ETV Bharat / state

ಸಿಲಿಕಾನ್ ಸಿಟಿಯಾಗ್ತಿದ್ಯಾ ಗಾಂಜಾ ಸಿಟಿ? ಈ ವರ್ಷ ಪತ್ತೆಯಾದ ಗಾಂಜಾ ಎಷ್ಟು ಕೆ.ಜಿ? - bengaluru selling-marijuanain in 2019 news

ಬೆಂಗಳೂರಿನಲ್ಲಿ ದಿನ ಕಳೆದಂತೆ ಡ್ರಗ್ಸ್​​ ಮಾರಾಟ ಜಾಲ ವ್ಯಾಪಿಸುತ್ತಿದ್ದು,2019ರಲ್ಲಿ ಸುಮಾರು 100 ಕೆಜಿಗೂ ಅಧಿಕ ಗಾಂಜಾ ಪತ್ತೆಯಾಗಿದೆ.

bengaluru
100 ಕೆಜಿಗೂ ಅಧಿಕ ಗಾಂಜಾ ಪತ್ತೆ
author img

By

Published : Dec 24, 2019, 7:22 PM IST

Updated : Dec 24, 2019, 7:53 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಅಪರಾಧಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, 2019 ರಲ್ಲಿ ಸುಮಾರು 100 ಕೆಜಿಗೂ ಅಧಿಕ ಗಾಂಜಾ ಪತ್ತೆಯಾಗಿದೆ.

ಕಾಲೇಜು, ಪ್ರತಿಷ್ಠಿತ ಸಂಸ್ಥೆಗಳು ಹೀಗೆ ನಾನಾ ಕಡೆಗಳಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ. ಪೊಲೀಸರು ಈ ಕುರಿತು ಎಷ್ಟೇ ಜಾಗೃತಿ ಮೂಡಿಸಿದ್ರು ಕೂಡ ದಿನದಿಂದ ದಿನಕ್ಕೆ ಗಾಂಜಾ ಮಾರಾಟ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಹೈಡ್ರೋ ಗಾಂಜಾ, ಡ್ರಗ್ ಮಾಫಿಯಾ ಹೀಗೆ ನಾನಾ ಬಗೆಯ ಗಾಂಜಾ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೈಡ್ರೋ ಗಾಂಜಾ ಅತಿ ಹೆಚ್ಚು‌ ಪತ್ತೆ:

ಸಿಸಿಬಿ ಪೊಲೀಸರು ಕೆನಡಾ ಹಾಗೂ ನೆದರ್ಲ್ಯಾಂಡ್​​​ನ ಹೈಡ್ರೋ ಗಾಂಜಾ ಹಾಗೂ ಅದರ ಬೀಜಗಳನ್ನು ತಂದು ಮನೆಯಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಆರೋಪಿಗಳ ತಂಡಗಳನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟಿದ್ದರು. ಬಂಧಿತರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾವನ್ನ ವಶಪಡಿಸಿಕೊಂಡಿದ್ದರು. ಕಳವಳಕಾರಿ ವಿಷಯ ಅಂದ್ರೆ ಇದನ್ನೆಲ್ಲಾ ಆರೋಪಿಗಳು ಆನ್ಲೈನ್ ನಲ್ಲಿ ವಿದ್ಯಾರ್ಥಿಗಳಿಗೆ, ಪ್ರತಿಷ್ಠಿತ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದರು.

ಪರಪ್ಪನ ಅಗ್ರಹಾರ ಜೈಲಿಗೆ ಮಹಿಳೆ ಮೂಲಕ ರವಾನೆ:
‌ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೊರಗಿನ ಪ್ರಪಂಚದ ಸಂಪರ್ಕ ಕಡಿತಗೊಂಡು ಕಂಬಿ ಹಿಂದೆ ಇದ್ರೂ ಹೇಗೋ ಮಾಡಿ ಹೊರಗಿನವರಿಂದ ಕೆಲ ಖೈದಿಗಳು ಜೈಲಿನೊಳಕ್ಕೆ ಗಾಂಜಾ ತರಿಸುತ್ತಿದ್ದರು. ಇದೇ ತಿಂಗಳ 4 ರಂದು ಪರಪ್ಪನ ಅಗ್ರಹಾರಕ್ಕೆ ಮಹಿಳೆಯೊಬ್ಬಳು ಗಾಂಜಾ ತೆಗೆದುಕೊಂಡು ಹೋಗಿದ್ದಾರೆ. ಇದನ್ನ ಗಮನಿಸಿದ ಅಲ್ಲಿನ ಸಿಬ್ಬಂದಿ ಮಹಿಳೆಯನ್ನ ತಡೆದು ಪರಿಶೀಲನೆ ನಡೆಸಿ ಬಂಧಿಸಿದ್ದಾರೆ.ಇನ್ನೂ ಇದೇ ಕೃತ್ಯದಲ್ಲಿ ಭಾಗಿಯಾಗಿದ್ದ 11 ಜನ ಖೈದಿಗಳನ್ನ ಕೂಡ ಪತ್ತೆ ಹಚ್ಚಿದ್ದಾರೆ.ಅಂದಹಾಗೆ ಮಹಿಳೆ ತನ್ನ ಸಂಬಂಧಿಕರ ಭೇಟಿಗೆಂದು ಜೈಲಿಗೆ ಹೋಗಿ ತನ್ನ ವ್ಯಾನಿಟಿ ಬ್ಯಾಗ್ ನಲ್ಲಿ 500 ಗ್ರಾಂ ಗಾಂಜಾವನ್ನ ನೀಡಿದ್ದಳು. ಹೀಗಾಗಿ ಜೈಲಿಗೆ ಗಾಂಜಾ ಸಪ್ಲೈ ಆಗ್ತಿರುವ ಬಗ್ಗೆ ಮಾಹಿತಿ ಪಡೆದಿರುವ ಸಿಸಿಬಿ ದಾಳಿ ‌‌ಕೂಡ ಮಾಡಿತ್ತು..

