ETV Bharat / state

Watch..  ಬೆಂಗಳೂರಿನಲ್ಲಿ‌ ಮತ್ತೊಂದು ಅಪಘಾತ: ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಚಾಲಕಿ

ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಾಹ್ನ ಮತ್ತೊಂದು ಅಪಘಾತ ಸಂಭವಿಸಿದೆ. ಇದೇ ವೇಳೆ ಎರಡೂ ವಾಹನ ಚಾಲಕರ ನಡುವೆ ಪರಸ್ಪರ ವಾಗ್ವಾದ ನಡೆದು, ಓರ್ವನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಘಟನೆ ನಡೆದಿದೆ.

ಬಾನೆಟ್ ಮೇಲೆ ಹತ್ತಿದ ವ್ಯಕ್ತಿ
ಬಾನೆಟ್ ಮೇಲೆ ಹತ್ತಿದ ವ್ಯಕ್ತಿ
author img

By

Published : Jan 20, 2023, 3:40 PM IST

Updated : Jan 20, 2023, 7:23 PM IST

ಬಾನೆಟ್ ಮೇಲೆ ಹತ್ತಿದ ವ್ಯಕ್ತಿ

ಬೆಂಗಳೂರು: ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 25 ವರ್ಷದ ಯುವಕನೊಬ್ಬ ವೃದ್ಧನನ್ನು ಸ್ಕೂಟರ್ ಮೂಲಕ ಎಳೆದೊಯ್ದ ಅಮಾನವೀಯ ಘಟನೆ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಘಟನೆ ಶುಕ್ರವಾರ ಸಂಭವಿಸಿದೆ‌. ಎರಡು ಕಾರುಗಳ ನಡುವೆ ಸಣ್ಣ ಪ್ರಮಾಣದ ಅಪಘಾತವಾಗಿದ್ದು, ಅಪಘಾತದ ನಂತರ ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ.

ಟಾಟಾ ನೆಕ್ಸಾನ್ ಕಾರನ್ನು ಪ್ರಿಯಾಂಕಾ ಎಂಬ ಮಹಿಳೆ ಚಲಾಯಿಸುತ್ತಿದ್ದು, ಮಾರುತಿ ಸ್ವಿಫ್ಟ್ ಕಾರನ್ನು ದರ್ಶನ್ ಎಂಬುವರು ಚಲಾಯಿಸುತ್ತಿದ್ದರು. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ ಇಬ್ಬರ ಕಾರುಗಳ ನಡುವೆ ಸಣ್ಣ ಪ್ರಮಾಣದ ಅಪಘಾತ ಸಂಭವಿಸಿದೆ. ಇದನ್ನು ಪ್ರಶ್ನಿಸಲು ಬಂದ ದರ್ಶನ್ ಜೊತೆ ಚಾಲಕಿ ಪ್ರಿಯಾಂಕಾ ವಾಗ್ವಾದ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಕೋಪಗೊಂಡ ದರ್ಶನ್, ಪ್ರಿಯಾಂಕಾ ಅವರ ಕಾರನ್ನು ಹಿಂಬಾಲಿಸಿಕೊಂಡೇ ಹೋಗಿದ್ದಾರೆ‌.

ಈ ವೇಳೆ ಮಂಗಳೂರು ಪಿಯು ಕಾಲೇಜ್ ಬಳಿ ಆ ಮಹಿಳೆಯ ಕಾರನ್ನು ಅಡ್ಡಗಟ್ಟಿದ ದರ್ಶನ್​ ಮತ್ತೆ ಪ್ರಶ್ನೆ ಮಾಡಿದ್ದಾರೆ‌. ಇದಕ್ಕೆ ಕೋಪಗೊಂಡ ಪ್ರಿಯಾಂಕಾ, ಕಾರನ್ನು ಮುಂದೆ ಚಲಾಯಿಸಲು ಹೋಗುತ್ತಿದ್ದಂತೆ ದರ್ಶನ್ ಅವರ ಕಾರಿನ ಬಾನೆಟ್ ಮೇಲೆ ಹತ್ತಿದ್ದಾರೆ. ಈ ವೇಳೆ ಪ್ರಿಯಾಂಕಾ ಕಾರನ್ನು ಒಂದು ಕಿಲೋ ಮೀಟರ್​​​ವರೆಗೂ ಹಾಗೆಯೇ ಚಲಾಯಿಸಿಕೊಂಡು ಹೋಗಿದ್ದಾರೆ. ಈ ವೇಳೆ, ದರ್ಶನ್ ಕಡೆಯ ಹುಡುಗರು ಬಂದು ಕಾರ್ ಅನ್ನು ಅಡ್ಡಗಟ್ಟಿ ನಿಲ್ಲಿಸಿ ಕಾರಿನ ಗ್ಲಾಸುಗಳನ್ನು ಒಡೆದು ಹಾಕಿದ್ದಾರೆ. ಪ್ರಿಯಾಂಕಾ ಅವರ ಪತಿ ಪ್ರಮೋದ್ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಜ್ಞಾನ ಭಾರತಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುವ ಮಾತುಗಳನ್ನು ಹೇಳಿದ್ದಾರೆ.

