ETV Bharat / state

ವಲಸೆ ಕಾರ್ಮಿಕರ ಮೇಲೆ ಹಲ್ಲೆ: ಎಎಸ್ಐ ಅಮಾನತು

ಉತ್ತರ ಪ್ರದೇಶದ ವಲಸೆ ಕಾರ್ಮಿಕರ ಮೇಲೆ ಕೈ ಮಾಡಿದ್ದ ಕೆ.ಜಿ.ಹಳ್ಳಿಯ ಎಎಸ್​ಐ ರಾಜ್ ಸಾಬ್​ನನ್ನು ನಗರ ಪೂರ್ವ ವಿಭಾಗದ ಡಿಸಿಪಿ‌ ಶರಣಪ್ಪ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ASI Raja sab suspend
ವಲಸೆ ಕಾರ್ಮಿಕನ ಮೇಲೆ ಹಲ್ಲೆ
author img

By

Published : May 12, 2020, 5:10 PM IST

ಬೆಂಗಳೂರು: ವಲಸೆ ಕಾರ್ಮಿಕರ ಮೇಲೆ ಕೈ ಮಾಡಿದ್ದ ಎಎಸ್ಐಯನ್ನು ನಗರ ಪೂರ್ವ ವಿಭಾಗದ ಡಿಸಿಪಿ‌ ಶರಣಪ್ಪ ಅಮಾನತು ಮಾಡಿದ್ದಾರೆ.

ಕೆ.ಜಿ.ಹಳ್ಳಿಯ ಎಎಸ್​ಐ ರಾಜ್ ಸಾಬ್ ಕೆಲಸದಿಂದ ಅಮಾನತುಗೊಂಡವರು. ಲಾಕ್​ಡೌನ್ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಗೆ ಗುಂಪು ನೋಂದಣಿ ಮಾಡಿಸಿಕೊಳ್ಳಲು ಬಂದಿದ್ದರು. ಈ ವೇಳೆ ನೋಂದಣಿ ಇಲ್ಲಿ ಮಾಡುವುದಿಲ್ಲ ಎಂದು ಗದರಿಸಿ ಕಾರ್ಮಿಕರ ಮೇಲೆ ಕೈ ಮಾಡಿ, ಬೂಟ್ ಕಾಲಿನಲ್ಲಿ ಹೊಡೆಯುವ ಎಎಸ್ಐ‌ ದರ್ಪ ತೋರಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಎಎಸ್​ಐ ಅಮಾನತು

ಕಾರ್ಮಿಕರಿಗೆ ಎಎಸ್​ಐ ಕಾಲಿನಿಂದ ಹೊಡೆಯುವುದನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು, ತಾವು ಅನುಭವಿಸುತ್ತಿರುವ ಯಾತನೆ ಕುರಿತು ನೆರವಿಗೆ ಧಾವಿಸುವಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಟ್ವೀಟರ್ ಅಕೌಂಟ್​ಗೆ ಟ್ಯಾಗ್ ಮಾಡಿದ್ದರು. ‌ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಖಾಕಿ ಪಡೆ, ಆಂತರಿಕ ತನಿಖೆ ನಡೆಸಿ ತಪ್ಪಿತಸ್ಥ ಎಎಸ್ಐಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.