ETV Bharat / state

ಎಟಿಎಂ ಹಣ ಕದ್ದ ಕೇಸ್​ಗೆ ಟ್ವಿಸ್ಟ್.. ಅತ್ತೆ ಮಗಳಿಗಾಗಿ ₹65 ಲಕ್ಷ ದೋಚಿದ ಖದೀಮ.. - Subramaniyanagar Police Station

ಯೋಗೀಶ್​ಗೆ ಅತ್ತೆ ಮಗಳ ಮೇಲೆ ಪ್ರೀತಿ ಇತ್ತಂತೆ. ಹೇಗಾದರೂ ಮಾಡಿ ಆಕೆ ಜೊತೆಯಲ್ಲಿಯೇ ಜೀವನಪೂರ್ತಿ ಸೆಟಲ್ ಆಗಬೇಕೆಂದು ಯೋಗೇಶ್ ಹಣ ಎಗರಿಸಿದ್ದ. ಬಳಿಕ ಅತ್ತೆ ಮಗಳ ಜೊತೆ ಎಸ್ಕೇಪ್ ಆಗಿದ್ದಾನೆ..

atm-money-theft
ಅತ್ತೆ ಮಗಳಿಗಾಗಿ 65 ಲಕ್ಷ ದೋಚಿದ ಖದೀಮ
author img

By

Published : Feb 8, 2021, 9:29 PM IST

ಬೆಂಗಳೂರು : ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮಂಗಳವಾರ ಎಟಿಎಂಗೆ ಹಾಕಬೇಕಿದ್ದ 65 ಲಕ್ಷ ರೂಪಾಯಿ ಹಣದ ಸಮೇತ ಸಿಬ್ಬಂದಿ ಎಸ್ಕೇಪ್ ಆದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಪೂರ್ವನಿಯೋಜಿತ ಸಂಚು ರೂಪಿಸಿಕೊಂಡ ಕಳ್ಳತನಕ್ಕಿಳಿದಿದ್ದ ಚಿಕ್ಕಬಿದರಕಲ್ಲಿನ ಆರೋಪಿ ಯೋಗೇಶ್, ಹಣದ ಸಮೇತ ತನ್ನ ಅತ್ತೆ ಮಗಳ ಜೊತೆ ಎಸ್ಕೇಪ್ ಆಗಿರುವ ವಿಚಾರ ಗೊತ್ತಾಗಿದೆ. ಹಣ ದೋಚಿ ಎಸ್ಕೇಪ್ ಆಗಿರುವ ಯೊಗೇಶ್‌ಗೆ ಅತ್ತೆ ಮಗಳಿದ್ದಳು.

ಆಕೆಗೆ ಮದುವೆಯಾಗಿದ್ದು ಕೌಟುಂಬಿಕ ಕಲಹದಿಂದ ಗಂಡನಿಂದ ದೂರವಾಗಿದ್ದಳು. ಇತ್ತ ಯೋಗೇಶ್​ಗೆ ಮದುವೆಯಾಗಿದ್ದು, ಪತ್ನಿ ಜೊತೆ ಅಷ್ಟಕಷ್ಟೇಯಂತೆ.

ಇದೇ ಕಾರಣಕ್ಕೆ ಯೋಗೀಶ್​ಗೆ ಅತ್ತೆ ಮಗಳ ಮೇಲೆ ಪ್ರೀತಿ ಇತ್ತಂತೆ. ಹೇಗಾದರೂ ಮಾಡಿ ಆಕೆ ಜೊತೆಯಲ್ಲಿಯೇ ಜೀವನಪೂರ್ತಿ ಸೆಟಲ್ ಆಗಬೇಕೆಂದು ಯೋಗೇಶ್ ಹಣ ಎಗರಿಸಿದ್ದ. ಬಳಿಕ ಅತ್ತೆ ಮಗಳ ಜೊತೆ ಎಸ್ಕೇಪ್ ಆಗಿದ್ದಾನೆ.

ಇತ್ತ ಯೊಗೀಶ್ ಹಣ ದೋಚಿದ ಬಳಿಕ ಒಂದು ಆಟೋ ಹಿಡಿದಿದ್ದ. ಬಳಿಕ ತನ್ನ ಪ್ರೇಯಸಿಯನ್ನು ಅದೊಂದು ನಿಗೂಢ ಪ್ರದೇಶಕ್ಕೆ ಕರೆಸಿಕೊಂಡು ಆಕೆಯ ಜೊತೆ ಎಸ್ಕೇಪ್ ಆಗಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.