ETV Bharat / state

ಶಂಕರ್​ ಬಿದರಿ ಇಮೇಲ್‌ ಖಾತೆ‌ ಹ್ಯಾಕ್​ ಮಾಡಿದ ಖದೀಮರು ಅರೆಸ್ಟ್​!

ನಿವೃತ್ತ ಡಿಜಿ ಶಂಕರ್ ಬಿದರಿಯವರ ಇಮೇಲ್‌ ಖಾತೆ‌ ದುರ್ಬಳಕೆ ಮಾಡಿಕೊಂಡು ಹಣ ವಂಚಿಸಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

Shankar Bidri
ಖದೀಮರ ಅರೆಸ್ಟ್​
author img

By

Published : Mar 10, 2021, 10:30 AM IST

ಬೆಂಗಳೂರು: ನಿವೃತ್ತ ಡಿಜಿ ಶಂಕರ್ ಬಿದರಿಯವರ ಇಮೇಲ್‌ ಖಾತೆ‌ ದುರ್ಬಳಕೆ ಮಾಡಿಕೊಂಡು ಹಣ ವಂಚಿಸಿದ್ದ ನಾಗಲ್ಯಾಂಡ್ ಮೂಲದ ಮಹಿಳೆ ಸೇರಿ ಮೂವರು ಸೈಬರ್ ಖದೀಮರನ್ನು ನಗರ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಥಿಯಾ ಅಲಿಯಾಸ್​ ರುಬಿಕಾ(31), ಸೆರೋಪಾ (27) ಹಾಗೂ ಇಸ್ಟರ್ ಕೊನ್ಯಾಕ್ ಬಂಧಿತರು.

ಕಳೆದ ಫೆ.26ರಂದು ಶಂಕರ್ ಬಿದರಿಯವರ ಇ - ಮೇಲ್ ಖಾತೆ ಹ್ಯಾಕ್ ಮಾಡಿ ಸ್ನೇಹಿತರಿಗೆ ಹಣ ಕಳಿಸುವಂತೆ ಮೇಸೆಜ್ ಮಾಡಿದ್ದರು. ಈ ಪೈಕಿ 25 ಸಾವಿರ ರೂ‌.ಹಣ ಆರೋಪಿಗಳ ಅಕೌಂಟ್​ಗೆ ಜಮೆ ಮಾಡಿದ್ದರು. ಈ ಸಂಬಂಧ ಆಗ್ನೇಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ.

ಪ್ರಮುಖ ಆರೋಪಿಯಾದ ರುಬಿಕಾ ಕಳೆದ ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದು ಬ್ಯೂಟಿಪಾರ್ಲರ್​ಗಳಲ್ಲಿ ಮತ್ತು ಸೇಲ್ ಗರ್ಲ್​ಗಳಾಗಿ ಕೆಲಸ ಮಾಡುತ್ತಿದ್ದಳು. ಫೇಸ್​ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಾದ ಜೇಮ್ಸ್ ಹಾಗೂ ಪೀಟರ್ ನೆರವಿನಿಂದ ಆನ್​​​​ಲೈನ್‌ ಮುಖಾಂತರ ಸಾರ್ವಜನಿಕರಿಗೆ ವಂಚಿಸುತ್ತಿದ್ದರು. ವಂಚಿಸಿದ ಹಣ ವರ್ಗಾವಣೆ ಮಾಡಲು ನಾಗಾಲ್ಯಾಂಡ್ ಮೂಲದ ನಿರುದ್ಯೋಗಿಗಳಿಂದ‌ ಕೆಲಸ ಕೊಡಿಸುವ ಆಮಿಷವೊಡ್ಡಿ ಅವರಿಂದ ಬ್ಯಾಂಕ್ ಖಾತೆ ಸೇರಿದಂತೆ ಇತರ‌‌ ದಾಖಲಾತಿ ಪಡೆದುಕೊಂಡು ಮೋಸ ಮಾಡುತ್ತಿದ್ದರು.

ಇದನ್ನು ಓದಿ: ಆಂಧ್ರಪ್ರದೇಶ ಪುರಸಭೆ - ನಗರ ಪಂಚಾಯಿತಿ ಚುನಾವಣೆ ಪ್ರಾರಂಭ

ಕಳೆದ ವರ್ಷ ನವೆಂಬರ್​ನಿಂದ‌ 60ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆದು ಎಟಿಎಂ ಕಾರ್ಡ್ ಹಾಗೂ ಪಾಸ್ ಪೋರ್ಟ್​​​​​ಗಳನ್ನು ಸೈಬರ್ ಅಪರಾಧ ಜಾಲದ ಆರೋಪಿಗಳಿಗೆ ನೀಡುತ್ತಿದ್ದಳು. ಬಂಧಿತರಿಂದ 4 ಮೊಬೈಲ್, ವಿವಿಧ ಹೆಸರಿನಲ್ಲಿರುವ 13 ಪ್ಯಾನ್ ಕಾರ್ಡ್, 6 ಆಧಾರ್ ಕಾರ್ಡ್, 2 ಎಟಿಎಂ ಕಾರ್ಡ್ ಹಾಗೂ‌ 20ಕ್ಕೂ ಹೆಚ್ಚು ಬ್ಯಾಂಕ್ ಗಳಿಂದ‌ 2 ಲಕ್ಷ ರೂ.ಜಪ್ತಿ ಮಾಡಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.