ಶಾಲಾ ಕಾಲೇಜುಗಳೇ ಟಾರ್ಗೆಟ್:

ಇನ್ನು ಮಾದಕ ವಸ್ತುಗಳ ಮಾರಾಟ ಮಾಡುವ ತಂಡದ ಟಾರ್ಗೆಟ್​​ ಶಾಲಾ‌-ಕಾಲೇಜುಗಳು....ಹದಿ ಹರೆಯದ ವಿದ್ಯಾರ್ಥಿಗಳನ್ನ ಗುರಿಯಾಗಿರಿಸಿ ಗಾಂಜಾ ಮಾರಟ ಮಾಡ್ತಾರೆ. ಅದರಲ್ಲೂ ಇತ್ತೀಚೆಗೆ ಮಾರತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಡಿಶಾದ ಆರೋಪಿ ಕಿರದ್ ಮಿಶಾಲ್ ನನ್ನ ಪೊಲೀಸರು ಬಂಧಿಸಿದ್ದರು.ಗಾಂಜಾವನ್ನ ಒಡಿಶಾದಿಂದ ರೈಲುಗಳ ಮೂಲಕ ತರಿಸಿ ನಗರದ ಐಟಿ ಟೆಕ್ಪಾರ್ಕ್ ಹಾಗೂ ಶಾಲಾ ಕಾಲೇಜುಗಳ ಬಳಿ ಮಾರಾಟ ಮಾಡುತ್ತಿದ್ದ ಈ ಆರೋಪಿ. ಈತನನ್ನ ಜೈಲಿಗಟ್ಟಿದ ಖಾಕಿ ಪಡೆ ಈತನಿಂದ 5 ಲಕ್ಷ ರೂಪಾಯಿ ಮೌಲ್ಯದ 15 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿತ್ತು.

ಮೆಡಿಕಲ್ ಸ್ಟೋರ್​​​ನಲ್ಲಿ ಗಾಂಜಾ ಮಾರಾಟ:

ಡಿಸಿಎಂ ಅಶ್ವತ್ಥ್​​ ನಾರಾಯಣ್ ಕ್ಷೇತ್ರದ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವಿಸಿ ಇಬ್ಬರು ಯುವಕರು ಮೃತಪಟ್ಟಿದ್ದರು.‌ ಇವರು ಮೆಡಿಕಲ್ ಸ್ಟೋರ್​​ನಲ್ಲಿ ಗಾಂಜಾ ತೆಗೆದುಕೊಂಡು ಬಂದು ಸೇವನೆ ಮಾಡಿ ಗಾಂಜಾ ಅಮಲು ಹೈಡೋಸ್ ಆಗಿ ಸಾವನ್ನಪ್ಪಿದ್ದರು..

ಸದ್ಯ ನಗರ ಪೊಲೀಸರು ಗಾಂಜಾ ಮಾರಾಟ ಮಾಡುವವರ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಕೆಲವು ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತು ಮಾರಾಟವಾಗುತ್ತಿರುವ ಮಾಹಿತಿ ಮೆರೆಗೆ ಶಿಕ್ಷಣ ಸಚಿವರು ಹಾಗೂ ಇಲಾಖೆ ಜೊತೆ ಚರ್ಚಿಸಿ ತನಿಖೆ ನಡೆಸುತ್ತಿದ್ದಾರೆ. ಆದ್ರೂ ಕೂಡ ದಿನೇ ದಿನೇ ಗಾಂಜಾ ಮಾರಾಟ ಹೆಚ್ಚಾಗ್ತಿರುವುದು ಆತಂಕಕಾರಿ.

