ಬೆಂಗಳೂರು: 2021ರ ಜನವರಿ 26ರಂದು ಗಣರಾಜ್ಯೋತ್ಸವ ದಿನಾಚರಣೆ ಇರುವ ಹಿನ್ನೆಲೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣಕ್ಕೆ ಉಪಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ನೇಮಿಸಲಾಗಿದೆ. ಇದರಲ್ಲಿ ಹೊಸ ಸಚಿವರ ಹೆಸರನ್ನೂ ನೇಮಕ ಸೇರಿಸಲಾಗಿದ್ದು, ಮುಂದೆ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಇವರಿಗೆ ಜವಾಬ್ದಾರಿ ನೀಡಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.
ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿ ಹೀಗಿದೆ:
1) ಬಾಗಲಕೋಟೆ- ಗೋವಿಂದ ಕಾರಜೋಳ
2) ರಾಮನಗರ- ಡಾ. ಅಶ್ವತ್ಥ ನಾರಾಯಣ
3) ರಾಯಚೂರು- ಲಕ್ಷ್ಮಣ ಸವದಿ
4) ಶಿವಮೊಗ್ಗ- ಕೆ.ಎಸ್.ಈಶ್ವರಪ್ಪ
5) ಬೆಂಗಳೂರು.ಗ್ರಾ.- ಆರ್.ಅಶೋಕ್
6) ಧಾರವಾಡ- ಜಗದೀಶ್ ಶೆಟ್ಟರ್
7)ಬಿ. ಶ್ರೀರಾಮುಲು-ಚಿತ್ರದುರ್ಗ
8) ಚಾಮರಾಜನಗರ- ಎಸ್.ಸುರೇಶ್ ಕುಮಾರ್
9)ಕೊಡಗು- ವಿ.ಸೋಮಣ್ಣ
10)ಹಾವೇರಿ- ಬಸವರಾಜ್ ಬೊಮ್ಮಾಯಿ
11)ದಕ್ಷಿಣ ಕನ್ನಡ- ಕೋಟ ಶ್ರೀನಿವಾಸ ಪೂಜಾರಿ
12)ತುಮಕೂರು- ಜೆ.ಸಿ.ಮಾಧುಸ್ವಾಮಿ
13)ಗದಗ- ಚಂದ್ರಕಾಂತಗೌಡ ಚೆನ್ನಪ್ಪಗೌಡ ಪಾಟೀಲ್
14) ಬೀದರ್- ಪ್ರಭು ಚವ್ಹಾಣ
15)ವಿಜಯಪುರ- ಶಶಿಕಲಾ ಜೊಲ್ಲೆ
16)ಬಳ್ಳಾರಿ- ಆನಂದ್ ಸಿಂಗ್
17)ದಾವಣಗೆರೆ- ಬಿ.ಎ.ಬಸವರಾಜ್
18) ಮೈಸೂರು- ಎಸ್.ಟಿ.ಸೋಮಶೇಖರ್
19)ಕೊಪ್ಪಳ- ಬಿ.ಸಿ.ಪಾಟೀಲ್
20)ಚಿಕ್ಕಬಳ್ಳಾಪುರ- ಡಾ. ಕೆ.ಸುಧಾಕರ್
21)ಮಂಡ್ಯ- ಕೆ.ಸಿ.ನಾರಾಯಣಗೌಡ
22) ಉತ್ತರ ಕನ್ನಡ- ಅರಬೈಲ್ ಶಿವರಾಂ ಹೆಬ್ಬಾರ್
23) ಬೆಳಗಾವಿ- ರಮೇಶ್ ಜಾರಕಿಹೊಳಿ
24) ಹಾಸನ- ಕೆ.ಗೋಪಾಲಯ್ಯ
25) ಕಲಬುರುಗಿ- ಉಮೇಶ ಕತ್ತಿ
26) ಚಿಕ್ಕಮಗಳೂರು- ಅರವಿಂದ ಲಿಂಬಾವಳಿ
27) ಕೋಲಾರ-ಸಿ.ಪಿ.ಯೋಗೇಶ್ವರ್
28) ಉಡುಪಿ- ಎಸ್.ಅಂಗಾರ
29) ಯಾದಗಿರಿ- ಮುರುಗೇಶ್ ರುದ್ರಪ್ಪ ನಿರಾಣಿ
ಓದಿ:ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ; ಅಧ್ಯಕ್ಷರಾಗಿ ಸಾಹಿತಿ ಡಾ.ದೊಡ್ಡರಂಗೇಗೌಡ ಆಯ್ಕೆ
ನೂತನ ಸಚಿವರಾದ ಉಮೇಶ್ ಕತ್ತಿಗೆ ಕಲಬುರುಗಿ, ಎಸ್.ಅಂಗಾರ - ಉಡುಪಿ, ಚನ್ನಪ್ಪಗೌಡ ಪಾಟೀಲ್- ಗದಗ, ಅರವಿಂದ ಲಿಂಬಾವಳಿ- ಚಿಕ್ಕಮಗಳೂರು, ಮುರುಗೇಶ್ ನಿರಾಣಿ- ಯಾದಗಿರಿ, ಸಿ.ಪಿ.ಯೋಗೇಶ್ವರ್- ಕೋಲಾರದ ಧ್ವಜಾರೋಹಣಕ್ಕೆ ನೇಮಿಸಲಾಗಿದ್ದು, ಇವರಿಗೆ ಇದೇ ಜಿಲ್ಲೆಗಳ ಉಸ್ತುವಾರಿಯನ್ನೂ ಕೊಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.