ಬೆಂಗಳೂರು: ರಾಜರಾಜೇಶ್ವರಿ ನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, ಗಂಧದ ಮರಗಳನ್ನು ಕಡಿದು ಕದ್ದೊಯ್ದಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಚನ್ನಸಂದ್ರ ಕಲಾ ಫಾರಂನಲ್ಲಿದ್ದ 2 ಗಂಧದ ಮರಗಳನ್ನು ಕದ್ದ ಆರೋಪದಡಿ ರಾಜೇಶ್ ಲೋಕೇಶ್, ಗೋವಿಂದ್ ರಾಜು ಎನ್ನುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 9.79 ಲಕ್ಷ ರೂ. ಬೆಲೆಬಾಳುವ ಸುಮಾರು 178 ಕೆಜಿ ತೂಕದ ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿಯನ್ನೂ ಓದಿ: ಬೆಳ್ತಂಗಡಿ: ಕುಡಿದ ಅಮಲಿನಲ್ಲಿ ಪತ್ನಿಕೊಂದ ಪತಿ: ಆರೋಪ
ಇನ್ನೂ ಕಳ್ಳತನಕ್ಕೆ ಬಳಸಿದ್ದ ಕಬ್ಬಿಣದ ಕಂಬಿ, ಮಚ್ಚು, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.