ಬೆಂಗಳೂರು : ಹಿಂದೂ ಮುಂಖಡರ ಹತ್ಯೆಗೆ ಸಂಚು ರೂಪಿಸಿದ್ದ ಮೂವರನ್ನು ತಮಿಳುನಾಡು ಪೊಲೀಸರು ಸಿಸಿಬಿ ಪೊಲೀಸರ ಸಹಾಯದಿಂದ ಬಂಧಿಸಿದ್ದಾರೆ.
ಮೊಹಮ್ಮದ್ ಹನೀಫ್ ಖಾನ್, ಮೊಹಮ್ಮದ್ ಝೈದ್ ಹಾಗೂ ಇಮ್ರಾನ್ ಖಾನ್ ಎನ್ನುವ ಆರೋಪಿಗಳನ್ನು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದಾರೆ. ಇದಕ್ಕು ಮುನ್ನ ತಮಿಳುನಾಡಿನಲ್ಲಿಯೇ ಇದ್ದ ಈ ಹಂತಕರು 2019ರ ಡಿಸೆಂಬರ್ 3 ನೇ ವಾರದಲ್ಲಿ ತಮಿಳುನಾಡಿನಿಂದ ಸಿಲಿಕಾನ್ ಸಿಟಿಗೆ ಬಂದು ಪಿಜಿಯಲ್ಲಿ ವಾಸವಿದ್ದರು. ಈ ಹಿನ್ನೆಲೆ ತಮಿಳುನಾಡಿನ ಪೊಲೀಸರು ವಿಶೇಷ ತಂಡಗಳ ಮೂಲಕ ಆರೋಪಿಗಳ ಪತ್ತೆಗಾಗಿ ದೇಶದ ವಿವಿಧ ನಗರಗಳಲ್ಲಿ ಶೋಧಕಾರ್ಯ ನಡೆಸಿದ್ದರು.
ನೆರೆಯ ರಾಜ್ಯ ತಮಿಳುನಾಡಿನಲ್ಲಿ ಸದ್ದಿಲ್ಲದೇ ಕೊಲೆ ಪ್ರಕರಣವೊಂದು ನಡೆದಿತ್ತು, ಅಲ್ಲಿ ರಕ್ತ ಹರಿಸಿದ್ದ ರಾಕ್ಷಸರ ಭೇಟೆಯಾಡಿದಾಗ ಕೆಲ ಜಿಹಾದಿಗಳು ತಮಿಳುನಾಡಿನ ಪೊಲೀಸರ ಬಲೆಗೆ ಬಿದ್ದಿದ್ರು. ಸೆರೆಸಿಕ್ಕ ಜಿಹಾದಿಗಳನ್ನು ವಿಚಾರಣೆಗೊಳಪಡಿಸಿದಾಗ ಬೆಂಗಳೂರಿನಲ್ಲಿರುವ ಕೆಲ ಸಹಚರರು ಜೊತೆ ಸೇರಿ ಕೊಲೆ ಮಾಡಿರುವುದಾಗಿ ಹೇಳಿದ್ದರು.
ಬೆಂಗಳೂರಿನಲ್ಲಿ ಸೆರೆ ಸಿಕ್ಕ ಶಂಕಿತರಿಂದ 3 ಪಿಸ್ತೂಲ್, ಮದ್ದು ಗುಂಡುಗಳನ್ನು ಜಪ್ತಿಮಾಡಲಾಗಿದೆ. ಅಷ್ಟೇ ಅಲ್ಲ, ಬಂಧಿತರನ್ನು ಚೆನೈನ ಕೋರ್ಟ್ಗೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರಿನ ಸಿಸಿಬಿ ಪೊಲೀಸರು ಈ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಇವರು ನಗರದ ಪಿ.ಜಿಯೊಂದರಲ್ಲಿ ವಾಸವಿದ್ದು ಪಿಜಿ ಮಾಲೀಕ ಹೇಗೆ ವಾಸ್ತವ್ಯ ಹೂಡಲು ಜಾಗ ನೀಡಿದ ಹಾಗೆ ಆರೋಪಿಗಳ ಹಿನ್ನಲೆ ಏನು. ಎನ್ನುವುದರ ಬಗ್ಗೆ ಸಿಸಿಬಿ ಪೊಲೀಸರು ತನೀಕೆ ಮುಂದುವರೆಸಿದ್ದಾರೆ.