ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಚಾರ್ಜ್ ಉಪಯೋಗಿಸುತ್ತಿರುವಾಗ ಎಚ್ಚರದಿಂದ ಇರುವುದು ಸೂಕ್ತ. ಸ್ವಲ್ಪ ಯಾಮಾರಿದ್ರು ನಿಮ್ಮ ಖಾಸಗಿ ವಿಷಯಗಳು ವಂಚಕರ ಪಾಲಾಗುವುದು ಗ್ಯಾರಂಟಿಯಾಗಿದೆ.
ಸಾರ್ವಜನಿಕ ಚಾರ್ಜಿಂಗ್ ಪೋರ್ಟ್ ಬಳಸಿದ ಸಂದರ್ಭವನ್ನು ವಂಚಕರು ದುರ್ಬಳಕೆ ಮಾಡಿಕೊಂಡು ಮಾಲ್ವೇರ್ ಬಳಸಿ ಸಾರ್ವಜನಿಕರ ಮೊಬೈಲ್ನಲ್ಲಿ ಅಡಕವಾಗಿರುವ ಖಾಸಗಿ ಮಾಹಿತಿಗಳನ್ನು ಕಳ್ಳತನ ಮಾಡಲು ಮುಂದಾಗಿದ್ದಾರೆ.
ಈ ಚಾರ್ಜರ್ ಪಾಯಿಂಟ್ ಖದೀಮರ ಟಾರ್ಗೆಟ್ ಹೇಗೆ ಗೊತ್ತಾ?
ಈಗಾಗಲೇ ಹಲವಾರು ಸೈಬರ್ ಪ್ರಕರಣಗಳು ಜನರನ್ನ ಜಾಗೃತಿಗೊಳಿಸುತ್ತಲೇ ಇವೆ. ಸದ್ಯ ದಿನದಿಂದ ದಿನಕ್ಕೆ ಸೈಬರ್ ಖದೀಮರಂತು ಹೊಸ ಹೊಸ ಪ್ರಯೋಗ ಮಾಡಿ ಜನರ ಜೊತೆ ಆಟವಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಸೆಕ್ಯೂರಿಟಿ ಬೇಸ್ಡ್ ಇಲ್ಲದೆ ಇರುವ ಜಾಗಗಳಲ್ಲಿ ಈ ಕೃತ್ಯಕ್ಕೆ ಕೈ ಹಾಕಿದ್ದಾರೆ.
ಸೆಕ್ಯೂರ್ಡ್ ಅಲ್ಲದ ಜಾಗಗಳೇ ಖದೀಮರ ಟಾರ್ಗೆಟ್ ಹೇಗೆ?
ಈಗಾಗಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೆಲ ಸೂಚನೆಗಳನ್ನ ನೀಡಿ ಅಲರ್ಟ್ ಇರುವಂತೆ ಪಬ್ಲಿಕ್ಗೆ ತಿಳಿಸಿದ್ದಾರೆ. ಈಗಿನ ಟೆಕ್ನಾಲಜಿ ಪ್ರಕಾರ ಜನರಿಗೆ ಸಹಾಯವಾಗಲಿ ಅಂತಾನೆ ಪಬ್ಲಿಕ್ ಚಾರ್ಜರ್ ಪಾಯಿಂಟ್ ಇಡಲಾಗಿದೆ. ಆದ್ರೆ ಎಷ್ಟು ಸೇಫ್ ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.
ಸಾರ್ವಜನಿಕ ಸ್ಥಳಗಳಾದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಹೋಟೆಲ್, ರೆಸ್ಟೋರೆಂಟ್, ಪಾರ್ಕ್, ಬಸ್ ನಿಲ್ದಾಣಗಳಲ್ಲಿ ಚಾರ್ಜರ್ ಅಳವಡಿಸಲಾಗಿದೆ. ಆದ್ರೆ ಇದನ್ನ ನೀವು ಉಪಯೋಗಿಸುವಾಗ ನಿಮ್ಮ ಅಕ್ಕ-ಪಕ್ಕ ಯಾರಿರ್ತಾರೆ ಎಂಬ ಅರಿವೇ ಇರಲ್ಲ. ಆದ್ರೆ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಡಾಟಾಗಳನ್ನ ಚಾರ್ಜರ್ ಮೂಲಕ ಪಡೆದುಕೊಳ್ತಾರೆ ಖದೀಮರು.
ಸೇಫ್ ಸ್ಥಳವಾದ್ರೂ ನಿಮ್ಮ ಅಲರ್ಟ್ನಲ್ಲಿ ನೀವಿರಿ...
