ಬೆಂಗಳೂರು: ಪಾರ್ಕ್ನಲ್ಲಿ ವಾಕಿಂಗ್ ಮಾಡುವ ಮಹಿಳೆಯರ ಫೋಟೋ ಮತ್ತು ವಿಡಿಯೋ ತೆಗೆಯುತ್ತಿದ್ದ ಸೈಕೊಪಾತ್ ಮನಸ್ಥಿತಿಯ ಆರೋಪಿಯನ್ನ ಜಯನಗರ ಪೊಲೀಸರು ಬಂಧಿಸಿದ್ದಾರೆ. ಪ್ರಸನ್ನ ಬಂಧಿತ ಆರೋಪಿ. ಕಳೆದ 31ರಂದು ಜಯನಗರದ ಅಕ್ಕಮಹಾದೇವಿ ಪಾರ್ಕ್ನಲ್ಲಿ ವಾಕಿಂಗ್ ಮಾಡುವ ಮಹಿಳೆಯರ ಫೋಟೋ ಹಾಗೂ ವಿಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದ.
ಈ ಹಿಂದೆ ಕೂಡ ಹೀಗೆ ಮಹಿಳೆಯರ ಫೋಟೋ ವಿಡಿಯೋ ತೆಗೆದಿದ್ದ. ಈ ಬಗ್ಗೆ ಮಹಿಳೆಯರು ವಾರ್ನ್ ಮಾಡಿದ್ದರು. ಇಷ್ಟಾದರೂ ಬುದ್ದಿ ಕಲಿಯದೇ ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿದ್ದ. ಆತನನ್ನು ಹಿಡಿದು ಮೊಬೈಲ್ ಪರೀಕ್ಷಿಸಿದಾಗ ಹಲವಾರು ಮಹಿಳೆಯರ ಫೋಟೋ ಮತ್ತು ವಿಡಿಯೋಗಳು ಸಿಕ್ಕಿವೆ.
ಜಯನಗರ ಪೊಲೀಸರು ಆರೋಪಿಯ ಮೇಲೆ ಐಪಿಸಿ ಸೆಕ್ಷನ್ 354 C ಮತ್ತು 354 D ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಇದನ್ನೂ ಓದಿ: ಯುಗಾದಿ ಹಬ್ಬಕ್ಕೆಂದು ಊರಿಗೆ ಹೋಗಿದ್ದ ಉದ್ಯಮಿ : ಮನೆಯಲ್ಲಿದ್ದ ಡೈಮಂಡ್ ಕದ್ದ ಖದೀಮರು