ಬೆಂಗಳೂರು: ಅಪ್ರಾಪ್ತ ಬಾಲಕನೊಬ್ಬ ಅಡ್ಡಾದಿಡ್ಡಿ ಕಾರು ಚಲಾಯಿಸಿ ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟರೆ ಮತ್ತೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಭೂಪಸಂದ್ರದಲ್ಲಿ ನಡೆದಿದೆ.
ನಾಗಶೆಟ್ಟಿಹಳ್ಳಿಯ ನಾಗರಾಜ್ ಮೃತಟ ಚಾಲಕ. ಘಟನೆ ವೇಳೆ ಆಟೋ ದಲ್ಲಿ ಕುಳಿತಿದ್ದ ಲೂದ್ರನಾಥ್ ಎಂಬುವರಿಗೆ ಗಂಭೀರ ಗಾಯಗೊಂಡು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೂಪಸಂದ್ರದ ಕಲ್ಪನಾ ಚಾವ್ಲಾ ರಸ್ತೆಯಲ್ಲಿ ಇಂದು ಮಧ್ಯಾಹ್ನ ಚಾಲಕ ನಾಗರಾಜ್ ಹಾಗೂ ಸ್ನೇಹಿತ ಲೂದ್ರನಾಥ್ ಎಂಬುವರುಆಟೋ ನಿಲ್ಲಿಸಿ ಕುಳಿತುಕೊಂಡು ಮಾತನಾಡುತ್ತಿದ್ದರು. ಈ ವೇಳೆ ಬಾಲಕ ಶಿಫ್ಟ್ ಕಾರಿನಲ್ಲಿ ವೇಗವಾಗಿ ಚಾಲನೆ ಮಾಡಿಕೊಂಡು ನೇರವಾಗಿ ಆಟೋ ಗೆ ಗುದ್ದಿದ್ದಾನೆ.
ಘಟನೆ ಸಂಬಂಧ ಬಾಲಕನ ಪೋಷಕರನ್ನು ಆರ್.ಟಿ.ನಗರ ಸಂಚಾರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
.