Intro:ಸಿಲಿಕಾನ್ ಸಿಟಿಯಾಗ್ತಿದ್ಯಾ ಗಾಂಜಾ ಸಿಟಿ,ಬಗೆದಷ್ಟು ವ್ಯಾಪಿಸ್ತಿದೆ ಜಾಲ.
2019ರಲ್ಲಿ 100 ಕೆಜಿಗು ಅಧಿಕ ಗಾಂಜಾ ಪತ್ತೆ

files ಬಳಸಿ

ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ಮಾರಟ ಹಾಗೂ ಅಪರಾಧಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.. ಕಾಲೇಜು, ಪ್ರತಿಷ್ಟಿತ ಸಂಸ್ಥೆ ಹೀಗೆ ನಾನಾ ಕಡೆಗಳಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ. ಸದ್ಯ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದ್ರು ಕೂಡ ಸದ್ಯ ಗಾಂಜಾ ಮಾರಟ ಸಂಖ್ಯೆ ಹೆಚ್ಚಾಗಿದೆ.2019 ರಲ್ಲಿ ಸಿಟಿಯಲ್ಲಿ ಈ ಬಾರಿ ಬರೋಬ್ಬರಿ 100 ಕೆಜಿಗೂ ಅಧಿಕ ಗಾಂಜಾ ಪತ್ತೆಯಾಗಿದೆ. ಅದರಲ್ಲೂ ಹೈಡ್ರೋ ಗಾಂಜಾ, ಡ್ರಗ್ ಮಾಫಿಯಾ ಹೀಗೆ ನಾನಾ ಬಗೆಯ ಗಾಂಜಾ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೈಡ್ರೋ ಗಾಂಜಾ ಅತಿ ಹೆಚ್ಚು‌ಪತ್ತೆ..

ಸಿಸಿಬಿ ಪೊಲೀಸರು ಕೆನಡಾ ಹಾಗೂ ನೆದರ್ಲ್ಯಾಂಡ್ನಿಂದ ಹೈಡ್ರೋ ಗಾಂಜಾ ಹಾಗೂ ಅದರ ಬೀಜಗಳನ್ನು ತಂದು ಮನೆಯಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ತಂಡಗಳನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟಿದ್ದಾರು.ಇನ್ನೂ ಬಂಧಿತರಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಗಾಂಜಾವನ್ನ ವಶಪಡಿಸಿಕೊಂಡಿದ್ದಾರು.ವಿಶೇಷ ಅಂದ್ರೆ ಇದನ್ನೆಲ್ಲಾ ಆರೋಪಿಗಳು ಆನ್ಲೈನ್ ನಲ್ಲಿ ವಿದ್ಯಾರ್ಥಿಗಳಿಗೆ,ಪ್ರತಿಷ್ಟಿತ ಉದ್ಯಮಿಗಳಿಗೆ ಮಾರಟ ಮಾಡುತ್ತಿದ್ದರು..

ಪರಪ್ಪನ ಅಗ್ರಹಾರ ಜೈಲಿಗೆ ಮಹಿಳೆ ಮೂಲಕ ರವಾನೆ..

ಹಾಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾವಿರಕ್ಕು ಹೆಚ್ಚು ಖೈದಿಗಳು ಇದ್ದಾರೆ. ಆದ್ರೆ ಜೈಲಿನ ಖೈದಿಗಳಿಗೆ ಹೊರಗಿನ ಪ್ರಪಂಚದ ಸಂಪರ್ಕ ಕಡಿತ ಗೊಂಡು ಹೇಗಾದರು ಮಾಡಿ ಹೊರಗಿನವರಿಂದ ಜೈಲಿಗೆ ಕೆಲ ಖೈದಿಗಳು ಗಾಂಜಾ ತರಿಸುತ್ತಿದ್ದರು. ಇದೇ ತಿಂಗಳ 4 ರಂದು ಪರಪ್ಪನ ಅಗ್ರಹಾರಕ್ಕೆ ಮಹಿಳೆಯೊಬ್ಬಳು ಗಾಂಜಾ ತೆಗೆದುಕೊಂಡು ಹೋಗಿದ್ದಾಳೆ.ಇದನ್ನ ಗಮನಿಸಿದ ಅಲ್ಲಿನ ಸಿಬ್ಬಂದಿ ಮಹಿಳೆಯನ್ನ ತಡೆದು ಪರಿಶೀಲನೆ ನಡೆಸಿ ಬಂಧಿಸಿದ್ದಾರೆ.ಇನ್ನೂ ಇದೇ ಕೃತ್ಯದಲ್ಲಿ ಭಾಗಿಯಾಗಿದ್ದ 11 ಜನ ಕೈದಿಗಳನ್ನ ಕೂಡ ಪತ್ತೆ ಹಚ್ಚಿದ್ದಾರೆ.ಅಂದಹಾಗೆ ಮಹಿಳೆ ತನ್ನ ಸಂಬಂಧಿಕರ ಭೇಟಿಗೆಂದು ಜೈಲಿಗೆ ಹೋಗಿ ತನ್ನ ವ್ಯಾನಿಟಿ ಬ್ಯಾಗ್ ನಲ್ಲಿ 500 ಗ್ರಾಂ ಗಾಂಜಾವನ್ನ ನೀಡಿದ್ದಲು., ಹೀಗಾಗಿ ಜೈಲಿಗೆ ಗಾಂಜಾ ಸಪ್ಲೈ ಆಗ್ತಿರುವ ಬಗ್ಗೆ ಮಾಹಿತಿ ಪಡೆದಿರುವ ಸಿಸಿಬಿ ದಾಳಿ‌‌ಕೂಡ ಮಾಡಿತ್ತು..

