ETV Bharat / state

ರಾಬರ್ಟ್​ ನಿರ್ಮಾಪಕನ ಹತ್ಯೆ ಯತ್ನಕ್ಕೆ ಕಾರಣವೇನು: ಆರೋಪಿ ಬಾಂಬೆ ರವಿ ಮಾತನಾಡಿರುವ ಆಡಿಯೋ ವೈರಲ್​ - Rowdy Cycle Ravi

ಚಾಲೆಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ನಿರ್ಮಾಪಕ ಉಮಾಪತಿ ಹಾಗೂ ಅವರ ಸಹೋದರನ ಕೊಲೆ ಯತ್ನಕ್ಕೆ ಯಾಕೆ ಪ್ರಯತ್ನಿಸಲಾಗಿದೆ ಎಂಬ ಬಗ್ಗೆ ಆರೋಪಿ ಕುಖ್ಯಾತ ರೌಡಿ ಬಾಂಬೆ ರವಿ ಅನಾಮಿಕರೊಬ್ಬರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದೆ.

dsd
ಆರೋಪಿ ಬಾಂಬೆ ರವಿ ಮಾತನಾಡಿರುವ ಆಡಿಯೋ ವೈರಲ್​
author img

By

Published : Jan 9, 2021, 6:15 PM IST

ಬೆಂಗಳೂರು: ಚಾಲೆಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ನಿರ್ಮಾಪಕ ಉಮಾಪತಿ ಹಾಗೂ ಅವರ ಸಹೋದರರನ್ನು ಕೊಲೆ ಮಾಡುವುದಾಗಿ ಕುಖ್ಯಾತ ರೌಡಿ ಬಾಂಬೆ ರವಿ ಅನಾಮಿಕರೊಬ್ಬರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದೆ.

ಅನಾಮಿಕನೊಬ್ಬ ಬಾಂಬೆ ರವಿ ಜೊತೆ ಮಾತನಾಡಿದ ಆಡಿಯೋ ಕ್ಲಿಪ್ ವೈರಲ್ ಆಗಿದ್ದು, ಕಳೆದ ಸಲ ಮಿಸ್ಸಾಗಿದ್ದಾನೆ‌. ಈ ಬಾರಿ ಹೊಡೆಯುತ್ತೇನೆ ಎಂದು ರಾಜಾರೋಷವಾಗಿ ಹೇಳಿಕೊಂಡಿದ್ದಾನೆ. ರಾಬರ್ಟ್ ಸಿನಿಮಾ ನಿರ್ಮಾಪಕನ ಹತ್ಯೆಗೆ ಸ್ಕೆಚ್ ಹಾಕಲು ಕಾರಣವೇನು ಎಂಬುದನ್ನ ತಿಳಿಸಿದ್ದಾನೆ. ಹಲವು ವರ್ಷಗಳಿಂದಲೂ ಬಾಂಬೆ ರವಿಗೂ ಹಾಗೂ ಮತ್ತೊಬ್ಬ ರೌಡಿ ಸೈಕಲ್ ರವಿಗೂ ದುಶ್ಮನಿ ಇದೆ. ಲ್ಯಾಂಡ್ ವಿಚಾರವಾಗಿ ಮತ್ತೊಂದು ಅಂಡರ್​ವರ್ಲ್ಡ್ ಖುರ್ಚಿಗಾಗಿ.

