ETV Bharat / state

ನಗದು, ಚಿನ್ನಾಭರಣ ದೋಚಿದ್ದಲ್ಲದೇ ಅತ್ಯಾಚಾರ ಯತ್ನ ನಡೆಸಿದ್ದ ದರೋಡೆಕೋರರ ಬಂಧನ - doddaballapur latest news

ಕಾರ್ಪೆಂಟರಿ ಕೆಲಸ ಮಾಡುವ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ನಾಲ್ವರು ದರೋಡೆಕೊರರು ಚಾಕು ಮತ್ತು ಕಬ್ಬಿಣದ ರಾಡ್ ತೋರಿಸಿ ಅವರನ್ನು ಹೆದರಿಸಿ 10 ಸಾವಿರ ನಗದು ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

Arrest of robbers who robbed in home at doddaballapur
ನಗದು ಚಿನ್ನಾಭರಣ ದೋಚಿದ್ದಲ್ಲದೇ ಅತ್ಯಾಚಾರಕ್ಕೆ ಯತ್ನಿಸಿದ್ದ ದರೋಡೆಕೋರರ ಬಂಧನ
author img

By

Published : Nov 9, 2021, 8:50 PM IST

Updated : Nov 9, 2021, 9:45 PM IST

ದೊಡ್ಡಬಳ್ಳಾಪುರ: ಬೆಳಗ್ಗೆ ಮನೆಯ ಬಾಗಿಲು ಒಡೆದು ಮನೆಯೊಳಗೆ ನುಗ್ಗಿದ ದರೋಡೆಕೋರರು, ಚಿನ್ನಾಭರಣ ದರೋಡೆ ಜೊತೆಗೆ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗಳನ್ನು ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ತಾಲೂಕಿನ ಅದ್ದಿಗಾನಹಳ್ಳಿಯಲ್ಲಿ 08-04-2021ರ ಬೆಳಗಿನ ಜಾವ ಘಟನೆ ನಡೆದಿತ್ತು. ಕಾರ್ಪೆಂಟರಿ ಕೆಲಸ ಮಾಡುವ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ನಾಲ್ವರು ದರೋಡೆಕೊರರು ಚಾಕು ಮತ್ತು ಕಬ್ಬಿಣದ ರಾಡ್ ತೋರಿಸಿ ಅವರನ್ನು ಹೆದರಿಸಿ 10 ಸಾವಿರ ನಗದು ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಅಷ್ಟೇ ಅಲ್ಲದೆ, ಮನೆಯಲ್ಲಿದ್ದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ್ದಾರೆ. ಆ ವೇಳೆ ಅವರು ಕೂಗಿಕೊಂಡಾಗ ಹೆದರಿ ಅಲ್ಲಿಂದ ಪರಾರಿಯಾಗಿದ್ದರು.

ನಗದು, ಚಿನ್ನಾಭರಣ ದೋಚಿದ್ದಲ್ಲದೇ ಅತ್ಯಾಚಾರ ಯತ್ನ ನಡೆಸಿದ್ದ ದರೋಡೆಕೋರರ ಬಂಧನ

ಘಟನೆ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಬಂಧಿತರಿಂದ 7 ಲಕ್ಷ ಮೌಲ್ಯದ 151 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತಿಬ್ಬರ ಪತ್ತೆಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

Last Updated : Nov 9, 2021, 9:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.