ETV Bharat / state

ರಾಗಿಣಿ ಆಪ್ತ ಎನ್ನಲಾದ ಮತ್ತೋರ್ವ ಡ್ರಗ್ಸ್​​ ಪೆಡ್ಲರ್​ ಸಿಸಿಬಿ ಬಲೆಗೆ

ಈತ 2018ರ ಡ್ರಗ್ಸ್​​ ಕೇಸ್​​​ನಲ್ಲಿ ಬಾಣಸವಾಡಿ ಪೊಲೀಸರಿಂದ ಬಂಧಿತನಾಗಿದ್ದ. ಈತ ನಟಿ ರಾಗಿಣಿ ಆಪ್ತ ಕೂಡ ಆಗಿದ್ದಾನೆ. ಸದ್ಯ ಈತನಿಗೂ ಡ್ರಗ್ಸ್​ ಪೆಡ್ಲಿಂಗ್​ ಕೇಸ್​​​​ನಲ್ಲಿ ಸಂಬಂಧವಿರುವ ಸಾಧ್ಯತೆ ಇದ್ದು, ಸಿಸಿಬಿ ತನಿಖೆ ಆರಂಭಿಸಿದೆ.

author img

By

Published : Sep 11, 2020, 12:28 PM IST

Updated : Sep 11, 2020, 12:40 PM IST

another-peddler-named-pateek-shetty-was-arrested-by-ccb
ರಾಗಿಣಿ ಆಪ್ತ ಎನ್ನಲಾದ ಮತ್ತೋರ್ವ ಡ್ರಗ್ಸ್​​ ಪೆಡ್ಲರ್​ ಸಿಸಿಬಿ ಬಲೆಗೆ

ಬೆಂಗಳೂರು: ಸ್ಯಾಂಡಲ್​​​ವುಡ್ ಡ್ರಗ್ಸ್​​ ಜಾಲ​​​ ಆರೋಪ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ‌. ಪ್ರತೀಕ್ ಶೆಟ್ಟಿ ಬಂಧಿತ ಆರೋಪಿಯಾಗಿದ್ದು, ಈತ ಸ್ಯಾಂಡಲ್​​​​​ವುಡ್ ಡ್ರಗ್ಸ್​​​ ಮಾಫಿಯಾ ಆರೋಪ ಪ್ರಕರಣದಲ್ಲಿ ಡ್ರಗ್ಸ್​​ ಪೆಡ್ಲರ್ ಆಗಿದ್ದ. ಹೀಗಾಗಿ ಸದ್ಯ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಈತ 2018ರ ಡ್ರಗ್ಸ್​​ ಕೇಸ್​​​ನಲ್ಲಿ ಬಾಣಸವಾಡಿ ಪೊಲೀಸರಿಂದ ಬಂಧಿತನಾಗಿದ್ದ. ಈತ ನಟಿ ರಾಗಿಣಿ ಆಪ್ತ ಕೂಡ ಆಗಿದ್ದಾನೆ ಎನ್ನಲಾಗಿದೆ. 2018ರಲ್ಲಿ ಬಂಧನವಾದಾಗ ಬಾಣಸವಾಡಿ ಪೊಲೀಸರು ನೈಜಿರಿಯಾ ಪ್ರಜೆಗಳು ಹಾಗೂ ನಟಿ ಆಪ್ತ ರವಿಶಂಕರನನ್ನೂ ಬಂಧಿಸಿದ್ದರು. ಈ ವೇಳೆ ರಾಗಿಣಿ ಹೆಸರು ಕೇಳಿ ಬಂದಿತ್ತಾದರೂ ಕೂಡ ಸರಿಯಾದ ಸಾಕ್ಷ್ಯಗಳು ಲಭ್ಯವಾಗಿರಲಿಲ್ಲ‌.

ಸದ್ಯ ಸ್ಯಾಂಡಲ್​​​​ವುಡ್ ಡ್ರಗ್ಸ್​​ ಲಿಂಕ್ ಆರೋಪ ಸಂಬಂಧ ಬಾಣಸವಾಡಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ರಾಗಿಣಿ ಹೇಳಿಕೆ ಪಡೆದಿದ್ದರೂ ಕೂಡ ಸರಿಯಾದ ಉತ್ತರ ನೀಡುತ್ತಿರಲಿಲ್ಲ. ಸದ್ಯ ರಾಗಿಣಿ ಆಪ್ತ ಪ್ರತೀಕ್ ಶೆಟ್ಟಿಯನ್ನು ಬಂಧಿಸಿದ್ದು, ಪ್ರತೀಕ್ ಶೆಟ್ಟಿಯಿಂದಾಗಿ ರಾಗಿಣಿಗೆ ಮತ್ತಷ್ಟು ಕಂಟಕವಾಗುವ ಸಾಧ್ಯತೆ ಇದೆ.

Last Updated : Sep 11, 2020, 12:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.