ETV Bharat / state

ಜೈಲಲ್ಲಿ ಸಹಕೈದಿಯಿಂದ 'ಹೈಟೆಕ್​' ಪಾಠ.. ಸ್ಮಾರ್ಟ್ ಡಿವೈಸ್ ಬಳಸಿ‌ ಕಾರು ಕದಿಯುತ್ತಿದ್ದ ಕಳ್ಳ ಅಂದರ್​ - ಟೆಕ್ನಾಲಜಿ ಮೂಲಕ ಸ್ಮಾರ್ಟ್ ಆಗಿ ಹೈ ಎಂಡ್ ಕಾರುಗಳನ್ನು ಕಳ್ಳತನ ಮಾಡಿದ್ದ ಆರೋಪಿ ಬಂಧನ

ಕಳ್ಳತನಕ್ಕೆ ಸ್ಮಾರ್ಟ್​ ಡಿವೈಸ್​ ಬಳಕೆ-ತಂತ್ರಜ್ಞಾನ ಬಳಸಿ ಕಾರು ಕದಿಯೋ ಕಾಯಕ- ಬೆಂಗಳೂರಲ್ಲಿ ಸಿಕ್ಕಿಬಿದ್ದ ಹೈಟೆಕ್​ ಕಳ್ಳ

ಸ್ಮಾರ್ಟ್ ಡಿವೈಸ್ ಬಳಸಿ‌ ಕಳ್ಳತನ ಮಾಡುತ್ತಿದ್ದ ಹೈಟೆಕ್‌ ಕಳ್ಳನ ಬಂಧನ

author img

By

Published : Jul 11, 2022, 3:09 PM IST

Updated : Jul 11, 2022, 4:53 PM IST

ಬೆಂಗಳೂರು: ಟೆಕ್ನಾಲಜಿ ಮೂಲಕ ಸ್ಮಾರ್ಟ್ ಆಗಿ ಹೈ-ಎಂಡ್ ಕಾರುಗಳನ್ನು ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಹೈಟೆಕ್ ಖದೀಮನನ್ನು‌ ಎಚ್ಎಸ್ಆರ್ ಲೇಔಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆಂಧ್ರಪ್ರದೇಶ ಮೂಲದ‌ ಅರುಣ್ ಬಂಧಿತ ಖತರ್ ನಾಕ್ ಖದೀಮ.

ಜೈಲಲ್ಲೇ ಕಳ್ಳತನಕ್ಕೆ ಶಿಕ್ಷಣ: ಬಿ.ಕಾಂ ಪದವೀಧರನಾಗಿರುವ ಆರೋಪಿ ಇದೇ ಆಧಾರದ‌ ಮೇಲೆ ಒಂದೊಳ್ಳೆ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದಿತ್ತು. ಆದರೆ, ಸುಲಭವಾಗಿ ಹಣ ಸಂಪಾದನೆ ಮಾಡಿ ಮೋಜು ಮಸ್ತಿಗೆ ಕಂಡುಕೊಂಡಿದ್ದ ಅಡ್ಡ ದಾರಿಯೇ ಕಳ್ಳತನ. ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಖದೀಮ ಅರುಣ್ ಗೆ ಸೆರೆಮನೆಯಲ್ಲಿ ಕೈದಿಯೋರ್ವನ ಪರಿಚಯವಾಗಿತ್ತು. ಆತನಿಂದ ತಂತ್ರಜ್ಞಾನ ಬಳಸಿ ಕಾರು ಹೇಗೆ ಕದಿಯುವುದು ಎಂಬುದನ್ನು ಕರಗತ ಮಾಡಿಕೊಂಡಿದ್ದ. ಇದರಂತೆ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿ ನಂತರ ಅದೇ ರೀತಿಯ ಡಿವೈಸ್ ಒಂದನ್ನು ತೆಗೆದುಕೊಂಡು ಕಾರುಗಳನ್ನು ಕದಿಯುತ್ತಿದ್ದ.

ಜೈಲಲ್ಲಿ ಸಹಕೈದಿಯಿಂದ 'ಹೈಟೆಕ್​' ಪಾಠ.. ಸ್ಮಾರ್ಟ್ ಡಿವೈಸ್ ಬಳಸಿ‌ ಕಾರು ಕದಿಯುತ್ತಿದ್ದ ಕಳ್ಳ ಅಂದರ್​

ಕಾರ್ ಕಳ್ಳತನ ಮಾಡುತ್ತಿದ್ದದ್ದು ಹೇಗೆ?: ಆಂಧ್ರ ಪ್ರದೇಶದಿಂದ ಬಂದು ಕಳ್ಳತನ ಮಾಡುತ್ತಿದ್ದ ಈತ ವೃತ್ತಿಯಲ್ಲಿ ಮೆಕಾನಿಕ್​​ ಆಗಿಯೂ ಕೆಲಸ ಮಾಡ್ತಿದ್ದ. ಈತ ಕಳ್ಳತನ ಮಾಡೋದಕ್ಕೆ Xtool auto Diagnostic ಎಂಬ ಸಾಧನ ಒಂದನ್ನು ಬಳಸಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದ. ಈ ಸಾಧನವನ್ನು ಕಾರಿಗೆ ಕನೆಕ್ಟ್ ಮಾಡಿ ಅದರ ಜೊತೆಯಲ್ಲಿ ತನ್ನ ಬಳಿಯಿದ್ದ ನಕಲಿ ಕೀಯನ್ನು ಕಾರಿಗೆ ಕನೆಕ್ಟ್ ಮಾಡಿ ಕಾರನ್ನೇ ಎಗರಿಸುತ್ತಿದ್ದ.

ಫೇಕ್ ನಂಬರ್ ಪ್ಲೇಟ್ : ಕರ್ನಾಟಕದಲ್ಲಿ ಕದ್ದು ತಮಿಳುನಾಡಿನಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಈತ, ಇದಕ್ಕೆ ನಖಲಿ ಸಂಖ್ಯೆಯ ಪ್ಲೇಟ್​ಗಳನ್ನು ಹಾಕುತ್ತಿದ್ದ. ಸದ್ಯ ಆರೋಪಿಯಿಂದ 70 ಲಕ್ಷ ಮೌಲ್ಯದ 10 ಕಾರು, 1 ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ಮಾಹಿತಿ ನೀಡಿದ್ದಾರೆ.

ತಮಿಳುನಾಡಿನಲ್ಲಿ ಕಡಿಮೆ ಬೆಲೆಗೆ ಕಾರುಗಳನ್ನು ಮಾರಾಟ‌ ಮಾಡುತ್ತಿದ್ದ ಆರೋಪಿ ನಗರದ 10 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರು ಕಳ್ಳತನ ಮಾಡಿದ್ದಾನೆ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ: ಕುಮುದ್ವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆಯ ಶವ ಪತ್ತೆ: ಆತ್ಮಹತ್ಯೆ ಶಂಕೆ

Last Updated : Jul 11, 2022, 4:53 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.