ETV Bharat / state

ಮೆಸೇಜ್​ಗೆ ರಿಪ್ಲೈ ಮಾಡಿ ಸಂಕಷ್ಟಕ್ಕೆ ಸಿಲುಕಿದ ಮಹಿಳೆ: ಬೆತ್ತಲೆ ವಿಡಿಯೋ​ ಇಟ್ಕೊಂಡು ಬ್ಲಾಕ್​ಮೇಲ್​ ಮಾಡುತ್ತಿದ್ದವ ಅರೆಸ್ಟ್​ - ಬೆತ್ತಲೆ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್​ಮೇಲ್​ ಮಾಡುತ್ತಿದ್ದವನ ಬಂಧನ

ಹಣ ಕೊಡು ಇಲ್ಲ ಅಂದ್ರೆ ನಿನ್ನ ಫೋಟೋಸ್​ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತೀನಿ ಅಂತಾ ಬ್ಲಾಕ್ಮೇಲ್ ಮಾಡಿ 50 ಸಾವಿರಕ್ಕೂ ಹೆಚ್ಚು ಹಣ ಪಡೆದುಕೊಂಡಿದ್ದನಂತೆ. ಅಲ್ಲದೆ ಹೆಚ್ಚಿನ ಹಣಕ್ಕೂ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಪರಿಣಾಮ ಈಗ ಆರೋಪಿ ಕಂಬಿ ಎಣಿಸುತ್ತಿದ್ದಾನೆ.

ಅಪರಿಚಿತನ ಮೆಸೇಜ್​ಗೆ ರಿಫ್ಲೇ ಮಾಡಿ ಸಂಕಷ್ಟಕ್ಕೆ ಸಿಲುಕಿದ ಮಹಿಳೆ

author img

By

Published : Mar 3, 2022, 5:54 PM IST

ಬೆಂಗಳೂರು: ನಿಮಗೇನಾದರೂ ಅಪರಿಚಿತ ವ್ಯಕ್ತಿಗಳು ಮೆಸೇಜ್ ಮಾಡ್ತಿದ್ದಾರಾ..? ಮೆಸೇಜ್ ನಲ್ಲೇ ಮೋಡಿ ಮಾಡಿ ಸ್ನೇಹ ಬೆಳೆಸ್ತಿದ್ದಾರಾ..? ಹಾಗಾದ್ರೆ ಅವರ ಜೊತೆ ಸ್ನೇಹ ಬೆಳೆಸುವ ಮುಂಚೆ ಹುಷಾರಾಗಿರಿ. ಸ್ನೇಹ ಅಂತಾ ಶುರು ಮಾಡಿದೋರು ಮದುವೆ ಮಾಡಿಕೊಳ್ಳುತ್ತೀನಿ ಅಂತಾ ಯಾಮಾರಿಸಿ ಹಣ ಪೀಕ್ತಾರೆ. ಈ ರೀತಿ ಮದುವೆಯಾಗೋದಾಗಿ ನಂಬಿಸಿ ಮಹಿಳೆಗೆ ವಂಚನೆ ಮಾಡಿದೋನು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಮದುವೆಯಾಗ್ತೀನಿ ಅಂತಾ ನಂಬಿಸಿ ಮಹಿಳೆಯೊಬ್ಬಳ ಫೋಟೋ, ವಿಡಿಯೋ ಇಟ್ಕೊಂಡು ಬ್ಲಾಕ್ ಮೇಲ್ ಮಾಡಿ ಹಣ ಹಾಕಿಸಿಕೊಂಡಿದ್ದ ಆರೋಪಿಯನ್ನ ಸೆಂಟ್ರಲ್ ಸೈಬರ್ ಕ್ರೈಂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಆರೋಪಿ
ಆರೋಪಿ

