ETV Bharat / state

ಬೆಂಗಳೂರು: ರೌಡಿಶೀಟರ್ ಸಹಚರರಿಂದ ಸ್ನೇಹಿತರ ಮೇಲೆ ಹಲ್ಲೆ - ಕ್ರೈಂ ಸುದ್ದಿಗಳು

ಆರೋಪಿಗಳು ಬಾರ್​ನಲ್ಲಿ ಹಲ್ಲೆ ನಡೆಸಿರುವುದಲ್ಲದೇ ಕಾರಿನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ.

Assault on friends by rowdysheeter friends
ರೌಡಿಶೀಟರ್ ಸಹಚರರಿಂದ ಸ್ನೇಹಿತರ ಮೇಲೆ ಹಲ್ಲೆ
author img

By ETV Bharat Karnataka Team

Published : Oct 3, 2023, 9:09 AM IST

ಬೆಂಗಳೂರು: ಹವಾ ಸೃಷ್ಟಿಸಲು ವಿನಾಕಾರಣ ಸ್ನೇಹಿತರ ಮೇಲೆ ಹಲ್ಲೆ ಮಾಡಿರುವ ಘಟನೆ ಅಕ್ಟೋಬರ್ 1 ರಂದು ರಾತ್ರಿ ಕಲಾಸಿಪಾಳ್ಯ ಮುಖ್ಯರಸ್ತೆಯ ಶಮಂತ್ ಬಾರ್​ನಲ್ಲಿ ನಡೆದಿದೆ. ಮೋಹನ್ ಕುಮಾರ್ ಹಾಗೂ ಸತೀಶ್ ಎಂಬಾತನ ಮೇಲೆ ರೌಡಿಶೀಟರ್ ವೀರು ಸಹಚರರಾದ ಚಂದನ್, ಗಿರಿ, ದೀಪು, ಮಂಜ ಮತ್ತಿತರ ಆರೋಪಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ.

ಚಂದನ್ ಅಲಿಯಾಸ್ ವೀರು ಬೆಂಗಳೂರು ಪಶ್ಚಿಮ ವಿಭಾಗದ ರೌಡಿಶೀಟರ್ ಆಗಿದ್ದು, ಇತ್ತೀಚೆಗೆ ಜೈಲಿನಿಂದ ಹೊರ ಬಂದಿದ್ದ. ಅಕ್ಟೋಬರ್ 1ರ ರಾತ್ರಿ ಶಮಂತ್ ಬಾರ್​ಗೆ ಬಂದಿದ್ದ ಆತನ ಸಹಚರರಾದ ಚಂದನ್ ಅಂಡ್​ ಟೀಂ ಕಾರಣವಿಲ್ಲದೇ ಮೋಹನ್ ಕುಮಾರ್ ಹಾಗೂ ಸತೀಶ್ ಮೇಲೆ ಮುಗಿಬಿದ್ದಿದೆ. 'ನಮ್ಮಣ್ಣ ಜೈಲಿನಿಂದ ಬಂದಿದ್ದಾನೆ' ಅಂತ ಹವಾ ಸೃಷ್ಟಿಸಲು, ಮೋಹನ್ ಹಾಗೂ ಆತನ ಸ್ನೇಹಿತ ಸತೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಅಷ್ಟೆ ಸಾಲದು ಎಂಬಂತೆ ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಹಲ್ಲೆ ಮಾಡಿದ್ದಾರೆ.

ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ‌ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಮದ್ಯ ಕುಡಿಯಲು ಹಣ ನೀಡದ್ದಕ್ಕೆ ತಾಯಿಯನ್ನೇ ಕೊಂದ ಪಾಪಿ ಪುತ್ರ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.