ಇನ್ನೂ ಸಾರ್ವಜನಿಕ ಸ್ಥಳಗಳು ಅಷ್ಟೊಂದು ಸೇಫ್ ಅಲ್ಲ. ಸೈಬರ್ ಹ್ಯಾಕರ್ಸ್ ಇಂತಹ ಸಾರ್ವಜನಿಕ ಸ್ಥಳಗಳು ಸೇರಿದಂತೆ ಸೇಫ್ ಸ್ಥಳಗಳಲ್ಲಿ ಉಪಯೋಗಿಸುವ ಮೊಬೈಲ್ ಜಾರ್ಜ್ಗಳ ಮೂಲಕ ನಿಮ್ಮ ಖಾಸಗಿ ಮಾಹಿತಿ ಪಡೆಯುತ್ತಾರೆ.
ವಿಮಾನನಿಲ್ದಾಣಗಳಲ್ಲಿ ಈಗಾಗಲೇ ಸಾಕಷ್ಟು ಚಾರ್ಜರ್ ಪಾಯಿಂಟ್ಗಳನ್ನ ಅಳವಡಿಸಲಾಗಿದೆ. ಆದ್ರೆ ಅದನ್ನ ಅಲ್ಲಿನ ಸಿಬ್ಬಂದಿಗಳು ಚೆಕ್ ಮಾಡೋದಿಲ್ಲ. ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿಮಾನನಿಲ್ದಾಣದ ಬಳಿ ಜನ ಓಡಾಡ್ತಾರೆ. ಮೊಬೈಲ್ ಯ್ಯೂಸ್ ಮಾಡ್ತಾನೆ ಇರ್ತಾರೆ. ಏನೂ ಪ್ರಾಬ್ಲಂ ಆಗಲ್ಲ ಅಂದುಕೊಂಡ್ರೆ ಅದು ನಿಮ್ಮತಪ್ಪು. ಅಲ್ಲಿಯೂ ಹ್ಯಾಕರ್ಸ್ ಬಂದು ನಿಮ್ಮ ಡಾಟಾಗಳನ್ನ ಹ್ಯಾಕ್ ಮಾಡಿ ಹಣ ದೋಚಬಹುದಾಗಿದೆ.
ಸಾಮಾಜಿಕ ಜಾಲತಾಣವೂ ಟಾರ್ಗೆಟ್...
ಈ ಹಿಂದೆ ಕಾರ್ಡ್ಗಳ ಮೂಲಕ ಹಣ ದೋಚುತ್ತಿದ್ದ ಸೈಬರ್ ಹ್ಯಾಕರ್ಸ್ ಸದ್ಯ ಸೋಷಿಯಲ್ ಮೀಡಿಯಾಗಳನ್ನ ಟಾರ್ಗೆಟ್ ಮಾಡಿದ್ದಾರೆ. ನೀವು ಹಾಕೋ ಚಾರ್ಜ್ ಪಾಯಿಂಟ್ ಇಂದಲೇ ನಿಮ್ಮಪ್ರೊಫೈಲ್ ಹ್ಯಾಕ್ ಮಾಡಿ ನಿಮ್ಮ ಫೋಟೋವನ್ನ ಅಶ್ಲೀಲವಾಗಿ ಬಳಸಿ ನಿಮ್ಮಿಂದಲೇ ಹಣ ಕೀಳ್ತಾರೆ. ಅಲ್ಲದೆ ನಿಮ್ಮಕುಟುಂಬದವರನ್ನೂ ಟಾರ್ಗೆಟ್ ಮಾಡಿ ನಿಮಗೇ ಗೊತ್ತಿಲ್ಲದಂತೆ ಅವರ ಬಳಿಯೂ ಹಣ ಕೀಳ್ತಾರೆ. ಈ ಮೂಲಕ ಚಾರ್ಜರ್ ಪಾಯಿಂಟ್ ಬಳಸದಿರಿ ಅಂತ ಕಮಿಷನರ್ ಸೂಚನೆ ಕೊಟ್ಟಿದ್ದಾರೆ.
ಹೇಗೆ ನಡೆಯುತ್ತೆ ಹ್ಯಾಕಿಂಗ್?
