ಬೆಂಗಳೂರು: ಅತೃಪ್ತ ಶಾಸಕರ ಮನವೊಲಿಸುವಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ತಮ್ಮ ಕಸರತ್ತು ಮುಂದುವರೆಸಿದ್ದಾರೆ.
ಇಲ್ಲಿನ ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿರುವ ಶೆಟ್ಟಿಹಳ್ಳಿಯ ರಾಮಲಿಂಗಾರೆಡ್ಡಿ ತೋಟಕ್ಕೆ ಭಾನುವಾರ ಸಿಎಂ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದರು. ಅವರ ಜತೆಯಲ್ಲಿ ಉಪಮುಖ್ಯಮಂತ್ರಿ ಜಿ.ಪರನಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ ಕೂಡಾ ಆಗಮಿಸಿದ್ದರು. ರಾಜ್ಯದಲ್ಲಿ ರಾಜೀನಾಮೆ ಪರ್ವ ಶುರುವಾಗಿ ಈಗ ರಾಜೀನಾಮೆ ನೀಡಿರುವವರ ಮನವೊಲಿಸುವ ಕಸರತ್ತು ನಡೆದಿದೆ. ಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ಹೊರ ಹಾಕಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸಂಧಾನಕ್ಕೆ ಒಪ್ಪಿಕೊಂಡರಾ ಇಲ್ಲವಾ ನಾಳೆ ಅಧಿವೇಶನಕ್ಕೆ ಬರ್ತಾರಾ ಇಲ್ವಾ ಅನ್ನೋದು ಈವರೆಗೂ ಗೊತ್ತಾಗಿಲ್ಲ. ಆದರೆ, ಸ್ಪೀಕರ್ ಭೇಟಿಗೆ ನಾಳೆ ರಾಮಲಿಂಗಾರೆಡ್ಡಿಯವರು ತೆರಳುವ ಸಾಧ್ಯತೆಯಿದೆ.