ಪ್ರತ್ಯೇಕ ಪ್ರಕರಣ ದಾಖಲು: ಸಿನಿಮೀಯ ಶೈಲಿಯಲ್ಲಿ ನಡೆದ ಪ್ರಕರಣ ಸಂಬಂಧ ಕಾರಿನ ಚಾಲಕಿ ಹಾಗೂ ಚಾಲಕಿ ಮೇಲೆ ಹಲ್ಲೆ‌ ನಡೆಸಿದ ಆರೋಪದಡಿ ಸ್ವಿಫ್ಟ್ ಕಾರಿನ ಚಾಲಕ ಸೇರಿ ಐವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನೆ‌ ಸಂಬಂಧ ಜ್ಞಾನಭಾರತಿ‌ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.‌‌‌

ಮೊದಲ‌ ಪ್ರಕರಣದಲ್ಲಿ ಕಾರಿನ ಚಾಲಕಿ ಪ್ರಿಯಾಂಕಾ ಬಂಧಿಸಿದ್ದರೆ ಈಕೆಯ ಗಂಡ ಪ್ರಮೋದ್ ನೀಡಿದ ಪ್ರತಿ‌ದೂರಿನ ಮೇರೆಗೆ ಸ್ವಿಫ್ಟ್ ಕಾರಿನ ಚಾಲಕ ದರ್ಶನ್, ಸುಜನ್, ಯಶವಂತ್ ಹಾಗೂ ವಿನಯ್ ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ‌‌. ಘಟನೆಯಲ್ಲಿ ಪ್ರಿಯಾಂಕಾ ಕಾರು ಹಾನಿಗೊಳಗಾಗಿದೆ.

ಡಿಸಿಪಿ ಲಕ್ಷ್ಮಣ್ ನಿಂಬರಗಿ ಸ್ಪಷ್ಟನೆ: ''ಇಂದು ಬೆಳಗ್ಗೆ 10.30ರ ವೇಳೆ ಉಳ್ಳಾಲ ಈ ಬಳಿ ಘಟನೆ ನಡೆದಿದೆ. ಟಾಟಾ ನೆಕ್ಸಾನ್ ಹಾಗೂ ಸ್ವಿಫ್ಟ್ ಕಾರಿನಲ್ಲಿದ್ದ ಚಾಲಕರ ನಡುವೆ ಸಣ್ಣ ಗಲಾಟೆಯಾಗಿದೆ. ಸ್ವಿಫ್ಟ್ ಕಾರಿನಲ್ಲಿದ್ದವನು ಕೂಡ ಬೈದಿದ್ದಾನೆ‌. ಮಂಗಳೂರು ಕಾಲೇಜ್ ಬಳಿ ನೆಕ್ಸಾನ್ ಕಾರ್ ಅಡ್ಡಗಟ್ಟಿದ್ದಾರೆ. ಈ ವೇಳೆ ದರ್ಶನ್ ತನ್ನ ಸ್ನೇಹಿತರನ್ನ ಕರೆಸಿಕೊಂಡಿದ್ದಾನೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಈ ವೇಳೆ ಮಹಿಳೆ ಅಜಾಗರೂಕತೆಯಿಂದ ಚಾಲನೆ ಮಾಡಿದ್ದಾರೆ. ಹಲ್ಲೆ‌‌ ಸಂಬಂಧ ದರ್ಶನ್ ಸ್ನೇಹಿತರು ಭಾಗಿಯಾಗಿದ್ದಾರೆ.‌‌ ಒಟ್ಟಾರೆ ಕೊಲೆ‌ಯತ್ನ ಆರೋಪದಡಿ ಕಾರಿನ ಚಾಲಕಿ ಪ್ರಿಯಾಂಕಾ ಹಾಗೂ ಯುವತಿ ಮೇಲೆ ಹಲ್ಲೆ ನಡೆಸಿದ‌‌‌ ಆರೋಪ ಹಿನ್ನೆಲೆ ದರ್ಶನ್ ಹಾಗೂ ಆತನ ಸಹಚರನನ್ನ ಬಂಧಿಸಲಾಗಿದೆ'' ಎಂದು ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ.