ಆರೋಪಿ ಬಾಂಬೆ ರವಿ ಮಾತನಾಡಿರುವ ಆಡಿಯೋ ವೈರಲ್​

ಸೈಕಲ್ ರವಿ ನಗರದಲ್ಲಿಯೇ ಕುಳಿತು ಬಾಲ ಬಿಚ್ಚಿದರೆ, ಬಾಂಬೆ ರವಿ ನೆದರ್​ಲ್ಯಾಂಡ್​ನಿಂದ ಎಲ್ಲ ಕೇಸುಗಳನ್ನ ಮಾಡುತ್ತಿದ್ದ. ಹಲವು ವರ್ಷಗಳಿಂದ ದೇಶ ಬಿಟ್ಟಿದ್ದ ಬಾಂಬೆ ರವಿ, ಸೈಕಲ್ ರವಿ ವಿಚಾರಕ್ಕೆ ತಲೆ ಕೆಡಿಸಿಕೊಂಡಿದ್ದ .ಇವರಿಬ್ಬರ ಸೇಡಿಗೆ ಅಡ್ಡ ಬಂದಿದ್ದು ಇದೇ ನಿರ್ಮಾಪಕ ಉಮಾಪತಿ ಎಂಬುದನ್ನ ಸ್ವತಃ ಬಾಂಬೆ ರವಿಯೇ ಹೇಳಿದ್ದಾನೆ ಎನ್ನಲಾಗಿದೆ‌.

ಆಡಿಯೊದಲ್ಲಿ ಏನಿದೆ..?: ರೌಡಿಶೀಟರ್ ಸೈಕಲ್ ರವಿಗೆ ಫಂಡಿಂಗ್ ಮಾಡುವ ಕೆಲಸವನ್ನು ಉಮಾಪತಿ ಮತ್ತು ಸಹೋದರ ದೀಪಕ್ ಮಾಡುತ್ತಿದ್ದಾರೆ. ಅಷ್ಟಲ್ಲದೇ ರಾಬರ್ಟ್ ಸಿನಿಮಾಗೆ 10 ಕೋಟಿ ಸೈಕಲ್ ರವಿನೇ ಕೊಟ್ಟಿದ್ದಾನೆ. 2016 ರಲ್ಲಿ ದೀಪಕ್‌ಗೆ ಕರೆ ಮಾಡಿ ನನ್ನ ಮತ್ತು ಸೈಕಲ್ ರವಿ ನಡುವಿನ ವೈರತ್ವದಲ್ಲಿ ಅಡ್ಡ ಬರಬೇಡ ಎಂದು ವಾರ್ನಿಂಗ್ ಮಾಡಿದ್ದರೂ ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ಇತ್ತೀಚೆಗೆ ನಮ್ಮ ಹುಡುಗರಿಂದ ಹಲ್ಲೆ ಮಾಡಿಸಲು ಮುಂದಾದೆ‌. ಹತ್ಯೆ ಪ್ಲಾನ್ ವಿಫಲವಾದ ನಂತರವೂ ಮೊನ್ನೆ ನಿರ್ಮಾಪಕ ಉಮಾಪತಿ ಸಹೋದರಿಗೆ ಕರೆ ಮಾಡಿ ಮತ್ತೆ ವಾರ್ನ್ ಮಾಡಿದ್ದೇನೆ. ಒಂದು ತಿಂಗಳಲ್ಲಿ ಹೊಡಿಸ್ತಿನಿ ಅಂತ ಎಚ್ಚರಿಕೆ ಕೊಟ್ಟಿದ್ದೇನೆ. ಇದಾದ ಬಳಿಕ ಉಮಾಪತಿ ಬ್ರದರ್ಸ್ ಸೈಕಲ್ ರವಿ ಜೊತೆ ನಾನು ವಾರ್ನ್ ಮಾಡಿರುವ ಬಗ್ಗೆ ಡಿಸ್ಕಸ್ ಮಾಡಿದ್ದಾರೆ. ಬಿಸಿನೆಸ್ ಮಾಡ್ಕೊಂಡು ಇರಬೇಕು. ಸಾಚಾಗಳ ಹಾಗೇ ಮಾತನಾಡುತ್ತಾರೆ. ಸಿಟಿಲಿರೋ ಎಲ್ಲರನ್ನು ಬಿಟ್ಟು ಇವರನ್ನು ಟಾರ್ಗೆಟ್ ಮಾಡೋಕೆ ನಾನೇನು ಹುಚ್ಚನ ಎಂದ ಬಾಂಬೆ ರವಿ ಹೇಳಿದ್ದಾನೆ ಎಂಬ ಆಡಿಯೊ ವೈರಲ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.