ಅಂದಹಾಗೆ ನಾವು ಚಾರ್ಜ್ ಹಾಕಿದ್ರೆ ಜಸ್ಟ್ ವೈರ್ನಲ್ಲೆ ಹೇಗೆ ಡಾಟಾ ಕದಿಯಲು ಸಾಧ್ಯ ಅನ್ನೋ ಅನುಮಾನ ನಿಮಗೆ ಬರಬಹುದು. ಅದಕ್ಕೂ ಉತ್ತರ ಕಂಡುಕೊಂಡಿದ್ದಾರೆ ಸೈಬರ್ ಎಕ್ಸ್ಪರ್ಟ್ಸ್.
ನಾವು ಗೊತ್ತಿಲ್ಲದೆ ಮಾಡುವ ಒಂದು ತಪ್ಪು ನಮ್ಮಇಡೀ ಜೀವನಕ್ಕೆಮಾರಕವಾಗಿ ಬಿಡುತ್ತೆ. ವೈರ್ ಮೂಲಕ ತಮಗೆ ಬೇಕಾದ ವೈರಸ್ ಉಪಯೋಗಿಸಿ ಅಂದ್ರೆ ಜ್ಯೂಸ್ ಜ್ಯಾಕಿಂಗ್ ಮೂಲಕ ನಿಮ್ಮ ಎಲ್ಲಾ ಡಾಟಾಗಳನ್ನ ಆಪರೇಟ್ ಮಾಡ್ತಿರ್ತಾರೆ. ನೀವು ಯ್ಯೂಸ್ ಮಾಡೋ ಪ್ರತಿಯೊಂದು ಆ್ಯಪ್ ಗಳ ಮೇಲೆ ನಿಗಾ ಇಟ್ಟಿರ್ತಾರೆ. ಒಮ್ಮೆ ನೀವು ಪಾಸ್ ವರ್ಡ್ ಹಾಕಿದ್ರೆ ಸಾಕು ಅರಾಮಾಗಿ ಸೈಬರ್ ಹ್ಯಾಕರ್ಸ್ಗೆ ತಲುಪುತ್ತೆ. ಇದು ಸಿಕ್ಕಿದ ಮೇಲೆ ನಿಮ್ಮ ಅಕೌಂಟ್ ಹ್ಯಾಕ್ ಮಾಡೋದೇನು ಕಷ್ಟ ಅಲ್ಲಬಿಡಿ. ಹೀಗಾಗಿ ನಿಮ್ಮ ಎಚ್ಚರದಲ್ಲಿ ನೀವಿರಿ.
ಚಾರ್ಜಿಂಗ್ ಪಾಯಿಂಟ್ ಕೂಡ ಸೇಫ್ ಅಲ್ಲ...!
ಕೇವಲ ಯುಎಸ್ಬಿ ಕನೆಕ್ಷನ್ ಅಷ್ಟೇ ಅಲ್ಲದೆ, ಚಾರ್ಜಿಂಗ್ ಪಾಯಿಂಟ್ನಿಂದಲೂ ನಿಮ್ಮ ಡಾಟಾ ರೆಕಾರ್ಡ್ ಆಗುತ್ತೆ. ಯಾವುದಾದರು ಸ್ಥಳಗಳಲ್ಲಿ ನೀವು ಚಾರ್ಜಿಂಗ್ ಪಾಯಿಂಟ್ ಉಪಯೋಗಿಸಿದಾಗ ಹಿಂಬದಿ ಸಿಸ್ಟಮ್ನಲ್ಲಿ ನಿಮ್ಮ ರೆಕಾರ್ಡ್ ಡಾಟಾ ಕಲೆಕ್ಟ್ ಆಗ್ತಿರುತ್ತೆ. ನೀವು ಮೊಬೈಲ್ನಲ್ಲಿ ಏನೆಲ್ಲಾ ಆಪರೇಟ್ ಮಾಡ್ತಿರ್ತೀರಾ ಅದೆಲ್ಲವೂ ಹ್ಯಾಕರ್ಸ್ ಸಿಸ್ಟಮ್ನಲ್ಲಿ ತೋರಿಸುತ್ತೆ. ಈ ಮೂಲಕ ನಿಮಗೇ ಗೊತ್ತಿಲ್ಲದ ಹಾಗೆ ನಿಮ್ಮಜುಟ್ಟು ಜನವಾರಗಳನ್ನೆಲ್ಲಾ ಹ್ಯಾಕರ್ಸ್ ಕೈಗೆ ಇಟ್ಟಂತಾಗುತ್ತೆ.
ನಿಮಗೆ ಗೊತ್ತಿಲ್ಲದಂತೆ ನಿಮ್ಮ ಮಾಹಿತಿ ಹ್ಯಾಕರ್ಸ್ ಬಳಿ ಇರುತ್ತೆ..!
