ETV Bharat / state

ವಿದೇಶಿ ಪ್ರಜೆ ಬಂಧನ, 15 ಲಕ್ಷ ಮೌಲ್ಯದ 403 ಎಕ್ಸ್ಟಾಸಿ ಟ್ಯಾಬ್ಲೆಟ್‌ ವಶಕ್ಕೆ - sells Ecstasy tablets in banglore

ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಪಾರಸ್ಥರಿಗೆ ಮತ್ತು ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ, ಟೆಕ್ಕಿಗಳಿಗೆ ಈ ಆರೋಪಿ ಎಕ್ಸ್ಟಾಸಿ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಪೊಲೀಸರಿಗೆ ನಿಖರ ಮಾಹಿತಿ ಲಭ್ಯವಾಗಿತ್ತು.

Arrest of foreign person who sells Ecstasy tablets  in city
ವಿದೇಶಿ ಪ್ರಜೆಯ ಬಂಧನ
author img

By

Published : Aug 16, 2021, 6:02 PM IST

ಬೆಂಗಳೂರು: ಗೋವಿಂದಪುರ ಪೊಲೀಸರು ಕಾರ್ಯಾಚರಣೆ ಎಕ್ಸ್ಟಾಸಿ ಎಂಬ ಮತ್ತು ಬರುವ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿ 15 ಲಕ್ಷ ಮೌಲ್ಯದ 403 ಟ್ಯಾಬ್ಲೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಾಪಾರಸ್ಥರಿಗೆ ಮತ್ತು ವಿವಿಧ ಕಾಲೇಜ್ ವಿದ್ಯಾರ್ಥಿಗಳಿಗೆ, ಟೆಕ್ಕಿಗಳಿಗೆ ಹಾಗೂ ತನ್ನದೇ ಆದ ಗಿರಾಕಿಗಳಿಗೆ ಎಕ್ಸ್ಟಾಸಿ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿತ್ತು.

ಈ ಹಿನ್ನೆಲೆಯಲ್ಲಿ ಹೆಚ್.ಬಿ.ಆರ್ ಲೇಔಟ್‌ನ 5ನೇ ಬ್ಲಾಕ್, 5ನೇ ಕ್ರಾಸ್ ನಲ್ಲಿ ವಿದೇಶಿ ಪ್ರಜೆಯನ್ನು ವಿಚಾರಣೆ ನೆಡೆಸಿದ್ದರು. ಆ ಸಮಯದಲ್ಲಿ 15,50,000 ರೂ ಬೆಲೆಯ ವಿವಿಧ ಬಣ್ಣದ ವಿವಿಧ ನಮೂನೆಯ 403 ಎಕ್ಸ್ಟಾಸಿ ಟ್ಯಾಬ್ಲೆಟ್‌ಗಳು ಮತ್ತು ಒಂದು ಮೊಬೈಲ್ ಪೋನ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬಾಡಿಗೆ ನೀಡಿದ್ದ ಮಾಲೀಕರ ವಿಚಾರಣೆ :

ನೈಜೀರಿಯಾ ದೇಶದ ಪ್ರಜೆಯಾದ ಆರೋಪಿತನಿಗೆ ಈತನ ದಾಖಲಾತಿಗಳನ್ನು ಪರಿಶೀಲಿಸದೇ ವಾಸಿಸಲು ಮನೆ ಬಾಡಿಗೆ ನೀಡಿದ್ದ ಮನೆಯ ಮಾಲೀಕರುಗಳ ವಿಚಾರಣೆ ಕೈಗೊಂಡಿದ್ದು, ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಪೂರ್ವ ವಿಭಾಗದ ಡಿ.ಸಿ.ಪಿ ಶರಣಪ್ಪ ಮಾಹಿತಿ ನೀಡಿದರು.

ಈ ಕಾರ್ಯಾಚರಣೆಯನ್ನು ಕೆ.ಜಿ ಹಳ್ಳಿ ಉಪ ವಿಭಾಗದ ಎ.ಸಿ.ಪಿ ಕೆ.ಎಸ್. ಜಗದೀಶ್ ಮಾರ್ಗದರ್ಶನದಲ್ಲಿ, ಗೋವಿಂದಪುರ ಪೊಲೀಸ್ ಠಾಣೆಯ ಎಸ್​ಐ ಆರ್‌ ಪ್ರಕಾಶ್, ಪಿಎಸ್​ಐ ಲೋಕೇಶ್ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.