ಬೆಂಗಳೂರು: ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ನಟೋರಿಯಸ್ ರೌಡಿಶೀಟರ್ ಜೆಸಿಬಿ ನಾರಾಯಣ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ.
ಹುಳಿಮಾವು ಡಿಎಲ್‌ಎಫ್ ರಸ್ತೆಯಲ್ಲಿ ನಾರಾಯಣನ ಬರುವಿಕೆಯ ಮಾಹಿತಿ ಅರಿತ ದುಷ್ಕರ್ಮಿಗಳು ಆತನ ವಿರುದ್ಧ ದಾಳಿಗೆ ಹೊಂಚು ಹಾಕಿದ್ದರು. ನಾಲ್ಕೈದು ಆರೋಪಿಗಳು ಮಾರಕಾಸ್ತ್ರಗಳನ್ನು ಹಿಡಿದು ದಾಳಿಗೆ ಸಜ್ಜಾಗಿದ್ದರು. ಜೆಸಿಬಿ ನಾರಾಯಣನ ಕಾರು ಬರುತ್ತಿದ್ದಂತೆ ಆರೋಪಿಗಳ ಗುಂಪು ದಾಳಿಗೆ ಮುಂದಾಗಿತ್ತು.
ಇದನ್ನೂ ಓದಿ: ದಾವಣಗೆರೆಯಲ್ಲಿ 'ಪೊಲೀಸರ ವಶದಲ್ಲೇ ವ್ಯಕ್ತಿ ಸಾವು': ಠಾಣೆ ಬದಲು ಲಾಡ್ಜ್ನಲ್ಲಿ ವಿಚಾರಣೆ?
ಅಪಾಯದ ಮೂನ್ಸೂಚನೆ ಅರಿತ ಆತ ಕೂಡಲೇ ಸಿನಿಮೀಯ ರೀತಿಯಲ್ಲಿ ಕಾರು ರಿವರ್ಸ್ ತೆಗೆದುಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.