ETV Bharat / state

ರಾಮನಗರ ಕ್ಲೀನ್​ನಲ್ಲಿ ಡಿಕೆ ಶಿವಕುಮಾರ್ ಕೂಡ ಸೇರಿದ್ದಾರೆ: ಪೊರಕೆ ಕಳಿಸುವ ಹೇಳಿಕೆಗೆ ಅಶ್ವತ್ಥನಾರಾಯಣ ಟಾಂಗ್ - Etv Bharat Kanadda

ಕಾಂಗ್ರೆಸ್ ನಾಯಕರು ಅಧಿಕಾರದ ಹಗಲು ಕನಸು ಕಾಣುತಿದ್ದು, ಅದಕ್ಕಾಗಿ ಕಾಂಗ್ರೆಸ್​ ಬಸ್ ಯಾತ್ರೆ ಮಾಡುತ್ತಿದ್ದಾರೆ. ಬಸ್​ನಲ್ಲಿರುವ ಸೀಟಿನ ಸಂಖ್ಯೆಯಷ್ಟು ಸೀಟು ಗೆದ್ದು ಬಂದರೆ ಹೆಚ್ಚು ಎಂದು ಸಚಿವ ಅಶ್ವತ್ಥ ನಾರಾಯಣ ವ್ಯಂಗ್ಯವಾಡಿದ್ದಾರೆ.

ashwathnarayana
ಅಶ್ವತ್ಥನಾರಾಯಣ
author img

By

Published : Jan 13, 2023, 4:36 PM IST

Updated : Jan 13, 2023, 8:43 PM IST

ಸಚಿವ ಅಶ್ವತ್ಥನಾರಾಯಣ ಪ್ರತಿಕ್ರಿಯೆ

ಬೆಂಗಳೂರು: ರಾಮನಗರ ಕ್ಲೀನಿಂಗ್​ಗೆ ಒಂದು ಲೋಡ್ ಪೊರಕೆ ಕಳಿಸುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಏನು ಕ್ಲೀನಿಂಗ್ ನಡೆಯುತ್ತಿದೆ ಎಂದು ಅವರಿಗೆ ಗೊತ್ತಿಲ್ಲವಾ? ಕ್ಲೀನಿಂಗ್​ನಲ್ಲಿ ಡಿಕೆ ಶಿವಕುಮಾರ್ ಕೂಡ ಇದ್ದಾರೆ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಅವರೇ ರಾಜಕೀಯವಾಗಿ ರಾಮನಗರದಿಂದ ಕ್ಲೀನ್ ಆಗಲಿದ್ದಾರೆ ಎಂದು ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮನಗರವನ್ನು ಕ್ಲೀನ್ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಇದಕ್ಕೆ ಅದೇನು ಕ್ಲೀನ್ ಮಾಡುತ್ತಾರೋ ಏನೋ, ಅದಕ್ಕೆ ನಾನು ಒಂದು ಲೋಡ್ ಪೊರಕೆ ಕಳಿಸವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈಗ ರಾಮನಗರ ಕ್ಲೀನಿಂಗ್ ನಡಿತಾ ಇದೆ, ಏನು ಕ್ಲೀನಿಂಗ್ ಆಗುತ್ತಿದೆ ಎಂದು ಇವರಿಗೆ ಗೊತ್ತಿಲ್ಲವಾ, ಈಗಾಗಲೇ ಕ್ಲೀನಿಂಗ್ ಪ್ರಕ್ರಿಯೆ ಆರಂಭವಾಗಿದೆ, ಆ ಕ್ಲೀನಿಂಗ್​ನಲ್ಲಿ ಡಿಕೆ ಶಿವಕುಮಾರ್ ಕೂಡ ಸೇರಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್​​ ಪ್ರಜಾಪ್ರಭುತ್ವ, ಪ್ರಜಾಧ್ವನಿಯನ್ನು ಗೌರವಿಸಿಲ್ಲ: ಜಲ ಜೀವನ್ ಮಿಷನ್​ ಯೋಜನೆಯಡಿ ಎಲ್ಲಿಂದ ನೀರು ಬರುತ್ತದೆ ಅಂತಾ ಶಿವಕುಮಾರ್ ಸಹೋದರ ಕೇಳುತ್ತಿದ್ದರು, ಇವಾಗ ಎಲ್ಲ ಮನೆಗಳಿಗೂ ನಾವು ನೀರು ಕೊಟ್ಟಿಲ್ವಾ..? ಕಾಂಗ್ರೆಸ್ ಪಕ್ಷದ ನಾಯಕರು ಪ್ರಜಾಧ್ವನಿ ಕಾರ್ಯಕ್ರಮದ ಮೂಲಕ ಪ್ರವಾಸಕ್ಕೆ ಹೊರಟಿದ್ದಾರೆ. ಅವರ ಪಕ್ಷದೊಳಗೆ ಪ್ರಜಾಪ್ರಭುತ್ವ, ಪ್ರಜಾಧ್ವನಿಯನ್ನು ಗೌರವಿಸಿಲ್ಲ. ಕುಟಂಬ ಆಧಾರಿತ ನಿರ್ವಹಣೆ ಮಾಡುತ್ತಿರುವ ಪಕ್ಷ ಹೇಗೆ ಪ್ರಜಾಪ್ರಭುತ್ವ ಮೌಲ್ಯ, ಮೂಲ ಉದ್ದೇಶ ಈಡೇರಿಸಲು ಹೇಗೆ ಸಾಧ್ಯ? ಪ್ರಜಾಪ್ರಭುತ್ವದ ಮಹತ್ವವನ್ನೇ ಅರ್ಥ ಮಾಡಿಕೊಳ್ಳದೆ ಕಾರ್ಯ ಮಾಡುತ್ತಿರುವ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು.

