ಬೆಂಗಳೂರು : ವಿಡಿಯೋ ಕರೆ ಮಾಡಿ ಹೆಂಡತಿ ಮುಖ ತೋರಿಸು ಎಂದಿದ್ದಕ್ಕೆ ಆಕ್ರೋಶಗೊಂಡು ಪ್ರಶ್ನಿಸಿದ ವ್ಯಕ್ತಿಗೆ ಕತ್ತರಿಯಿಂದ ಹೊಟ್ಟೆಗೆ ಚುಚ್ಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಹಲ್ಲೆಗೊಳಲಾದ ರಾಜೇಶ್ ಮಿಶ್ರಾ ಎಂಬುವರು ನೀಡಿದ ದೂರಿನ ಮೇರೆಗೆ ಸುರೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ : ಇಲ್ಲಿನ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 29ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೋರಮಂಗಲದ ವೆಂಕಟಾಪುರದಲ್ಲಿ ವಾಸವಾಗಿರುವ ಮಿಶ್ರಾ ಎಚ್ಎಸ್ಆರ್ ಲೇಔಟ್ನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಕೆಲಸ ಮಾಡುತ್ತಿದ್ದರು. ಆರೋಪಿ ಸುರೇಶ್ ಕೂಡ ಇಲ್ಲೇ ಕೆಲಸ ಮಾಡುತ್ತಿದ್ದ.
ಕಳೆದ ಜನವರಿ 29 ರಂದು ಮಧ್ಯಾಹ್ನ ರಾಜೇಶ್ ಮಿಶ್ರಾ ಪತ್ನಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದರು. ಈ ವೇಳೆ ಇದನ್ನು ಆರೋಪಿ ಸುರೇಶ್ ಗಮನಿಸಿದ್ದಾರೆ. ಈ ವೇಳೆ ಸುರೇಶ್ ವಿಡಿಯೋ ಕಾಲ್ನಲ್ಲಿ ರಾಜೇಶ್ ಮಿಶ್ರಾನಲ್ಲಿ ಪತ್ನಿಯನ್ನು ತೋರಿಸುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ರಾಜೇಶ್ ಸುರೇಶನನ್ನು ಬೈದಿದ್ದಾರೆ. ಬಳಿಕ ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಗಲಾಟೆ ನಡೆದಿದೆ.
ಈ ಮಧ್ಯೆ ಸುರೇಶ್ ಅಂಗಡಿಯಲ್ಲಿದ್ದ ಬಟ್ಟೆ ಕತ್ತರಿಸುವ ಕತ್ತರಿಯಿಂದ ರಾಜೇಶ್ ಮಿಶ್ರಾ ಹೊಟ್ಟೆಯ ಎಡಭಾಗಕ್ಕೆ ಚುಚ್ಚಿದ್ದಾರೆ. ಈ ವೇಳೆ ಗಾಯಗೊಂಡ ಮಿಶ್ರಾರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ಗದಗ: ಗೂಂಡಾ ಕಾಯ್ದೆಯಡಿ ಬಂಧಿಸಲು ಹೋದ ಪೊಲೀಸರಿಗೇ ಜೀವ ಬೆದರಿಕೆ ಹಾಕಿದ ಕಿರಾತಕರು