ETV Bharat / state

ಮತಾಂತರಗೊಂಡವರೇ ದೂರು ನೀಡಿದರೆ ಪರಿಗಣಿಸಿ; ಕುಟುಂಬ ಸದಸ್ಯರ ದೂರಿಗೆ ಬೆಲೆ ಬೇಡ: ಮರಿತಿಬ್ಬೇಗೌಡ

ವಿಧಾನ ಪರಿಷತ್​ನಲ್ಲಿ ಇಂದು ಮತಾಂತರ ನಿಷೇಧ ಕಾಯ್ದೆ ಕುರಿತು ಚರ್ಚೆ ವೇಳೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಸರ್ಕಾರ ಇಂದು ಈ ಕಾಯ್ದೆ ಜಾರಿ ಮಾಡುವ ಮೂಲಕ ಜಾತಿ ನಡುವೆ ಅಂತರ ತರುವ ಕಾರ್ಯ ಆಗುತ್ತದೆ ಎಂದು ಹೇಳಿದರು

KN_BNG_0
ನಿಷೇಧ ಕಾಯ್ದೆ ಕುರಿತು ಚರ್ಚೆ
author img

By

Published : Sep 15, 2022, 11:01 PM IST

ಬೆಂಗಳೂರು: ಮತಾಂತರ ಗೊಂಡವರೇ ತಮ್ಮ ಮೇಲೆ ಬಲವಂತ ಹಾಗೂ ಒತ್ತಡ ಹೇರಲಾಗಿದೆ ಎಂದು ಮನವಿ ಮಾಡಿದರೆ ಅದು ಮಾನ್ಯವಾಗಬೇಕು. ಕುಟುಂಬ ಸದಸ್ಯರು ನೀಡುವ ದೂರು ಪರಿಗಣಿಸುವುದು ಎಷ್ಟು ಸರಿ ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.

ವಿಧಾನ ಪರಿಷತ್​ನಲ್ಲಿ ಮತಾಂತರ ನಿಷೇಧ ಕಾಯ್ದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಹೊಟ್ಟೆ, ಬಟ್ಟೆಗೆ ನೆರವಾಗುವವರೇ ನಿಜವಾಧ ಧರ್ಮೀಯರು. ಮತಾಂತರ ದೊಡ್ಡ ಸಮಸ್ಯೆ ಆಗಿಸುವ ಯತ್ನ ಬೇಡ. ಸರ್ಕಾರ ಇಂದು ಈ ಕಾಯ್ದೆ ಜಾರಿ ಮೂಲಕ ಜಾತಿ ನಡುವೆ ಅಂತರ ತರುವ ಕಾರ್ಯ ಆಗುತ್ತದೆ. ಜಾತಿ, ಧರ್ಮಗಳ ಸಂಘರ್ಷದಿಂದ ಯಾವ ದೇಶವೂ ಉದ್ಧಾರವಾಗಲು ಸಾಧ್ಯವಿಲ್ಲ. ಕಾಯ್ದೆ ಜಾರಿ ಮೂಲಕ ದಲಿತರು, ಹಿಂದುಳಿದವರಿಗೆ ಒಂದಿಷ್ಟು ಸವಲತ್ತು ಕಲ್ಪಿಸುವ ಕಾರ್ಯ ಮಾಡಬೇಕು ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ನಾನು ಸ್ವ ಇಚ್ಛೆಯಿಂದ ಹೋಗುತ್ತಿದ್ದೇನೆ ಎಂದು ಘೋಷಿಸಬೇಕು. ಆದರೆ ಪರಿವರ್ತನೆಯಾಗಿ ಮೂಲ ಜಾತಿಯ ಸೌಲಭ್ಯ, ಸವಲತ್ತನ್ನು ಬಳಸಿಕೊಳ್ಳುತ್ತಾರೆ. ಇದು ಸರಿಯಲ್ಲ. ಮತಾಂತರ ಆದರೆ ಮಾಹಿತಿ ನೀಡಬೇಕಾಗುತ್ತದೆ. ಹಲವು ವರ್ಷದಿಂದ ಸರ್ಕಾರದ ಸವಲತ್ತನ್ನು ಬಳಸಿಕೊಳ್ಳುತ್ತಿದ್ದಾರೆ. ಗಣತಿಗೆ ಬಂದಾಗ ಹೇಳುವ ಜಾತಿ ಒಂದು, ಆಚರಣೆ ಮಾಡುವ ಜಾತಿ ಒಂದಾಗುತ್ತದೆ. ಇದರಿಂದ ಮತಾಂತರ ಆದ ತಕ್ಷಣ ಘೋಷಿಸಬೇಕು ಎಂದರು.

