ಬೆಂಗಳೂರು: ಕೈಗಳಿಗೆ ಗ್ಲೌಸ್ ಧರಿಸಿ ಸಿಸಿಟಿವಿ ಇಲ್ಲದಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಹಿಂಭಾಗದ ಬಾಗಿಲಿನಿಂದ ನುಗ್ಗಿ ಕಳ್ಳತನ ಮಾಡುತ್ತ, ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಖದೀಮನನ್ನ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಸಂತೋಷ್ ಬಂಧಿತ ಆರೋಪಿ, ಆರೋಪಿಯಿಂದ 15 ಲಕ್ಷ ರೂ. ಮೌಲ್ಯದ 280 ಗ್ರಾಂ ಮೌಲ್ಯದ ಚಿನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ವಿರುದ್ಧ ತಲಘಟ್ಟಪುರ, ಸಿ.ಕೆ.ಅಚ್ಚುಕಟ್ಟು, ಬೇಗೂರು ಹಾಗೂ ಮಂಡ್ಯ ಸೇರಿ ವಿವಿಧ ಭಾಗಗಳಲ್ಲಿ 18ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೆಲ ವರ್ಷಗಳ ಹಿಂದೆ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು. ಈ ಕುರಿತು ಮೇಲ್ಮನವಿ ಸಲ್ಲಿಸಿ ಶಿಕ್ಷೆಯಿಂದ ಹೊರಬಂದಿದ್ದ.
ಜೈಲಿನಿಂದ ಹೊರಬಂದ ಬಳಿಕ ಮತ್ತೆ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈತ ಸಿಸಿಟಿವಿ ಇಲ್ಲದಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕೈಗಳಿಗೆ ಗ್ಲೌಸ್ ಧರಿಸಿ ಹಿಂಭಾಗದ ಬಾಗಿಲಿನಿಂದ ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚುತ್ತಿದ್ದ. ಕದ್ದ ಚಿನ್ನಾಭರಣವನ್ನ ಸಿಕ್ಕ ಅಮಾಯಕರಿಗೆ ಕಮೀಷನ್ ನೀಡಿ ಅವರಿಂದ ಗಿರವಿ ಇಡಿಸಿ ಹಣ ಮಾಡುತ್ತಿದ್ದ. ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಸಾಜ್‌ಗೆಂದು ಮಂಗಳಮುಖಿಯ ಮನೆಗೆ ಬಂದು 7 ಲಕ್ಷ ರೂ ದೋಚಿದ್ದ ಇಬ್ಬರ ಬಂಧನ