ETV Bharat / state

ಟಿಪ್ಪರ್ ಅಡ್ಡಗಟ್ಟಿದ ರೈತರ ಮೇಲೆ ಮಾರಣಾಂತಿಕ ಹಲ್ಲೆ: ಓರ್ವ ಪೊಲೀಸ್​ ವಶಕ್ಕೆ - ರೈತರ ತಲೆಗೆ ದೊಣ್ಣೆಯಿಂದ ಹೊಡೆದು ಗಾಯ

ಇಬ್ಬರು ರೈತರನ್ನು ಥಳಿಸಿ ಗಾಯಗೊಳಿಸಿದ ಘಟನೆ ಶುಕ್ರವಾರ ಸಂಜೆ ಆನೇಕಲ್​ನ ತಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.

assault
ಟಿಪ್ಪರ್ ಅಡ್ಡಗಟ್ಟಿದ ರೈತರ ಮೇಲೆ ಮಾರಣಾಂತಿಕ ಹಲ್ಲೆ
author img

By ETV Bharat Karnataka Team

Published : Nov 18, 2023, 10:20 AM IST

ಆನೇಕಲ್ : ತಿಂಗಳ ಹಣ ನೀಡುವಂತೆ ರೈತರು ಕ್ರಷರ್‌ ಮತ್ತು ಟಿಪ್ಪರ್​ಗಳನ್ನು ಅಡ್ಡಗಟ್ಟಿದ ಕಾರಣಕ್ಕೆ ಅರೆಹಳ್ಳಿ ನಾರಾಯಣಸ್ವಾಮಿ ಹಾಗೂ ಮತ್ತೋರ್ವ ವ್ಯಕ್ತಿಯು ಇಬ್ಬರು ವೃದ್ಧ ರೈತರ ತಲೆಗೆ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ ಘಟನೆ ಶುಕ್ರವಾರ ಸಂಜೆ ತಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.

ಕರಕಲಘಟ್ಟ ವಾಸಿ ರಾಮಚಂದ್ರಪ್ಪ (64), ಮುನೇಶ್ವರ ಸ್ವಾಮಿ ವೃತ್ತದ ನರಸಪ್ಪ (84) ಗಾಯಗೊಂಡ ರೈತರು. ಈ ಕುರಿತಂತೆ ಗಾಯಾಳು ರಾಮಚಂದ್ರಪ್ಪ ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ನಾರಾಯಣಸ್ವಾಮಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಮತ್ತೊಬ್ಬನಿಗೆ ಬಲೆ ಬೀಸಿದ್ದಾರೆ.

ಘಟನೆ ಹಿನ್ನೆಲೆ : ತಮ್ಮನಾಯಕನಹಳ್ಳಿ ಸರ್ವೆ ನಂ 175 ರಲ್ಲಿ ಗಾಯಾಳು ರಾಮಚಂದ್ರಪ್ಪ ಕುಟುಂಬ ವ್ಯವಸಾಯ ಮಾಡಿಕೊಂಡಿದ್ದು, ಇದೇ ಜಾಗದಲ್ಲಿ ಕ್ರಷರ್​ಗಳ ಬೃಹತ್ ಲಾರಿಗಳು ಸಂಚರಿಸಲು ದಾರಿಯಿದೆ. ವಾಹನ ಸಂಚಾರದ ಧೂಳಿನಿಂದ ಬೆಳೆ ನಾಶವಾಗುತ್ತದೆ ಎಂದು ರೈತ ಆರೋಪಿಸಿದ್ದು, ಇದಕ್ಕೆ ಪರಿಹಾರವಾಗಿ ಪ್ರತಿ ಲಾರಿ ತಿಂಗಳಿಗೊಮ್ಮೆ 1000-2000 ರೂ. ಹಣ ನೀಡಿ ಸಾಗುತ್ತಿದ್ದವು. ಈ ಕುರಿತಂತೆ ಲಾರಿ ಮಾಲೀಕರೊಂದಿಗೆ ಒಪ್ಪಂದ ಕೂಡ ಮಾಡಿಕೊಳ್ಳಲಾಗಿತ್ತು.

ಇದನ್ನೂ ಓದಿ : ಕಾರವಾರದಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ: 10 ಮಂದಿ ಬಂಧನ

ಆದರೆ, ಕಳೆದ ಕೆಲ ತಿಂಗಳಿಂದ ಹಣ ಸಂದಾಯವಾಗದ ಹಿನ್ನೆಲೆ ಆನೇಕಲ್ ಕಡೆಯಿಂದ ಅರೆಹಳ್ಳಿ ಮಾರ್ಗವಾಗಿ ಮುನೇಶ್​ ವೃತ್ತಕ್ಕೆ ಬಂದ ಲಾರಿಗಳನ್ನು ರಾಮಚಂದ್ರಪ್ಪ ಮತ್ತು ನರಸಪ್ಪ ತಡೆದಿದ್ದಾರೆ. ಈ ಹಿನ್ನೆಲೆ ಅರೇಹಳ್ಳಿ ನಾರಾಯಣಸ್ವಾಮಿ ತನ್ನ ಸ್ನೇಹಿತನೊಂದಿಗೆ ಬಂದು ಇಬ್ಬರನ್ನು ಮನಸೋಇಚ್ಛೆ ದೊಣ್ಣೆಯಿಂದ ಥಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಮುಂದುವರೆದ ಪುಂಡರ ಹಾವಳಿ: ಯುವಕನ ಅಡ್ಡಗಟ್ಟಿ ಹಲ್ಲೆ

ಇನ್ನೊಂದೆಡೆ, ಬೆಂಗಳೂರು ನಗರದಲ್ಲಿ ಪುಂಡರ ಹಾವಳಿ ಮುಂದುವರೆದಿದೆ. ಕೆಲಸ ಮುಗಿಸಿ ಮನೆಗೆ ಹೊರಟವನನ್ನು ದೋಚಲು ಮುಂದಾದ ಕಿಡಿಗೇಡಿಗಳು, ಏಕಾಏಕಿ ಆತನ ಮೇಲೆರಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಪುಲಿಕೇಶಿ ನಗರ ವ್ಯಾಪ್ತಿಯಲ್ಲಿ ನವೆಂಬರ್​ 12 ರಂದು ನಡೆದಿತ್ತು. ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಸ್ಸೋಂ ಮೂಲದ ಮನೋಜ್ ಎಂಬಾತ ರಾತ್ರಿ ಮನೆಗೆ ಹೊರಟಿದ್ದ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಕಿಡಿಗೇಡಿಗಳು ಮಾರಕಾಸ್ತ್ರದಿಂದ ಆತನ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.