nother accident in Bangalore
ಬಾನೆಟ್ ಮೇಲೆ ಹತ್ತಿದ ವ್ಯಕ್ತಿ

ದರ್ಶನ್ ಕೊಟ್ಟ ದೂರಿನಲ್ಲಿ ಏನಿದೆ? ''ನನ್ನ ಹೆಸರು ದರ್ಶನ್. ವಯಸ್ಸು 29. ನ್ಯಾಚುರಲ್ ಐಸ್ ಕ್ರೀಂ ಹಾಗೂ ಪೆಟ್ ಶಾಪ್ ಇಟ್ಟುಕೊಂಡಿರುವೆ. ಇಂದು ಬೆಳಗ್ಗೆ ಉಲ್ಲಾಳದಲ್ಲಿ ಬರುವಾಗ ರೆಡ್ ಸಿಗ್ನಲ್ ಇದ್ದರೂ ಕಾರು ಚಾಲನೆ‌ ಮಾಡುತ್ತಿದ್ದ ಪ್ರಿಯಾಂಕಾ ಅವರ ಕಾರನ್ನು ಅಡ್ಡ ನಿಲ್ಲಿಸಿದ್ದೆ. ರೆಡ್ ಸಿಗ್ನಲ್ ಇರೋದು ನಿಮಗೆ ಕಾಣಿಸ್ತಿಲ್ವಾ ಎಂದು ಪ್ರಶ್ನೆ ಮಾಡಿದ್ದೆ. ಈ ವೇಳೆ ಪ್ರಿಯಾಂಕಾ ದರ್ಪ ತೋರಿಸಿದ್ದರು. ಕೋಪಗೊಂಡು ನಾನು ಅವರ ಕಾರನ್ನು ಫಾಲೋ ಮಾಡಿ ಅಡ್ಡಗಟ್ಟಿ ಬೈದು ಕ್ಷಮೆ ಕೇಳುವಂತೆ ಹೇಳಿದೆ. ಈ ವೇಳೆ ನಾನ್ಯಾಕೆ ಸಾರಿ ಕೇಳ್ಬೇಕು ಎಂದು ಪ್ರಶ್ನಿಸಿದ್ದರು. ಇದರಿಂದ ಇಷ್ಟೆಲ್ಲ ನಡೆಯಿತು'' ಎಂದು ನಡೆದ ಘಟನಾವಳಿ ಬಗ್ಗೆ ದರ್ಶನ್ ತಮ್ಮ ದೂರು ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ಚಾಲಕಿ ಪತಿ‌ ನೀಡಿದ ದೂರಿನಲ್ಲಿದೆ? ''ವೈದ್ಯಕೀಯ ಪರೀಕ್ಷೆ ಮುಗಿಸಿಕೊಂಡು ಅಂಬೇಡ್ಕರ್ ಕಾಲೇಜು ಬಳಿ ಕಾರಿನಲ್ಲಿ‌ ನಾನು ಹಾಗೂ ನನ್ನ ಪತ್ನಿ ಪ್ರಿಯಾಂಕಾ ಕಾರಿನಲ್ಲಿ ಬರುತ್ತಿದ್ದೆವು. ಈ ವೇಳೆ ರಾಂಗ್ ಸೈಡ್​ನಲ್ಲಿ ಒಂದು ಕಾರು ಬಂದಿತು. 15 ಸೆಕೆಂಡು ಕಾದು ಮುಂದೆ ಹೋಗಬೇಕಾದಾಗ ಬಿಳಿ ಬಣ್ಣದ ಸ್ವಿಪ್ಟ್ ಕಾರಿನ ಚಾಲಕ ದರ್ಶನ್, ಬೈದ್ದಿದ್ದು ಕೇಳಿಸಿತು. ಪ್ರತಿಯಾಗಿ ನನ್ನ ಪತ್ನಿ ಕೂಡ ರೇಗಾಡಿದಳು. ಈ ವೇಳೆ ಕಾರಿನಲ್ಲಿದ್ದ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಉಲ್ಲಾಳ ಸರ್ಕಲ್ ಬಳಿ ಹಿಂಬಾಲಿಸಿಕೊಂಡು ಕಾರು ತಡೆದು ಕಾರಿನ ಗ್ಲಾಸ್ ಹೊಡೆದಿದ್ದಾರೆ'' ಎಂದು ಪ್ರಿಯಾಂಕಾ ಪತಿ ಪ್ರಮೋದ್ ಕೂಡ ನಡೆದ ಘಟನಾವಳಿ ಬಗ್ಗೆ ತಮ್ಮ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಪ್ರಿಯಾಂಕಾ ಪತಿ ಪ್ರಮೋದ್ ನೀಡಿರುವ ದೂರು ಹೀಗಿದೆ: ದರ್ಶನ್, ಸುಜನ್, ಯಶವಂತ್ ಹಾಗೂ ವಿನಯ್ ಆರೋಪಿಗಳೆಂದು ತಮ್ಮ ದೂರಿನಲ್ಲಿ ದಾಖಲಿಸಿದ್ದಾರೆ. ಅಲ್ಲದೇ ಇವರ ಮೇಲೆ 354B - ಮಹಿಳೆಯ ಮೇಲೆ ಹಲ್ಲೆ, 427 - ವಾಹನಕ್ಕೆ ಹಾನಿ, 506 - ಜೀವ ಬೆದರಿಕೆ, 341 - ಅಕ್ರಮವಾಗಿ ತಡೆಗಟ್ಟುವುದು, 504 - ಉದ್ದೇಶಪೂರ್ವಕವಾಗಿ ಅವಮಾನ, ಹಾಗೂ ಪ್ರಚೋದನೆ ನೀಡುವುದು, 143 - ಸಾರ್ವಜನಿಕ‌ ನೆಮ್ಮದಿಗೆ ಧಕ್ಕೆ, 149 - ಒಂದೇ ಉದ್ದೇಶದಿಂದ ಗುಂಪಿನಲ್ಲಿ ಬಂದು ಗಲಾಟೆ, 323 - ಉದ್ದೇಶಪೂರ್ವಕ ಹಲ್ಲೆ, 324 - ಆಯುಧದಿಂದ ಹಲ್ಲೆ, 354 - ಲೈಂಗಿಕ ದೌರ್ಜನ್ಯ ಪ್ರಕರಣಗಳಡಿ ದೂರು ನೀಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿ

