ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರಾವಾಹಿಯಲ್ಲಿ ವಿಲನ್ ದೀಪಿಕಾಳಾಗಿ ನಟಿಸಿ ಸೈ ಎನಿಸಿಕೊಂಡ ಅನುಷಾ ಹೆಗ್ಡೆ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ತೆಲುಗು ನಟ ಪ್ರತಾಪ್ ಸಿಂಗ್ ಶಾ ಅವರೊಂದಿಗೆ ಕಳೆದ ವರ್ಷ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ಚೆಂದುಳ್ಳಿ ಚೆಲುವೆ ದೀಪಿಕಾ,ನಿನ್ನೆ ಹೈದರಬಾದ್ನಲ್ಲಿ ಹಸೆಮಣೆ ಏರಿದ್ದಾರೆ. ರಾಧಾ ರಮಣ ಧಾರಾವಾಹಿಯ ದೀಪಿಕಾ ಆಗಿ ನಟಿಸುತ್ತಿರುವ ಸಮಯದಲ್ಲಿ ನಿನ್ನೆ ಪೆಳ್ಳದಾಡ ಎಂಬ ತೆಲುಗು ಧಾರಾವಾಹಿಯಲ್ಲಿ ನಟಿಸುವ ಅವಕಾಶ ಅನುಷಾ ಹೆಗ್ಡೆಗೆ ದೊರೆಯಿತು. ಅದರಲ್ಲಿ ನಾಯಕನಾಗಿ ನಟಿಸಿದ್ದ ಪ್ರತಾಪ್ ಸಿಂಗ್ ಅವರಿಗೆ ಜೋಡಿಯಾಗಿ ಅನುಷಾ ಹೆಗ್ಡೆ ಕಾಣಿಸಿಕೊಂಡಿದ್ದರು.

ನಿನ್ನೆ ಪೆಳ್ಳದಾಟದಲ್ಲಿ ಇವರ ಮುದ್ದಾದ ಜೋಡಿಯನ್ನು ನೋಡಿದ ಅನೇಕರು, ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ. ಮದುವೆ ಆಗಬಹುದು ಎಂದು ಹೇಳುತ್ತಿದ್ದರು. ಇದನ್ನು ಅವರಿಬ್ಬರೂ ಗಂಭೀರವಾಗಿ ಪರಿಗಣಿಸಲಿಲ್ಲ. ಬಳಿಕ ಪ್ರತಾಪ್ ಹಾಗೂ ಅವರ ಮನೆಯವರು, ದೀಪಿಕಾ ಬಳಿ ಮದುವೆ ಪ್ರಸ್ತಾಪವಿಟ್ಟಿದ್ದರು. ನಂತರ ಮನೆಯವರ ಒಪ್ಪಿಗೆ ಪಡೆದ ಈ ಜೋಡಿ,ಮದುವೆಯಾಗುವ ನಿರ್ಧಾರ ಕೈಗೊಂಡಿದ್ದರು.

ಅದರಂತೆ ನಿನ್ನೆ ಹೈದರಾಬಾದ್ನಲ್ಲಿ ಅನುಷಾ ಹೆಗ್ಡೆ ಮತ್ತು ಪ್ರತಾಪ್ ಸಿಂಗ್ ವಿವಾಹ ಸಮಾರಂಭ ನೆರವೇರಿದೆ.