ಕಾಂಗ್ರೆಸ್​ ಆಧಾರ ರಹಿತ ಆರೋಪ ಮಾಡುತ್ತಿದೆ: ಕಾಂಗ್ರೆಸ್​ನವರು ಬಿಜೆಪಿ ಬಗ್ಗೆ, ನಮ್ಮ ಹಲವಾರು ಕಾರ್ಯಕ್ರಮ ಮತ್ತು ಮಹದಾಯಿ ಬಗ್ಗೆ ಮಾತನಾಡಿದ್ದಾರೆ. ಮಹದಾಯಿ ಸಮಸ್ಯೆ ಬಗೆಹರಿಸಲು ಅವರಿಗೆ ಆಗಿರಲಿಲ್ಲ. ಈಗ ನಾವು ಪರಿಹರಿಸಿದ್ದೇವೆ. ಒಕ್ಕಲಿಗರ ನಿಗಮಕ್ಕೆ ಹಣ ಕೊಟ್ಟಿಲ್ಲ ಎನ್ನುವುದು ಸುಳ್ಳು ಆರೋಪ. ಅಧಿಕಾರದಲ್ಲಿದ್ದಾಗ ಸ್ವಾರ್ಥ ರಾಜಕಾರಣ, ಧರ್ಮ ವಿಭಜನೆ ಯತ್ನ, ಭ್ರಷ್ಟಾಚಾರ ಮಾಡಿದರು, ಲೋಕಾಯುಕ್ತ ಮುಚ್ಚಿದರು. ‌ಈಗ ಅವರೇ ನಮ್ಮ ವಿರುದ್ಧ 40 ಪರ್ಸೆಂಟ್ ಭ್ರಷ್ಟಾಚಾರ ಎನ್ನುತ್ತಿದ್ದಾರೆ. ಸಾಕ್ಷಿಯಿಲ್ಲದೇ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಈ ರೀತಿ ಆರೋಪ ಮಾಡಿದವರು ಜೈಲಿಗೆ ಹೋಗಿದ್ದಾರೆ.