ಶಾಲಾ ಕಾಲೇಜು ಟಾರ್ಗೇಟ್;-

ಇನ್ನು ಡ್ರಗ್ ಮಾರಾಟ ಮಾಡುವ ತಂಡದ ಟಾರ್ಗೇಟ್ ಶಾಲಾ‌ಕಾಲೇಜುಗಳು, ಹದಿ ಹರೆಯದ ವಿದ್ಯಾರ್ಥಿಗಳನ್ನ ಟಾರ್ಗೇಟ್ ಮಾಡಿ ಗಾಂಜಾ ಮಾರಟ ಮಾಡ್ತಾರೆ ಅದರಲ್ಲು ಇತ್ತಿಚ್ಚೆಗೆ
ಮಾರತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಡಿಶಾದ ಆರೋಪಿ ಕಿರದ್ ಮಿಶಾಲ್ ನನ್ನ ಪೊಲೀಸರು ಬಂಧಿಸಿದ್ದರು.ಗಾಂಜಾವನ್ನ ಒಡಿಶಾದಿಂದ ರೈಲುಗಳ ಮೂಲಕ ಗಾಂಜಾ ಮಾರಾಟ ಮಾಡುತ್ತಿದ್ದ.ಅದೇ ಗಾಂಜಾವನ್ನ ಐಟಿ ಟೆಕ್ಪಾರ್ಕ್ ಹಾಗೂ ಶಾಲಾ ಕಾಲೇಜುಗಳ ಬಳಿ ಮಾರಾಟ ಮಾಡುತ್ತಿದ್ದ ಆರೋಪಿ.ಈತನಿಂದ 5 ಲಕ್ಷ ರೂಪಾಯಿ ಮೌಲ್ಯದ 15 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಮೆಡಿಕಲ್ ಸ್ಟೋರ್ ನಲ್ಲಿ ಗಾಂಜಾ ಮಾರಟ

ಇತ್ತಿಚ್ಚೆಗೆ ಡಿಸಿಎಂ ಅಶ್ವತ್ ನಾರಾಯಣ್ ಕ್ಷೇತ್ರದ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವಿಸಿ ಇಬ್ಬರು ಯುವಕರು ಮೃತಪಟ್ಟಿದ್ದರು.‌ ಇವರು ಮೆಡಿಕಲ್ ಸ್ಟೋರ್ ನಲ್ಲಿ ಗಾಂಜಾ ತೆಗೆದುಕೊಂಡು ಸೇವನೆ ಮಾಡಿ ಗಾಂಜಾ ಅಮಲು ಹೈ ಡೋಸ್ ಆಗಿ ಸಾವನ್ನಪ್ಪಿದ್ದರು..

ಸದ್ಯ ನಗರ ಪೊಲೀಸರು ಗಾಂಜಾ ಮಾರಟ ಮಾಡುವವರ ಮೇಲೆ ತೀವ್ರ ನಿಗಾ ಇಟ್ಟು ಕೆಲವು ಶಾಲಾ ಕಾಲೆಜುಗಳಲ್ಲಿ ಮಾದಕ ವಸ್ತು ಮಾರಾಟವಾಗುತ್ತಿರುವ ಮಾಹಿತಿ ಮೆರೆಗೆ ಶಿಕ್ಷಣ ಸಚಿವರು ಹಾಗೂ ಇಲಾಖೆ ಜೊತೆ ಚರ್ಚಿಸಿ ತನಿಖೆ ನಡೆಸುತ್ತಿದ್ದಾರೆ. ಆದರು ಕೂಡ
ದಿನೇ ದಿನೇ ಗಾಂಜಾ ಮಾರಟ ಹೆಚ್ಚಾಗ್ತಿರುವುದು ನಿಜಾಕ್ಕು ವಿಪಾರ್ಯಸವೇ ಸರಿ..

Body:KN_BNG_04_DRUG_7204498Conclusion:KN_BNG_04_DRUG_7204498
Last Updated : Dec 24, 2019, 7:53 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.