ದಲಿತರು ಹೆಚ್ಚಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ: ಮರಿತಿಬ್ಬೇಗೌಡರು ಮಾತು ಮುಂದುವರಿಸಿ, ಮತಾಂತರ ನಂತರ ಆ ವ್ಯಕ್ತಿಗೆ ಸಿಗುವ ಹಿಂದಿನ ಜಾತಿಯ ಸವಲತ್ತನ್ನು ಕತ್ತರಿಸುವ ಕಾರ್ಯವನ್ನು ಸ್ವಾಗತಿಸುತ್ತೇನೆ. ಆದರೆ ಮೂಲಭೂತವಾದಿಗಳು, ಮನು ಸಮುದಾಯವನ್ನು ಪ್ರಮುಖವಾಗಿಟ್ಟುಕೊಂಡು ಈ ಬಿಲ್ ತರುವ ಯತ್ನ ನಡೆಯುತ್ತಿದೆ. ದಲಿತರು ಹೆಚ್ಚಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದೆ. ಅದನ್ನೇ ಪರಿಗಣಿಸಿ ಬಿಲ್ ತರಬಾರದು. ಎರಡು ಮಹಾಯುದ್ಧ ಮೂಲಕ ವಿಶ್ವದಲ್ಲಿ ರಕ್ತಪಾತ ಮಾಡಿದವರು ಕ್ರಿಶ್ಚಿಯನ್ನರು. ಹಾಗಂತ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಸ್ಮರಿಸಬೇಕು.

ಇಡೀ ವಿಶ್ವವೇ ಕಾಲಾನುಕ್ರಮವಾಗಿ ಜಾತಿ ಬದಲಾಗಿದೆ. ಶತಮಾನದ ಹಿಂದೆ ನಾವು ಯಾವ ಜಾತಿಯಲ್ಲಿದ್ದೆವು ಎನ್ನುವುದು ಗೊತ್ತಿಲ್ಲ. ಈ ಬಿಲ್ಲನ್ನು ತರಾತುರಿಯಲ್ಲಿ ಸುಗ್ರೀವಾಜ್ಞೆ ಮೂಲಕ ತರುವ ಅಗತ್ಯ ಇರಲಿಲ್ಲ. ಸಂತೋಷ, ಆತ್ಮಶಾಂತಿಗೆ ಮತಾಂತರ ಆಗುವ ಅರಿವು ಮೂಡಿದರೆ ಕಾನೂನಿನ ಅಗತ್ಯ ಇಲ್ಲ ಎಂದರು.

ಶಿವಮೊಗ್ಗದಲ್ಲಿ‌ ಗಣೇಶ ಮೂರ್ತಿ ಮೆರವಣಿಗೆ ಸಂದರ್ಭ ಗೋಡ್ಸೆ ಭಾವಚಿತ್ರ ಇರಿಸಿರುವುದು ಹಾಗೂ ಅಶೋಕ ಸ್ಥಂಭದ ಮೇಲೆ ಭಗವಾದ್ವಜ ಹಾರಿಸಲಾಗಿದೆ ಎಂದು ಮರಿತಿಬ್ಬೇಗೌಡರು ಆರೋಪಿಸಿದಾಗ ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಇಂತಹ ಸ್ಥಿತಿ ಆಗಿಲ್ಲ. ಗೋಡ್ಸೆ ಚಿತ್ರ ಬಳಸಿಲ್ಲ ಎಂದರು. ಭಗವಾದ್ವಜ ಹಾರಿಸಿಲ್ಲ, ಅಶೋಕ ಸ್ಥಂಭದ ಕಂಬಕ್ಕೆ ಕೇಸರಿ ಬಟ್ಟೆ ಸುತ್ತಲಾಗಿತ್ತು. ಸದನಕ್ಕೆ ತಪ್ಪು ಮಾಹಿತಿ ಕೊಡುವುದು ಬೇಡ ಎಂದರು. ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ವಿಷಯ ಸಮರ್ಥಿಸಿಕೊಂಡರು. ಈ ರೀತಿ ಯಾವುದೇ ಬೆಳವಣಿಗೆ ಆಗದೆ, ತಪ್ಪು ಮಾಹಿತಿ ಬಿತ್ತರಿಸಲಾಗಿದೆ ಎಂದರು.

