ಬೆಂಗಳೂರು: ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಲಾಗಿದೆ.
ಒಂಬತ್ತು ಜಂಟಿ ಸಮಿತಿ ಹಾಗೂ ಆರು ವಿಧಾನಸಭೆಯ ಸಮಿತಿಗಳು ಸೇರಿ ಒಟ್ಟು 15 ವಿಧಾನಮಂಡಲ ಸಮಿತಿಗಳನ್ನು ರಚಿಸಲಾಗಿದ್ದು, ಇಂದಿನಿಂದ ಜಾರಿಗೆ ಬರುವಂತೆ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ.
ಯಾವ ಸಮಿತಿಗೆ ಯಾರು ಅಧ್ಯಕ್ಷರು?:
ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ: ಅಧ್ಯಕ್ಷ ಹೆಚ್ ಕೆ ಪಾಟೀಲ್
ಸಾರ್ವಜನಿಕ ಉದ್ದಿಮೆಗಳ ಸಮಿತಿ: ಅಧ್ಯಕ್ಷ ಅರವಿಂದ ಲಿಂಬಾವಳಿ
ಅನುಸೂಚಿತ ಜಾತಿ ಹಾಗೂ ಪಂಗಡಗಳ ಕಲ್ಯಾಣ ಸಮಿತಿ: ಅಧ್ಯಕ್ಷ ಎಸ್.ಅಂಗಾರ
ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ: ಅಧ್ಯಕ್ಷ ಎಸ್.ಕುಮಾರ್ ಬಂಗಾರಪ್ಪ
ಅಧೀನ ಶಾಸನ ರಚನಾ ಸಮಿತಿ: ಅಧ್ಯಕ್ಷ ಎಸ್ ಎ ರಾಮದಾಸ್
ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ: ಅಧ್ಯಕ್ಷ ಸಾ ರಾ ಮಹೇಶ್
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ: ಅಧ್ಯಕ್ಷೆ ಕೆ.ಪೂರ್ಣಿಮಾ
ಗ್ರಂಥಾಲಯ ಸಮಿತಿ: ಅಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ
ಸ್ಥಳೀಯ ಸಂಸ್ಥೆಗಳ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ: ಅಧ್ಯಕ್ಷ ಅರಗ ಜ್ಞಾನೇಂದ್ರ
ಅಂದಾಜುಗಳ ಸಮಿತಿ: ಅಧ್ಯಕ್ಷ ಸಿ ಎಂ ಉದಾಸಿ
ಸರ್ಕಾರಿ ಭರವಸೆಗಳ ಸಮಿತಿ: ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್
ಹಕ್ಕು ಬಾಧ್ಯತೆಗಳ ಸಮಿತಿ: ಅಧ್ಯಕ್ಷ ಎಸ್ ಎ ರವೀಂದ್ರನಾಥ್
ಖಾಸಗಿ ಸದಸ್ಯರುಗಳ ವಿಧೇಯಕ ಹಾಗೂ ನಿರ್ಣಯಗಳ ಸಮಿತಿ: ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿ
ಅರ್ಜಿಗಳ ಸಮಿತಿ: ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿ
ವಸತಿ ಸೌಕರ್ಯ ಸಮಿತಿ: ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