ETV Bharat / state

'ರಾಜೀನಾಮೆ ನೀಡಿದ ಶಾಸಕರಿಗೆ ಮರುಚುನಾವಣೆಗೆ ನಿಲ್ಲಲು ಅವಕಾಶ ನೀಡಬಾರದು'

ಇಂದು ರಾಜ್ಯ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಇಂದು ಸಂವಿಧಾನದ 10ನೇ ಅನುಚ್ಛೇದ, ಪಕ್ಷಾಂತರ ನಿಷೇಧ ಕಾಯ್ದೆ ಕುರಿತು ಆಡಳಿತ ಮತ್ತು ಪ್ರತಿಪಕ್ಷದ ಹಿರಿಯ ಸಂಸದೀಯ ನಾಯಕರ ಸಭೆ ನಡೆಸಿದ್ದರು. ಸ್ಪೀಕರ್​​ಗೆ ಅನರ್ಹತೆ ಸಂಬಂಧ ಪರಮೋಚ್ಛ ಅಧಿಕಾರ ಇರಬೇಕು. ಕಾಲಮಿತಿಯೊಳಗೆ ಈ ಅನರ್ಹತೆಯ ಪ್ರಕರಣ ವಿಚಾರಣೆ ಮುಕ್ತಾಯ ಆಗಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ.

Vishweshwara hegade kageri
ವಿಶ್ವೇಶ್ವರ ಹೆಗಡೆ ಕಾಗೇರಿ
author img

By

Published : May 28, 2020, 6:41 PM IST

ಬೆಂಗಳೂರು: ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸ್ಥಳ ಭೇಟಿಗೆ ತಡೆಯಾಜ್ಞೆ ಆದೇಶವನ್ನು ಸಮಿತಿಯ ಎಲ್ಲ ಸದಸ್ಯರು ಪಾಲಿಸಬೇಕು ಎಂದು ರಾಜ್ಯ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದರು.

ರಾಜ್ಯ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿ

ಆಡಳಿತ ಮತ್ತು ಪ್ರತಿಪಕ್ಷದ ಹಿರಿಯ ಸಂಸದೀಯ ನಾಯಕರ ಸಭೆ ಕರೆದಿದ್ದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸ್ಥಳ ಭೇಟಿಗೆ ತಡೆಯಾಜ್ಞೆ ವಿಚಾರವಾಗಿ ಎಚ್.ಕೆ. ಪಾಟೀಲ್ ಅವರು ಪತ್ರ ಬರೆದಿರುವುದನ್ನು ಪರಿಶೀಲಿಸುತ್ತೇನೆ. ಯಾವುದೇ ಸಮಿತಿಯ ಅಧ್ಯಕ್ಷರು, ಸಭಾಧ್ಯಕ್ಷರ ಆದೇಶವನ್ನು ಪಾಲಿಸಬೇಕು ಎಂದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ತಡೆಯಾಜ್ಞೆ ನೀಡಲಾಗಿದ್ದು, ಯಾವುದೇ ಸಭೆ ನಡೆಸಲು ಅವಕಾಶ ಇಲ್ಲ. ದಿಗ್ಬಂಧನ ಮಾರ್ಗಸೂಚಿ ಅನ್ವಯ ಈ ಆದೇಶ ಹೊರಡಿಸಲಾಗಿದ್ದು, ಇದು ಸಡಿಲಿಕೆಯಾದ ಬಳಿಕ ಈ ಬಗ್ಗೆ ಮರುಪರಿಶೀಲನೆ ಮಾಡಲಾಗುತ್ತದೆ. ಅಲ್ಲಿವರೆಗೆ ಆ ಆದೇಶವನ್ನು ಪಾಲಿಸಬೇಕು ಎಂದು ಹೇಳಿದರು.