ಇನ್ನೂ ನೀವು ಮೊಬೈಲ್ ಚಾರ್ಜ್ ಮಾಡಲು ಹಾಕಿ ಯಾವುದಾದರೂ ಆ್ಯಪ್ ಅಥವಾ ಅಕೌಂಟ್ ಪಾಸ್ವರ್ಡ್ಗಳು ಹಾಗೂ ಕ್ಯೂಆರ್ ಕೋಡ್ಗಳನ್ನ ಬಳಸಿ ಹಣ ವರ್ಗಾಯಿಸಲು ಮುಂದಾದ್ರೆ ನಿಮ್ಮ ಮಾಹಿತಿಯನ್ನ ಸುಲಭವಾಗಿ ಕೂತಲ್ಲೇ ಟ್ರ್ಯಾಕ್ ಮಾಡ್ತಾರೆ ಖತರ್ನಾಕ್ ಹ್ಯಾಕರ್ಸ್. ಇದನ್ನ ಆಪರೇಟ್ ಮಾಡೋಕೆ ಅಂತಾನೆ ಗ್ಯಾಂಗ್ ಒಂದು ರೆಡಿಯಾಗಿರುತ್ತೆ. ಫೇಸ್ಬುಕ್, ವಾಟ್ಸಾಪ್, ಅಕೌಂಟ್ ಪಾಸ್ವರ್ಡ್, ಗೂಗಲ್ ಪೇ, ಫೋನ್ ಪೇ, ಪೇಟಿಎಂ ಪಾಸ್ವರ್ಡ್ಗಳನ್ನ ಉಪಯೋಗಿಸುತ್ತಿದ್ದಲ್ಲಿ ಅದರ ಪಾಸ್ವರ್ಡ್ಗಳು ಎಲ್ಲವೂ ಹ್ಯಾಕರ್ಸ್ಗಳು ಪಡೆದುಕೊಳ್ತಾರೆ.
ಈ ಹ್ಯಾಕರ್ಸ್ದಿಂದ ಬಚಾವ್ ಆಗೋದು ಹೇಗೆ..?
- ನೀವು ಎಲ್ಲಾದ್ರು ಹೊರಗಡೆ ಹೊರಟಾಗ ನಿಮ್ಮ ಸ್ವಂತ ಚಾರ್ಜರ್ ಅಥವಾ ಪವರ್ ಬ್ಯಾಂಕ್, ಬ್ಯಾಕಪ್ ಇಟ್ಟುಕೊಳ್ಳುವುದು ಸೂಕ್ತ.
- ಡಾಟಾ ಟ್ರಾನ್ಸಫರ್ ಅಂದ್ರೆ ನಿಮ್ಮ ಫೋನ್ನಿಂದೆ ಬೇರೆಯವರಿಗೆ ಯಾವುದೇ ಫೈಲ್ ಸುಲಭವಾಗಿ ಟ್ರಾನ್ಸ್ಫರ್ ಆಗಲು ಬಿಡಬೇಡಿ.
- ಬಹು ಮುಖ್ಯವಾಗಿ ಇತರೆ ಯಾವುದೇ ಉಪಕರಣಗಳೊಂದಿಗೆ ನಿಮ್ಮ ಮೊಬೈಲ್ ಪೇರ್ ಆಗಿಲ್ಲ ಅನ್ನೋದನ್ನ ಆಗಾಗ್ಗೆ ಖಚಿತಪಡಿಸಿಕೊಳ್ಳಿ.
- ಆದಷ್ಟು ಚಾರ್ಜ್ ಹಾಕುವಾಗ ಮೊಬೈಲ್ ಸ್ವಿಚ್ ಆಫ್ ಮಾಡಿ.
- ನಿಮ್ಮ ಮೊಬೈಲ್ಗೆ ಹಾಕಿರುವ ಪ್ಯಾಟರ್ನ್ ಲಾಕ್, ಪಿನ್ ಕೋಡ್, ಪಾಸ್ ವರ್ಡ್, ಥಂಬ್ ಲಾಕ್ ಆಗಾಗ ತೆರೆಯುವದನ್ನ ನಿಲ್ಲಿಸಿ.
ಈ ಎಲ್ಲಾ ಸೂಚನೆಗಳನ್ನ ನೀವು ಪಾಲಿಸಿದ್ದಲ್ಲಿ ಸೈಬರ್ ಹ್ಯಾಕರ್ಸ್ ಗಳಿಂದ ನೀವು ದೂರ ಇರ್ತೀರಾ...