ದರ್ಶನ್ ನೀಡಿರುವ ದೂರು ಹೀಗಿದೆ: ಪ್ರಿಯಾಂಕಾ, ಪ್ರಮೋದ್ ಹಾಗೂ‌ ನಿತೀಶ್ ಆರೋಪಿಗಳೆಂದು ಇವರು ತಮ್ಮ ದೂರಿನಲ್ಲಿ ದಾಖಲಿಸಿದ್ದಾರೆ. ಅಲ್ಲದೇ ಇವರ ಮೇಲೆ 307 - ಕೊಲೆಯತ್ನ, 506 - ಜೀವ ಬೆದರಿಕೆ, 34 - ಸಮಾನ‌ ಉದ್ದೇಶದಿಂದ ಗುಂಪುಗೂಡಿ ಕೃತ್ಯ, 504 - ಉದ್ದೇಶಪೂರ್ವಕವಾಗಿ ಅವಮಾನ ಹಾಗೂ ಪ್ರಚೋದನೆ ನೀಡುವುದು, 279 - ಅಪಾಯಕಾರಿ ಚಾಲನೆ, 323 - ಆಯುಧದಿಂದ ಹಲ್ಲೆ ಪ್ರಕರಣಗಳಡಿ ದೂರು ನೀಡಿದ್ದಾರೆ.

ಇತ್ತೀಚೆಗೆ ನಡೆದ ಘಟನೆ: ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ 25 ವರ್ಷದ ಯುವಕ ಸಾಹಿಲ್​ ಎಂಬಾತ 71 ವರ್ಷದ ವೃದ್ಧ ಮುತ್ತಪ್ಪ ಎನ್ನುವವರನ್ನು ಸ್ಕೂಟರ್ ಮೂಲಕ ಕಿಲೋ ಮೀಟರ್ ದೂರದವರೆಗೂ ಎಳೆದೊಯ್ದು ಅಮಾನವೀಯತೆ ಮೆರೆದಿದ್ದ. ಘಟನೆ ಬಳಿಕ ಅಮಾನವೀಯವಾಗಿ ನಡೆದುಕೊಂಡಿದ್ದ ಸವಾರನನ್ನು ಗೋವಿಂದರಾಜನಗರ ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಅಪಘಾತದ ಸುದ್ದಿ ನಗರದಿಂದ ಕೇಳಿ ಬಂದಿದೆ.

ಇದನ್ನೂ ಓದಿ: ಹುಬ್ಬಳ್ಳಿ ನೈಋತ್ಯ ರೈಲ್ವೆ ಕಾರ್ಯವೈಖರಿಗೆ ಪ್ರಯಾಣಿಕರು ಖುಷ್​.. ದ್ವಿಪಥ ಮಾರ್ಗದಲ್ಲಿ 130 ಕಿ ಮೀ ವೇಗದಲ್ಲಿ ಓಡಲಿವೆ ರೈಲುಗಳು

Last Updated : Jan 20, 2023, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.