ಬೆಂಗಳೂರು: ಕುಖ್ಯಾತ ರೌಡಿಶೀಟರ್ ಲಕ್ಷ್ಮಣ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಅಧಿಕಾರಿಗಳೇನೋ ತನಿಖೆ ನಡೆಸ್ತಿದ್ದಾರೆ. ಆದ್ರೆ, ಲಕ್ಷ್ಮಣ ಹತ್ಯೆ ಮಾಡಿದವರು ಸಾಮಾನ್ಯದವರಲ್ಲ. ಇದರ ಹಿಂದೆ ದೊಡ್ಡ ಲಿಂಕ್ ಇದೆ ಎಂದು ಶಂಕಿಸಿ ಮುಂಜಾನೆಯೇ ನಗರದ ರೌಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ರೌಡಿಶೀಟರ್ ಲಕ್ಷ್ಮಣ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳೊದ್ರ ಜೊತೆಗೆ ಸಿಸಿಬಿ ಅಧಿಕಾರಿಗಳಿಗೂ ಹತ್ಯೆ ಕೇಸ್ ಚಾಲೆಂಜಿಂಗ್ ಆಗಿದೆ. ಸದ್ಯ ನಗರದ ಎಲ್ಲಾ ಪ್ರಮುಖ ರೌಡಿಗಳಿಗೆ ಬಿಸಿ ಮುಟ್ಟಿಸಿದ್ದು, ಪ್ರಕರಣವನ್ನು ಬೇಧಿಸಲು ತೀವ್ರ ತನಿಖೆಗೆ ಮುಂದಾಗಿದ್ದಾರೆ.
ಬೆಳ್ಳಂ ಬೆಳಗ್ಗೆ ನಗರದ ಕುಖ್ಯಾತ ರೌಡಿಗಳಾದ ಮಂಜುನಾಥ್ ಅಲಿಯಾಸ್ ಅಪ್ಪಿ,ದಾಬುರ್ ಮೂರ್ತಿ ಆ್ಯಪಲ್ ಸಂತು, ಡಬಲ್ ಮೀಟರ್ ಮೋಹನ, ರೂಪೇಶ್, ಹೇಮಿ, ವಿಲ್ಸನ್ ಗಾರ್ಡನ್ ನಾಗ ದೋಭಿ ಗಾಟ್ ನಾಗ. ಕೋತಿ ರಾಮ, ಕ್ಯಾಟ್ ರಾಜ ಈ ಎಲ್ಲಾ ರೌಡಿಗಳ ಮೇಲೆ ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕೂಡಲೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಅಲ್ಲದೆ, ಮುಂಬರವ ಲೋಕಸಭಾ ಚುನಾವಣೆಗೆ ಯಾವುದೇ ಅಶಿಸ್ತು ಎದ್ದು ಕಂಡ್ರೆ ಒದ್ದು ಒಳಗೆ ಹಾಕ್ತೀವಿ ಅನ್ನೋ ಎಚ್ಚರಿಕೆಯನ್ನೂ ಕೂಡ ನೀಡಿದ್ದಾರೆ. ಇನ್ನು ಕೋತಿರಾಮನನ್ನ ಬಂಧನ ಮಾಡಿದ್ದು ಮನೆಯಲ್ಲಿ 8 ಲಕ್ಷ ನಗದು ಡ್ಯಾಗರ್, ಮಚ್ಚುಗಳನ್ನ ವಶಪಡಿಸಿಕೊಂಡಿದ್ದಾರೆ.