ಬೆಂಗಳೂರು: ನಮಗೆ ಚಪ್ಪಾಳೆ, ಹೂ ಮಳೆಗಳ ಗೌರವ ಸಾಕು. ಗೌರವಯುತ ಬದುಕು ನಡೆಸಲು ಸೂಕ್ತ ಗೌರವಧನ ಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಆಶಾ ಕಾರ್ಯಕರ್ತೆಯರು ಸಜ್ಜಾಗಿದ್ದಾರೆ.
ಜುಲೈ 10ರಿಂದ ಆಶಾ ಕಾರ್ಯಕರ್ತೆಯರು ಸೇವೆ ಸ್ಥಗಿತಗೊಳಿಸಿ, ಮಾಸಿಕ ಗೌರವ ಧನವನ್ನು 12 ಸಾವಿರ ರೂಗಳಿಗೆ ಹೆಚ್ಚಿಸುವುದು ಸೇರಿದಂತೆ ಅಗತ್ಯ ಸೌಲಭ್ಯಕ್ಕೆ ಆಗ್ರಹಿಸಿ ಧರಣಿಗಿಳಿಯಲು ನಿರ್ಧರಿಸಿದ್ದಾರೆ.
ಈ ಕುರಿತು ಜನವರಿ ತಿಂಗಳಿಂದ ಸರ್ಕಾರಕ್ಕೆ 10 ಬಾರಿ ಮನವಿ ಪತ್ರ ನೀಡಿದರೂ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ 42 ಸಾವಿರ ಮಂದಿ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಮನೆ, ಮನೆಗೆ ತೆರಳಿ ಸಮೀಕ್ಷೆ, ಸೋಂಕು ಪತ್ತೆ ಕಾರ್ಯದಲ್ಲಿ ಇವರ ಪಾತ್ರ ಅತೀ ಮುಖ್ಯವಾಗಿತ್ತು.
ಗುತ್ತಿಗೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು , ಇದೀಗ ಆಶಾ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.