ಸರ್ವಿಸ್ ಎಗೆನೆಸ್ಟ್ ಪೇಮೆಂಟ್: ಕೆಪಿಸಿಸಿ ಅಧ್ಯಕ್ಷರ ಸೇವೆಗೆ ಸರ್ವಿಸ್ ಎಗೆನೆಸ್ಟ್ ಪೇಮೆಂಟ್ ಇದೆ. ಕಾಂಗ್ರೆಸ್ ಎಂದರೆ ದಲ್ಲಾಳಿ, ಮೀಡಿಯೇಟರ್, ಕೆಪಿಸಿಸಿ ಅಧ್ಯಕ್ಷರ ಸೇವೆಗೆ ಹಣ ನೀಡಬೇಕಿದೆ ಎಂದು ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್ ನಾಯಕರು ಅಧಿಕಾರದ ಹಗಲು ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ಬಸ್ ಯಾತ್ರೆ ಮಾಡುತ್ತಿದ್ದಾರೆ. ಬಸ್​ನಲ್ಲಿರುವ ಸೀಟಿನ ಸಂಖ್ಯೆಯಷ್ಟು ಸೀಟು ಗೆದ್ದು ಬಂದರೆ ಹೆಚ್ಚು. 2013 ರಲ್ಲಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದು ಆಡಳಿತ ನಡೆಸಿದ ನಂತರ 79 ಸ್ಥಾನಕ್ಕೆ ತಂದಿದ್ದೇ ಸಿದ್ದರಾಮಯ್ಯ ಸಾಧನೆ ಎಂದು ಟೀಕಿಸಿದರು.

ಸತ್ಯವನ್ನು ಎದುರಿಸಲು ಸಿದ್ದುಗೆ ಧೈರ್ಯವಿಲ್ಲ: ಸಿದ್ದು ನಿಜ ಕನಸು ಬಿಡುಗಡೆಗೆ ಮೊದಲೇ ಸ್ಟೇ ತಂದ ಸ್ಟೇ ಸಿದ್ದರಾಮಯ್ಯ, ಯಾಕೆ ಅವರಿಗೆ ಭಯ? ಅವರು ಇದನ್ನು ಎದುರಿಸಬೇಕಿತ್ತು, ಮಾನನಷ್ಟ ಮೊಕದ್ದಮೆ ಹೂಡಬಹುದಿತ್ತು, ಸತ್ಯವನ್ನು ಎದುರಿಸಲು ಧೈರ್ಯವಿಲ್ಲ. ಸದನದಲ್ಲಿ ಯಾಕೆ ಧೈರ್ಯ ತೋರಿಸಲ್ಲ, ಸುಭದ್ರವಾಗಿದ್ದ ಕಾಲದಲ್ಲೇ ಅತಿ ಹೆಚ್ಚಿನ ಸಾಲ ಮಾಡಿದ್ದರು, ನಾವು ಕೋವಿಡ್ ವೇಳೆ ಸಾಲ ಮಾಡಿದ್ದು, ಅಧಿಕಾರದಲ್ಲಿದ್ದಾಗ ಇವರ ಪವರ್ ಕಟ್ ಆಗಿತ್ತು. ಲೈಟ್ ಹಾಕಿಕೊಂಡು ಬಜೆಟ್ ಓದಿದ್ದರು, ಅಂತವರು ಈಗ ಉಚಿತ ವಿದ್ಯುತ್ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಶಾಸಕ ಪಿ.ರಾಜೀವ್ ಮಾತನಾಡಿ, ಕಾಂಗ್ರೆಸ್ ಆರಂಭಿಸಿರುವುದು ಪ್ರಜಾಧ್ವನಿ ಯಾತ್ರೆಯಲ್ಲ ಪ್ರಜಾದ್ರೋಹ ಯಾತ್ರೆ ಎಂದು ಟೀಕಿಸಿದರು. ಕರ್ನಾಟಕ ಮತ್ತು ಭಾರತವನ್ನು 65 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಈಗ ಪ್ರಜಾಧ್ವನಿ ಯಾತ್ರೆ ಆರಂಭಿಸಿದೆ. ಇದು ಪ್ರಜಾಧ್ವನಿಯಲ್ಲ, ಇಷ್ಟು ವರ್ಷ ದೇಶಕ್ಕೆ ಮಾಡಿದ ದ್ರೋಹಕ್ಕೆ ಶೋಕದ ಯಾತ್ರೆ ಮಾಡುತ್ತಿದೆ. ಇಷ್ಟು ವರ್ಷ ತಾನೆಸಗಿದ ದ್ರೋಹಕ್ಕೆ ಅಕ್ಷಮ್ಯವಾಗಿ ಈ ಯಾತ್ರೆ ಮಾಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಸರ್ಕಾರ ಪಂಚಮಸಾಲಿಗಳಿಗೆ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ: ಮೃತ್ಯುಂಜಯ ಶ್ರೀ ಆಕ್ರೋಶ

Last Updated : Jan 13, 2023, 8:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.