ಬೆಂಗಳೂರು : ನಗರದಲ್ಲಿ ರ್ಯಾಂಡಮ್ ಟೆಸ್ಟ್ ಆರಂಭಿಸಲು ಪ್ರತಿ ಫೀವರ್ ಕ್ಲಿನಿಕ್ನಲ್ಲಿ ಆ್ಯಂಟಿಜೆನ್ ಕಿಟ್ ಬಳಸಲು ನಿರ್ಧರಿಸಲಾಗಿದೆ. ಆರೋಗ್ಯ ಇಲಾಖೆ ಕೊಡುವ ಆ್ಯಂಟಿಜೆನ್ ಕಿಟ್ ಬಳಸಿ, ತ್ವರಿತವಾಗಿ ಅಂದರೆ ಇಪ್ಪತ್ತು ನಿಮಿಷದಲ್ಲಿ ಫಲಿತಾಂಶ ಬರಲಿದೆ.
ರಕ್ತದ ಸ್ಯಾಂಪಲ್ ತೆಗೆದು ಟೆಸ್ಟ್ ಮಾಡಲಾಗುತ್ತದೆ. ಕಿಟ್ನಲ್ಲೇ ರಕ್ತದ ಸ್ಯಾಂಪಲ್ ಜತೆ ಬಳಸಲು ಲಿಕ್ವಿಡ್ ಇರುತ್ತದೆ. ಇದನ್ನ ಬಳಸಿ ಕೊರೊನಾ ಟೆಸ್ಟ್ ಮಾಡಿ, 20 ನಿಮಿಷದಲ್ಲಿ ರಿಸಲ್ಟ್ ಬರಲಿದೆ. ಪ್ರತಿ ಫೀವರ್ ಕ್ಲಿನಿಕ್ಗೆ 300 ಕಿಟ್ಗಳ ವಿತರಣೆ ಮಾಡಲಾಗಿತ್ತದೆ. ಇಂದು ಸಂಜೆಯೊಳಗೆ ಕಿಟ್ ವಿತರಣೆ ಪೂರ್ಣವಾದ್ರೆ ನಾಳೆಯೇ ಟೆಸ್ಟ್ ಆರಂಭ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದರಲ್ಲಿ ತಕ್ಷಣವೇ ಕೋವಿಡ್ ಪಾಸಿಟಿವ್ ಇದ್ರೆ ತಿಳಿಯುವುದರಿಂದ ಇತರರಿಗೆ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಬಹುದು. ಮಾರುಕಟ್ಟೆ, ವ್ಯಾಪಾರಿಗಳು, ಹೋಟೆಲ್ ವೇಟರ್ಸ್ಗಳಿಗೆ ಮೊದಲ ಭಾಗದಲ್ಲಿ ಟೆಸ್ಟ್ ಮಾಡಲಿದ್ದಾರೆ.
ಆ್ಯಂಟಿಜೆನ್ ಕಿಟ್ನಲ್ಲಿ ಕೊರೊನಾ ನೆಗೆಟಿವ್ ಬಂದರೆ, ಅದು ಸಂಪೂರ್ಣವಾಗಿ ಆ ರಿಸಲ್ಟ್ ಪರಿಗಣಿಸಲು ಸಾಧ್ಯವಿಲ್ಲ. ಕೊರೊನಾ ವೈರಸ್ ಕಡಿಮೆ ಪ್ರಮಾಣದಲ್ಲಿ ಇದ್ದರೆ, ರಿಸಲ್ಟ್ನಲ್ಲಿ ತೋರಿಸದಿರುವ ಸಾಧ್ಯತೆಯೂ ಇದೆ. ಪಾಸಿಟಿವ್ ಬಂದ್ರೆ ಮಾತ್ರ ತ್ವರಿತ ಚಿಕಿತ್ಸೆ ನೀಡಲು ಸಹಕಾರಿಯಾಗಲಿವೆ. ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನೂ ಗಣಮುಖಪಡಿಸಲು ಸಾಧ್ಯವಿದೆ.