ಈ ಸರ್ಕಾರ ಹಂತಹಂತವಾಗಿ ಸಂವಿಧಾನವನ್ನೇ ಕಬಳಿಸುವ ಯತ್ನ ನಡೆಸಿದ್ದಾರೆ. ಬಿಲ್​ನ ಕೆಲ ಅಂಶ ಬದಲಿಸಬೇಕು. ಆತ್ಮಸಾಕ್ಷಿಯಿಂದ ಈ ಬಿಲ್ ಖಂಡಿಸುತ್ತೇನೆ ಎಂದರು. ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಮಾತನಾಡಿ, ಧಾರ್ಮಿಕ ಸ್ವಾತಂತ್ರ್ಯ ಹಕ್ಕುಗಳ ಸಂರಕ್ಷಣಾ ವಿದೇಯಕಕ್ಕೆ ತಿದ್ದುಪಡಿ ಅಗತ್ಯ ಇರಲಿಲ್ಲ. ಇರುವ ಕಾಯ್ದೆಯೇ ಸಮರ್ಪಕವಾಗಿತ್ತು. ಹಲವು ರಾಜ್ಯದಲ್ಲಿ ಈ ಕಾಯ್ದೆ ಇದೆ. ಇಲ್ಲಿ ತರುತ್ತಿರುವ ಬದಲಾವಣೆಯ ಹಲವು ಅಂಶ ಇತರೆ ರಾಜ್ಯದಲ್ಲಿ ಇರುವ ಕಾನೂನಿನಲ್ಲಿ ಇಲ್ಲ.

ಶೋಷಣೆಗೆ ಒಳಗಾದವರನ್ನು ಇನ್ನಷ್ಟು ಶೋಷಿತರನ್ನಾಗಿಸಲಾಗುತ್ತಿದೆ: ಜಾರಿಯಲ್ಲಿರುವ ಕಾನೂನನ್ನು ಕುರಿತ ಪ್ರಶ್ನೆ ನಾಲ್ಕು ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆ ನಡೆಯುತ್ತಿದೆ. ತರಾತುರಿಯಲ್ಲಿ ಈ ಕಾಯ್ದೆ ಜಾರಿಗೆ ತರಲು ಮುಂದಾಗುವ ಅಗತ್ಯವೇನಿತ್ತು. ಈಗಿರುವ ಕಾನೂನೇ ಬಲವಾಗಿದೆ. ಇಲ್ಲಿ ಈಗ ಸಂವಿಧಾನ ವಿರೋಧಿ ಅಂಶಗಳನ್ನು ಸೇರಿಸಲಾಗಿದೆ. ಸಂವಿಧಾನ ವಿರೋಧಿ ಹಾಗೂ ಹಲವು ಹೈಕೋರ್ಟ್ ಗಳ ಆದೇಶದ ವಿರುದ್ಧವಾಗಿದೆ. ಇದೊಂದು ಅವೈಜ್ಞಾನಿಕ ಕಾನೂನಾಗಿದೆ. ಶೋಷಿತರಿಗೆ ಇನ್ನಷ್ಟು ತಾರತಮ್ಯ ಮಾಡಲು ಈ ಕಾನೂನು ತರುತ್ತಿದ್ದೀರಿ.

ಮಹಿಳೆಯರು, ಹಿಂದುಳಿದ ವರ್ಗದವರು ಹಾಗೂ ಸಾಮಾನ್ಯ ವರ್ಗದವರಿಗೆ ಒಂದೊಂದು ವಿಧದ ಶಿಕ್ಷೆ ನೀಡುವುದು ಸರಿಯಲ್ಲ. ಶೋಷಣೆಗೆ ಒಳಗಾದವರನ್ನು ಇನ್ನಷ್ಟು ಶೋಷಿತರನ್ನಾಗಿಸಲಾಗುತ್ತಿದೆ. ಇನ್ನಷ್ಟು ನೋವು ಹೆಚ್ಚಿಸಿದೆ. ಈ ಬಿಲ್ ಜನವಿರೋಧಕ್ಕೆ ಒಳಗಾಗಲಿದೆ. ತಿರಸ್ಕರಿಸುತ್ತಾರೆ. ಈ ಬಿಲ್ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಮಾತನಾಡಿ, ಸ್ವಾತಂತ್ರ್ಯಾನಂತರ ಹೆಚ್ಚು ಮತಾಂತರ ನಡೆಯುತ್ತಿಲ್ಲ. ತುಳಿತಕ್ಕೆ ಒಳಗಾದ ವ್ಯಕ್ತಿ ಬಯಸುವ ಸ್ಟೇಟಸ್ಸೇ ಮತಾಂತರ. ಪ್ರತಿಯೊಬ್ಬ ವ್ಯಕ್ತಿಗೂ ಗೌರವ ಸಿಕ್ಕರೆ ಮತಾಂತರ ಅನಗತ್ಯ. ವೈಯಕ್ತಿಕ ವಾಗಿ ಈ ಕಾನೂನನ್ನು ತರಲಾಗಿದೆ. 1977 ಆದೇಶದ ಆಧಾರದ ಮೇಲೆ ಕಾಯ್ದೆ ತರಲಾಗುತ್ತಿದೆ.

