ಬೆಂಗಳೂರು : ಕೊರೊನಾ ಆತಂಕವಿದ್ರೂ ಕುಟುಂಬದವರ ಪ್ರೋತ್ಸಾಹದ ನಡುವೆ ಓದಲು ಹಾಗೂ ಅತಿ ಹೆಚ್ಚು ಅಂಕಗಳಿಸಲು ಸಹಾಯಕವಾಯ್ತು ಅಂತಾ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿ ಅರವಿಂದ್ ಶ್ರೀವತ್ಸ ತಿಳಿಸಿದ್ದಾರೆ.
2020ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 600 ಅಂಕಕ್ಕೆ 598 ಅಂಕ ಗಳಿಸಿರುವ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ವಾಸವಿರುವ ಅರವಿಂದ್, ಮಲ್ಲೇಶ್ವರಂನ ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ.
ಪರೀಕ್ಷೆ ಸಮಯದಲ್ಲಿ ನಿರಂತರ ಅಭ್ಯಾಸ ಹಾಗೂ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೇ ಪರೀಕ್ಷೆ ಬರೆದು ಬಂದೆ ಅಂತಾ ತನ್ನ ಖುಷಿಯನ್ನ ಹಂಚಿಕೊಂಡಿದ್ದಾನೆ. ನಾವು ಏನೇ ಕೆಲಸ ಮಾಡಿದ್ರೂ ಅದರಲ್ಲಿ ಪ್ರೀತಿ, ಅದರ ಬಗ್ಗೆ ಆಸಕ್ತಿ ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಅಂತಾ ತನ್ನ ಪರೀಕ್ಷೆಯ ಯಶಸ್ಸಿನ ಗುಟ್ಟನ್ನು ತಿಳಿಸಿದ್ದಾರೆ.