ಸ್ಪೀಕರ್​​ಗೆ ಸರ್ವಾಧಿಕಾರ ನೀಡಬೇಕು:

ಪಕ್ಷಾಂತರ ನಿಷೇಧ ಕಾಯ್ದೆಯ 10ನೇ ಅನುಚ್ಛೇದ ಸಂಬಂಧ ನಡೆದ ಸಂಸದೀಯ ಗಣ್ಯರ ಸಭೆಯಲ್ಲಿ ಅನರ್ಹತೆ ಸಂಬಂಧ ಸ್ಪೀಕರ್​​ಗೆ ಸರ್ವಾಧಿಕಾರ ನೀಡಬೇಕು ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಇಂದು 25 ಸಂಸದೀಯರ ಜೊತೆ ಸಮಾಲೋಚನೆ ನಡೆಸಲಾಗಿದ್ದು, ಸಿಎಂ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಪ್ರಮುಖ ನಾಯಕರು ಭಾಗಿಯಾಗಿದ್ದರು ಎಂದು ತಿಳಿಸಿದರು.

ಪ್ರಸಕ್ತ ರಾಜಕೀಯ ಪರಿಸ್ಥಿಗಳು, ರಾಜಕೀಯ ಪಕ್ಷಗಳ ಬಗ್ಗೆ ಚರ್ಚೆಯಾಗಿದೆ. ಚುನಾವಣಾ ಆಯೋಗ, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಭಿಪ್ರಾಯ ನೀಡಿದ್ದಾರೆ. ಶಾಸಕಾಂಗದ ಘನತೆ, ಗೌರವವನ್ನು ಕಾಪಾಡುವ ಕುರಿತು ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ಪೀಠಾಸೀನ ಅಧಿಕಾರಿಯಾದ ಸ್ಪೀಕರ್​​ಗೆ ಅನರ್ಹತೆ ಸಂಬಂಧ ಪರಮೋಚ್ಛ ಅಧಿಕಾರ ಇರಬೇಕು. ಕಾಲಮಿತಿಯೊಳಗೆ ಈ ಅನರ್ಹತೆಯ ಪ್ರಕರಣ ವಿಚಾರಣೆ ಮುಕ್ತಾಯ ಆಗಬೇಕು. ರಾಜೀನಾಮೆ ನೀಡಿದ ಶಾಸಕರಿಗೆ ಮರುಚುನಾವಣೆಗೆ ನಿಲ್ಲಲು ಅವಕಾಶ ನೀಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ವಿವರಿಸಿದರು.

ಅನರ್ಹ ಶಾಸಕರ ಕುಟುಂಬ ವರ್ಗದವರು ಸ್ಪರ್ಧಿಸದಂತೆ ತಿದ್ದುಪಡಿ ತರಬೇಕು. ಚುನಾವಣೋತ್ತರ ಮೈತ್ರಿಗೂ ಅವಕಾಶವನ್ನೂ ನೀಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅನರ್ಹತೆ ವಿಚಾರವಾಗಿ ನ್ಯಾಯಾಂಗದ ಹಸ್ತಕ್ಷೇಪ ಮಾಡ ಕೂಡದು. ಸ್ಪೀಕರ್​ಗೆ ಎಲ್ಲಾ ಸರ್ವಾಧಿಕಾರ ಇರಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ ಎಂದರು.

ಜೂ.10ರ ಒಳಗೆ ಸಾರ್ವಜನಿಕರು ವಿಧಾನಸಭೆ ಕಾರ್ಯದರ್ಶಿಗೆ ತಮ್ಮ ಅಭಿಪ್ರಾಯ ‌ನೀಡಬೇಕು. ವಿಧಾನಪರಿಷತ್ ಸದಸ್ಯರ ಜೊತೆನೂ ಚರ್ಚೆ ಮಾಡುತ್ತೇನೆ. ಜೂನ್ 5 ರಂದು ಪರಿಷತ್ ಸದಸ್ಯರ ಜೊತೆ ಸಮಾಲೋಚನೆ ನಡೆಸಲಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.