ಸಮುದಾಯ, ದೇಶ, ರಾಜ್ಯ, ನಗರ ಆಧಾರಿತವಾಗಿ ಬಿಲ್ ತಂದಿದ್ದರೆ ಸ್ವಾಗತಿಸುತ್ತಿದ್ದೆ. ವ್ಯಕ್ತಿಗತವಾಗಿ ತರುವ ಯತ್ನ ಆಗಿದೆ. ಏನೋ ಪ್ರಭಾವ ಈ ಬಿಲ್ ಹಿಂದೆ ಇದೆ. ಮನಸ್ಸಿನ ನೆಮ್ಮದಿ, ನಿರಾಳತೆಗಾಗಿ ಮತಾಂತರ ಗೊಳ್ಳುವ ವ್ಯಕ್ತಿಗೆ ಮುಂದೆ ಸಾಕಷ್ಟು ಮಾರಕವಾಗುವ ರೀತಿಯ ಅಂಶ ಇದರಲ್ಲಿದೆ ಎಂದರು.

ಸಮುದಾಯವನ್ನು ಗುರಿಯಾಗಿಸುವ ಹಿಡನ್​ ಅಜೆಂಡ: ಜೆಡಿಎಸ್ ಸದಸ್ಯ ಭೋಜೇಗೌಡರು 'ಮೊದಲು ಮಾನವನಾಗು...' ಎಂಬ ಹಾಡಿನ ಮೂಲಕ ಮಾತು ಆರಂಭಿಸಿ, ಈ ಮತಾಂತರ ಕಾಯ್ದೆ ಸಂವಿಧಾನದಲ್ಲೇ ಅಡಕವಾಗಿದೆ. ಇದನ್ನು ಮತ್ತೊಮ್ಮೆ ತರುವ ಅಗತ್ಯ ಏನಿತ್ತು. ಇಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸುವ ಹಿಡನ್ ಅಜೆಂಡಾ ಇದೆ. ಭಯಪೀಡಿತರಾಗಿ ಯಾರೂ ಬದುಕಬಾರದು. ಅತ್ಯುತ್ತಮ ಶಿಕ್ಷಣ ನೀಡುವಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯ ಕೊಡುಗೆಯನ್ನು ಭೋಜೇಗೌಡ ರು ಸ್ಮರಿಸಿದಾಗ ಸದನದಲ್ಲಿ ದೊಡ್ಡ ಗಲಾಟೆ ಉಂಟಾಯಿತು.

ಕ್ರಿಶ್ಚಿಯನ್ ಸಮುದಾಯದ ಶಿಕ್ಷಣ ಸಂಸ್ಥೆಗಳ ವಿಚಾರವಾಗಿ ಸಾಕಷ್ಟು ವಾದ ವಿವಾದ ನಡೆಯಿತು. 'ದಾಸನಾಗು, ವಿಶೇಷನಾಗು' ಹಾಗೂ 'ಮುನಿಸು ತರವೇ ಮುಗುದೆ'‌ ಹಾಡನ್ನು ಹಾಡಿದ ಭೋಜೇಗೌಡರು ಈ ಬಿಲ್ ಗೆ ವಿರೋಧ ಇದೆ, 4 ಮತ್ತು 12 ನೇ ಅಂಶ ಬದಲಿಸಬಹುದು ಎಂದು ಒತ್ತಾಯಿಸಿದರು. ಬಿಜೆಪಿ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಭಾರತಿ ಶೆಟ್ಟಿ, ತೇಜಸ್ವಿನಿಗೌಡ, ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್, ಅರವಿಂದ ಕುಮಾರ್ ಅರಳಿ ಮತ್ತಿತರರು ಮಾತನಾಡಿದರು.

ಇದನ್ನೂ ಓದಿ: ಬೆಂಗಳೂರು ಮಳೆ ಹಾನಿಯ ತಪ್ಪಿನ ಹೆಚ್ಚು ಭಾಗ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ: ರಾಮಲಿಂಗಾ ರೆಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.