ಏನಿದು ಘಟನೆ? ವಿಜಯಪುರ ಮೂಲದ ಪ್ರಶಾಂತ್ ಬಂಧಿತ ಆರೋಪಿ. ಸಂತ್ರಸ್ತೆಗೆ ಅಪರಿಚಿತನೊಬ್ಬ ಹಾಯ್, ಹಲೋ ಅಂತಾ ಮೆಸೇಜ್ ಮಾಡಿದ್ದ. ಆತನ ಮೆಸೇಜ್​​ಗೆ ಅಷ್ಟೇ ನೀಟಾಗಿ ರೀಪ್ಲೈ ನೀಡಿದ್ದ ಮಹಿಳೆ, ಸ್ನೇಹ ಬೆಳೆಯೋವರೆಗೂ ಮೆಸೇಜ್ ಮುಂದುವರೆಸಿದ್ದಳು. ಅಷ್ಟೇ ಅಲ್ಲಾ, ಸ್ನೇಹ ಪ್ರೀತಿಯಾಗಿ, ಪ್ರೀತಿ ಮದುವೆಯವರೆಗೂ ಮುಂದುವರೆದಿತ್ತು. ಆದ್ರೆ, ಮದುವೆಯಾಗಿ ಹಸೆಮಣೆ ಏರ್ತಿನಿ ಅಂದ್ಕೊಂಡಿದ್ದಾಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಇದನ್ನೂ ಓದಿ: ಯಾದಗಿರಿ ಸಿಲಿಂಡರ್​ ಸ್ಫೋಟ ಪ್ರಕರಣ: ಮೃತರ ಸಂಖ್ಯೆ 11ಕ್ಕೆ ಏರಿಕೆ

ಮದುವೆಯಾಗ್ತೀನಿ ಅಂತಾ ನಂಬಿಸಿದ್ದ ವ್ಯಕ್ತಿಯನ್ನ ಮಹಿಳೆ ಸಂಪೂರ್ಣವಾಗಿ ನಂಬಿದ್ದಳು. ಇಬ್ಬರ ಮಧ್ಯೆ ಕಾಲ್, ಚಾಟ್ ಮುಂದುವರಿದಿತ್ತು. ಅಲ್ಲದೆ ಅಶ್ಲೀಲ ಮೆಸೇಜ್​​ಗಳು, ವಿಡಿಯೋ ಕಾಲ್ ಎಲ್ಲವೂ ಶುರುವಾಗಿದ್ದವು. ಇದನ್ನೇ ಬಂಡವಾಳವಾಗಿಟ್ಟುಕೊಂಡ ಆರೋಪಿ, ಮಹಿಳೆಯಿಂದ ಬೆತ್ತಲೆ ಫೋಟೋಗಳು, ವಿಡಿಯೋಗಳನ್ನ ಕಳಿಸಿಕೊಂಡಿದ್ದಾನೆ. ಆತನ ಮೊಬೈಲ್​​ಗೆ ಬೇಕಾದ ವಿಡಿಯೋ, ಫೋಟೋಗಳು ಬಂದ್ವೋ ಅಲ್ಲಿಂದ ವರಸೆ ಬದಲಿಸಿದ್ದ.

ಹಣ ಕೊಡು ಇಲ್ಲ ಅಂದ್ರೆ ನಿನ್ನ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತೀನಿ ಅಂತಾ ಬ್ಲಾಕ್ಮೇಲ್ ಮಾಡಿ 50 ಸಾವಿರ ರೂಪಾಯಿಗೂ ಹೆಚ್ಚು ಹಣ ಪಡೆದುಕೊಂಡಿದ್ದನಂತೆ. ಅಲ್ಲದೆ ಹೆಚ್ಚಿನ ಹಣಕ್ಕೂ ಬೇಡಿಕೆ ಇಟ್ಟಿದ್ದ ಎನ್ನಲಾಗ್ತಿದೆ. ಇದ್ರಿಂದ ಬೇಸತ್ತಿದ್ದ ಮಹಿಳೆ ಸೆಂಟ್ರಲ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ ತನಿಖೆ ಶುರು ಮಾಡಿದ್ದ ಸೈಬರ್ ಕ್ರೈಂ ಪೊಲೀಸರು, ವಿಜಯಪುರ ಮೂಲದ ಪ್ರಶಾಂತ್ ಎಂಬ ಆರೋಪಿಯನ್ನ ಬಂಧಿಸಿದ್ದಾರೆ. ಸದ್ಯ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಈತನಿಂದ ಎಷ್ಟು ಜನರಿಗೆ ವಂಚನೆಯಾಗಿದೆ, ಇನ್ನೂ ಯಾವ ಯಾವ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಅನ್ನೋದ್ರ ಬಗ್ಗೆ ತನಿಖೆ ನಡೆಯುತ್ತಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.