ETV Bharat / state

ಅನಧಿಕೃತ ಬಾರ್ ಆ್ಯಂಡ್ ರೆಸ್ಟೋರೆಂಟ್ ಪರಿಶೀಲಿಸಲು ಅಧಿಕಾರಿಗಳ ನೇಮಿಸಿ: ಹೈಕೋರ್ಟ್ - ವೇಳೆ ಪ್ರಕರಣದ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಜೆ.ಪಿ.ನಗರದ ಕೆಎಎಸ್ ಅಧಿಕಾರಿಗಳ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದೆ ಎನ್ನಲಾದ ಬಾರ್ ಮತ್ತು ರೆಸ್ಟೋರೆಂಟ್ ಕಟ್ಟಡ ಪರಿಶೀಲಿಸಲು ಹಿರಿಯ ಅಧಿಕಾರಿಯನ್ನು ನಿಯೋಜಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶಿಸಿದೆ.

kn_bng_05_bar_PIL_7208962
ಅನಧಿಕೃತ ಬಾರ್ ಅಂಡ್ ರೆಸ್ಟೋರೆಂಟ್ ಪರಿಶೀಲಿಸಲು ಅಧಿಕಾರಿಗಳ ನೇಮಿಸಿ:ಹೈಕೋರ್ಟ್
author img

By

Published : Mar 12, 2020, 11:47 PM IST

ಬೆಂಗಳೂರು: ಜೆ.ಪಿ. ನಗರದ ಕೆಎಎಸ್ ಅಧಿಕಾರಿಗಳ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದೆ ಎನ್ನಲಾದ ಬಾರ್ ಮತ್ತು ರೆಸ್ಟೋರೆಂಟ್ ಕಟ್ಟಡ ಪರಿಶೀಲಿಸಲು ಹಿರಿಯ ಅಧಿಕಾರಿಯನ್ನು ನಿಯೋಜಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತು ಜೆ.ಪಿ.ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ವಿವಾದಿತ ಕಟ್ಟಡವಿರುವ ಜಾಗ ಪರಿಶೀಲಿಸಿ ವಾಸ್ತವಾಂಶ ತಿಳಿಯಲು ಹಿರಿಯ ಅಧಿಕಾರಿಯನ್ನು ನೇಮಿಸಬೇಕು. ಆ ಅಧಿಕಾರಿ ಸ್ಥಳ ಪರಿಶೀಲಿಸಿ, ಒಂದೊಮ್ಮೆ ಕಟ್ಟಡದ ಮಾಲೀಕರು ಸ್ವಾಧೀನಾನುಭವ ಪತ್ರವನ್ನು ಪಡೆಯದಿದ್ದರೆ ಹಾಗೂ ನಕ್ಷೆ ಮಂಜೂರಾತಿಯನ್ನು ಉಲ್ಲಂಘಿಸಿದ್ದರೆ ಕಟ್ಟಡದ ತೆರವಿಗೆ ಕೆಎಂಸಿ ಕಾಯ್ದೆ 321ರ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ನಿರ್ದೇಶಿಸಿತು.

ಇದೇ ವೇಳೆ ಪ್ರಕರಣದ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಆರೋಪ: ಜೆ.ಪಿ. ನಗರದ ಕೆಎಎಸ್ ಅಧಿಕಾರಿಗಳ ಬಡಾವಣೆಯಲ್ಲಿ ಸುಬ್ಬಲಕ್ಷ್ಮಿ ಎಂಬುವವರು ವಾಣಿಜ್ಯ ಕಟ್ಟಡ ನಿರ್ಮಿಸಿದ್ದಾರೆ. ಆದರೆ ನಿಯಮಾನುಸಾರ ಕಟ್ಟಡಕ್ಕೆ ಬಿಬಿಎಂಪಿಯಿಂದ ಸ್ವಾಧೀನಾನುಭವ ಪತ್ರವನ್ನೇ ಪಡೆದಿಲ್ಲ. ಇನ್ನೂ ಕಾಮಗಾರಿ ಪೂರ್ಣವಾಗುವ ಮುನ್ನವೇ ಸುನಿಲ್ ಎಂಬುವವರಿಗೆ ಬಾರ್ ಮತ್ತು ರೆಸ್ಟೋರೆಂಟ್ ನಡೆಸಲು ಕಟ್ಟಡ ನೀಡಲಾಗಿದೆ. ಕಟ್ಟಡದಲ್ಲಿ ಮದ್ಯದಂಗಡಿ ನಡೆಸಲು ಅಬಕಾರಿ ಆಯುಕ್ತರು ಪರವಾನಗಿ ನೀಡಿದ್ದಾರೆ. ಅರ್ಜಿದಾರರು, ವಸತಿ ಪ್ರದೇಶದಲ್ಲಿ ನಕ್ಷೆ ಮಂಜೂರಾತಿ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಲು ಬಿಬಿಎಂಪಿ ಆಯುಕ್ತರಿಗೆ ನಿರ್ದೇಶಿಸಬೇಕು. ಮದ್ಯ ಮಾರಾಟ ಪರವಾನಗಿ ಹಿಂಪಡೆಯಲು ಅಬಕಾರಿ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.