ETV Bharat / state

ಲಾಕ್​ಡೌನ್​ ಅವಧಿಯಲ್ಲಿ ಆಸ್ತಿ ತೆರಿಗೆ ಪ್ರಶ್ನಿಸಿ ಅರ್ಜಿ : ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ - GT Cinemas Pvt. Limited

ಸರ್ಕಾರದ ಸೂಚನೆಯಂತೆ ಮಾಲ್ ಹಾಗೂ ಇತರೆ ವಾಣಿಜ್ಯ ಕಟ್ಟಡಗಳನ್ನು ಲಾಕ್​ಡೌನ್​ ಅವಧಿಯಲ್ಲಿ ಕಡ್ಡಾಯವಾಗಿ ಮುಚ್ಚಲಾಗಿದೆ. ಸರ್ಕಾರದ ಆದೇಶದಂತೆ ಬೆಂಗಳೂರಿನ ಮಾಲ್​ಗಳನ್ನು 2019-20ರ ಆರ್ಥಿಕ ವರ್ಷದಲ್ಲಿ 18 ದಿನ, 2020-2021ರಲ್ಲಿ 69 ದಿನ ಹಾಗೂ 2021-22ನೇ ಆರ್ಥಿಕ ವರ್ಷದಲ್ಲಿ ಒಟ್ಟು 102 ದಿನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ..

high-court
ಹೈಕೋರ್ಟ್
author img

By

Published : Aug 3, 2021, 9:50 PM IST

ಬೆಂಗಳೂರು : ಲೌಕ್​ಡೌನ್​ ಅವಧಿಯಲ್ಲಿ ಮಾಲ್​ಗಳನ್ನು ಮುಚ್ಚಿಸಿದ ನಂತರವೂ ತೆರಿಗೆ ಹೆಚ್ಚಿಸಲು ಮುಂದಾಗಿರುವ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕ್ರಮ ಪ್ರಶ್ನಿಸಿ ನಗರದ ಮಾಲ್‌ವೊಂದರ ಮಾಲೀಕರು ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಬೆಂಗಳೂರಿನ ಜಿ ಟಿ ಸಿನಿಮಾಸ್ ಪ್ರೈ. ಲಿ. ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾ, ಎಂ. ನಾಗಪ್ರಸನ್ನ ಅವರಿದ್ದ ಪೀಠ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಿದೆ. ಇದೇ ವೇಳೆ ಪಾಲಿಕೆ ಆಸ್ತಿ ತೆರಿಗೆ ವಸೂಲಿ ಮಾಡಲು ಬಲವಂತದ ಕ್ರಮಕ್ಕೆ ಮುಂದಾದಲ್ಲಿ ನ್ಯಾಯಾಲಯದ ಮೊರೆ ಹೋಗಲು ಅರ್ಜಿದಾರರಿಗೆ ಅನುಮತಿ ನೀಡಿದೆ.

ಅರ್ಜಿದಾರರ ಕೋರಿಕೆ : ಸರ್ಕಾರದ ಸೂಚನೆಯಂತೆ ಮಾಲ್ ಹಾಗೂ ಇತರೆ ವಾಣಿಜ್ಯ ಕಟ್ಟಡಗಳನ್ನು ಲಾಕ್​ಡೌನ್​ ಅವಧಿಯಲ್ಲಿ ಕಡ್ಡಾಯವಾಗಿ ಮುಚ್ಚಲಾಗಿದೆ. ಸರ್ಕಾರದ ಆದೇಶದಂತೆ ಬೆಂಗಳೂರಿನ ಮಾಲ್​ಗಳನ್ನು 2019-20ರ ಆರ್ಥಿಕ ವರ್ಷದಲ್ಲಿ 18 ದಿನ, 2020-2021ರಲ್ಲಿ 69 ದಿನ ಹಾಗೂ 2021-22ನೇ ಆರ್ಥಿಕ ವರ್ಷದಲ್ಲಿ ಒಟ್ಟು 102 ದಿನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಇದರಿಂದಾಗಿ ಮಾಲ್​ಗಳ ಕಾರ್ಯಚಟುವಟಿಕೆ ಸ್ಥಗಿತಗೊಂಡಿದ್ದು, ಆದಾಯವೇ ನಿಂತಿದೆ. ಹೀಗಿದ್ದೂ ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಿಸಲು, ವಸೂಲಿ ಮಾಡಲು ಮುಂದಾಗಿರುವ ಕ್ರಮ ಸರಿಯಲ್ಲ. ಹೀಗಾಗಿ, ಆಸ್ತಿ ತೆರಿಗೆಯನ್ನು ಹೆಚ್ಚಿಸದಂತೆ ಹಾಗೂ ಲಾಕ್​ಡೌನ್​ ಅವಧಿಗೆ ಅನ್ವಯಿಸುವಂತೆ ತೆರಿಗೆ ವಿನಾಯ್ತಿ ನೀಡುವಂತೆ ಸರ್ಕಾರ ಹಾಗೂ ಪಾಲಿಕೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಓದಿ: ಅಮಿತ್ ಶಾ ಭೇಟಿಯಾದ ಶರದ್ ಪವಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.