ಬೆಂಗಳೂರು: ಬೆಂಗಳೂರಿನ ಅಪಾರ್ಟ್ಮೆಂಟ್ಗಳಲ್ಲಿ ಸೋಂಕಿನ ಪ್ರಕರಣಗಳು ತಗ್ಗುವಂತೆ ಕಾಣುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಅಪಾರ್ಟ್ಮೆಂಟ್ಗಳೇ ಕೊರೊನಾ ಹಾಟ್ಸ್ಪಾಟ್ ಆಗಿ ಬದಲಾಗುತ್ತಿವೆ. ಇಂತಹ ಪ್ರಕರಣಗಳು ಮೂರನೇ ಅಲೆಗೆ ದಾರಿ ಮಾಡಿಕೊಡುವ ಭೀತಿ ಇರುವ ಕಾರಣಕ್ಕೆ ಜೀನೋಮ್ ಸೀಕ್ವೆನ್ಸಿಂಗ್ ಸ್ಯಾಂಪಲ್ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಮುಂದಾಗುತ್ತಿದ್ದಾರೆ. ಆದರೆ ಇದಕ್ಕೆ ಅಪಾರ್ಟ್ಮೆಂಟ್ ನಿವಾಸಿಗಳು ಸಹಕರಿಸದೇ ಕಿರಿಕ್ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಗರದ ಬಿಟಿಎಂ ಲೇಔಟ್ನ ಗೋದಾವರಿ ರೆಸಿಡೆನ್ಸಿಯಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ, ಅಪಾರ್ಟ್ಮೆಂಟ್ ಫ್ಲಾಟ್ ನಂಬರ್ 402 ಸೀಲ್ಡೌನ್ ಅಧಿಕಾರಿಗಳು ಮಾಡಿದ್ದಾರೆ. ಆದರೆ ಜೀನೋಮ್ ಸೀಕ್ವೆನ್ಸಿಂಗ್ ಸ್ಯಾಂಪಲ್ ಕೆಲೆಕ್ಟ್ ಮಾಡಲು ಹೋದರೆ ಕಿರಿಕ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕ್ಲಸ್ಟರ್ ಪ್ರಕರಣದಲ್ಲಿ ಹೊಸ ರೂಪಾಂತರಿ ಇರಬಹುದು ಎನ್ನುವ ಕಾರಣಕ್ಕೆ ಮತ್ತೆ ಸ್ಯಾಂಪಲ್ ತೆಗೆದು ಜೀನೋಮ್ ಸೀಕ್ವೆನ್ಸಿಂಗ್ಗೆ ಕಳಿಸಬೇಕು. ಇದು ಕಡ್ಡಾಯವಾಗಿ ಆರೋಗ್ಯ ಸಿಬ್ಬಂದಿ ಮಾಡಲೇಬೇಕು. ಆದರೆ ಒಮ್ಮೆ ಟೆಸ್ಟ್ ಆಗಿದೆ ಮತ್ತೆ ಸ್ಯಾಂಪಲ್ ಕೊಡಲ್ಲ ಎಂದು ಸೋಂಕಿತರು ಕಿರಿಕ್ ಮಾಡುತ್ತಿದ್ದಾರಂತೆ.
ಒಟ್ಟಿನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದ್ದರೆ, ಇತ್ತ ಸಹಕಾರ ಕೊಡಬೇಕಾದ ಜನರೇ ಅಸಹಕಾರ ತೋರಿಸುತ್ತಿರುವುದು ವಿಪರ್ಯಾಸ.