ಬೆಂಗಳೂರು: ಲ್ಯಾಪ್ಟಾಪ್ ಬಾಡಿಗೆ ಪಡೆದು ವಾಪಸ್ ನೀಡದೆ ವಂಚಿಸುತ್ತಿದ್ದ ಚೋರನನ್ನು ವಿ.ವಿ.ಪುರಂ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಮೂಲದ ಮುನಿ ಲೊಕೇಶ್ ಬಂಧಿತ ಆರೋಪಿ. ಪದವಿ ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು ವಂಚನೆಯನ್ನೇ ಕಸುಬು ಮಾಡಿಕೊಂಡಿದ್ದ ಈತ, ಆನ್‌ಲೈನ್ ಮೂಲಕ ಲ್ಯಾಪ್ಟಾಪ್ ಬಾಡಿಗೆಗೆ ನೀಡುವ ಕಂಪನಿಯನ್ನು ಸಂಪರ್ಕಿಸಿ ಆ್ಯಪಲ್ ಲ್ಯಾಪ್ಟಾಪ್ಗಳನ್ನು ಬಾಡಿಗೆ ಪಡೆಯುತ್ತಿದ್ದ. ಎರಡು-ಮೂರು ತಿಂಗಳು ಬಾಡಿಗೆ ಕಟ್ಟಿ ನಂತರ ಮಾರಾಟ ಮಾಡುತ್ತಿದ್ದನಂತೆ.
![Renting and selling: Apple laptops siezed worth 30 lakhs](https://etvbharatimages.akamaized.net/etvbharat/prod-images/kn-bng-01-laptop-rented-selling-illigally-22lakhs-worth-30apple-laptops-seized-1person-arrested-vvpuram-police-ka10032_18032021163027_1803f_1616065227_65.jpg)
ಸದ್ಯ ಆರೋಪಿಯಿಂದ ಮಾರಾಟವಾಗಿದ್ದ 30 ಲಕ್ಷ ರೂ. ಬೆಲೆ ಬಾಳುವ 22 ಆ್ಯಪಲ್ ಲ್ಯಾಪ್ಟಾಪ್ಗಳನ್ನು ವಶಕ್ಕೆ ಪಡೆಯಲಾಗಿದೆ. ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಎಲ್ಲಾ ಟೋಲ್ ಬೂತ್ ರದ್ದುಪಡಿಸಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ: ಗಡ್ಕರಿ