ ಸಂಜೆ ಗೊರಗುಂಟೆಪಾಳ್ಯದ ಬಸ್ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ನಿಂತಿದ್ದ‌ ಬಾಲಕಿಯನ್ನು ಆಟೋ ಚಾಲಕನೊಬ್ಬ ಗಮನಿಸಿದ್ದಾನೆ. ಬಾಲಕಿಯ ಬಳಿ ವಿಚಾರಿಸಿದಾಗ ಆಕೆಯ ಅನುಮಾನಾಸ್ಪದ ಉತ್ತರಗಳನ್ನು ಮನಗಂಡ ಚಾಲಕ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾನೆ. ವಿಚಾರ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಾಲಕಿಯನ್ನು ಕರೆದೊಯ್ದು ಹೆತ್ತವರ ಮಡಿಲು ಸೇರಿಸಿದ್ದಾರೆ. ಆಟೋ ಚಾಲಕನ ಸಾಮಾಜಿಕ ಪ್ರಜ್ಞೆಗೆ ಪೊಲೀಸರು, ಬಾಲಕಿಯ ಪೋಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಆಟೋ ಚಾಲಕನಿಗೆ ನಾಳೆ ಸನ್ಮಾನ ಮಾಡುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತಂತ್ರ ವಿದ್ಯೆ.. ದೇವಿ ಮೂರ್ತಿ ಮುಂದೆ 4 ತಿಂಗಳ ಮಗು ಬಲಿ ಕೊಟ್ಟ ಅಮ್ಮ!

ಮಗನ ಅಂಗಾಂಗ ದಾನ ಮಾಡಿ ಪೋಷಕರ ಸಾರ್ಥಕತೆ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕುತ್ತಾರು ದೇವಸ್ಥಾನ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು, ಮನೆಮಂದಿ ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ. ತೊಕ್ಕೊಟ್ಟು ಸೇವಂತಿಗುತ್ತು ನಿವಾಸಿ ಭೂಷಣ್ ರೈ ಎಂಬುವನ ಅಂಗಾಂಗ ದಾನ ಮಾಡಲಾಗಿದೆ.

ಅಪಘಾತದ ಬಳಿಕ ಯುವಕನನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿನ ವೈದ್ಯರು ಗಾಯಾಳು ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ತಿಳಿಸಿದ್ದರು. ವೈದ್ಯಕೀಯ ಪರೀಕ್ಷೆ ಬಳಿಕ ಅಂಗಾಂಗ ದಾನ ಮಾಡುವ ಕುರಿತು ಕುಟುಂಬಸ್ಥರು ಒಪ್ಪಿದ್ದರು. ಮೃತ ಭೂಷಣ್ ಅವರ ಸಹೋದರಿಯ ವಿವಾಹ ಎರಡು ವಾರಗಳ ಹಿಂದೆಯಷ್ಟೇ ನೆರವೇರಿತು. ತಂದೆ ಮಾರಪ್ಪ ರೈ ವರ್ಷದ ಹಿಂದೆಯಷ್ಟೇ ಮೃತರಾಗಿದ್ದರು. ಭೂಷಣ್ ತಾಯಿ ಜೊತೆಗೆ ವಾಸಿಸುತ್ತಿದ್ದರು. ಇದೀಗ ಭೂಷಣ್​ ಅಗಲಿಕೆಯಿಂದ ಕುಟುಂಬಕ್ಕೆ ಮತ್ತಷ್ಟು ನೋವು ಉಂಟಾಗಿದೆ.

ಇದನ್ನೂ ಓದಿ: ಲವ್ ಫ್ಲಾಪ್ ಆಯ್ತು ಅಂತಾ ಕೈ ರಕ್ತ ಮಾಡಿಕೊಂಡವರು.. 4 ವರ್ಷದಲ್ಲಿ 215 ಕೊಲೆಗಳು ಪ್ರೀತಿ ವಿಚಾರಕ್ಕೆ ಆಗಿರೋದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.