ETV Bharat / state

ಅತ್ಯಲ್ಪ ಗೌರವಧನ ಹೆಚ್ಚಳದಿಂದ ನೌಕರರಿಗೆ ತೀವ್ರ ಬೇಸರ: ರಾಜ್ಯ ಅಂಗನವಾಡಿ ನೌಕರರ ಸಂಘ - Anganwadi workers outrage against Budget

ಸಿಎಂ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ರಾಜ್ಯ ಬಜೆಟ್​ ಕುರಿತಂತೆ ಅಂಗನವಾಡಿ ನೌಕರರು ಅಸಮಾಧಾನ ಹೊರ ಹಾಕಿದ್ದಾರೆ.

Anganwadi employees outrage against State Budget 2022
ರಾಜ್ಯ ಬಜೆಟ್​ ವಿರುದ್ಧ ಅಂಗನವಾಡಿ ನೌಕರರ ಆಕ್ರೋಶ
author img

By

Published : Mar 4, 2022, 10:47 PM IST

ಬೆಂಗಳೂರು: ಬಜೆಟ್​​​​ನಲ್ಲಿ ಅಂಗನವಾಡಿ ನೌಕರರಿಗೆ ಆಗಿರುವ ಸೇವಾ ಜೇಷ್ಠತೆಯ ಆಧಾರದಲ್ಲಿ ಅತ್ಯಲ್ಪ ಗೌರವಧನ ಹೆಚ್ಚಳಕ್ಕೆ ತೀವ್ರ ಬೇಸರ ವ್ಯಕ್ತವಾಗಿದೆ. ಪೂರ್ಣ ಪ್ರಮಾಣದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಅಧ್ಯಕ್ಷೆ ಎಸ್. ವರಲಕ್ಷ್ಮಿ ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 339 ಕೋಟಿ ಶಿಫಾರಸು ಮಾಡಲಾಗಿತ್ತು. ಅದರಂತೆ 20 ವರ್ಷ ಸೇವಾವಧಿ ಮೇಲ್ಪಟ್ಟವರಿಗೆ 2 ಸಾವಿರ ರೂ, ಸಹಾಯಕಿ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಗೆ ತಲಾ 1700 ರೂ. ನೀಡಲು ಇಲಾಖೆ ತಿಳಿಸತ್ತು. ಆದರೆ ಈಗ ಘೋಷಣೆಯಾಗಿರುವುದು ಕೇವಲ ಅತ್ಯಲ್ಪ ಎಂದು ಕಿಡಿಕಾರಿದರು.

ಮೊಟ್ಟೆಯ ಹಣವನ್ನು ಮುಂಗಡವಾಗಿ ಇಲಾಖೆಯಿಂದಲೇ ಸರಬರಾಜು ಮಾಡಬೇಕಿತ್ತು. ಪ್ರತಿಯೊಬ್ಬ ಕಾರ್ಯಕರ್ತೆ ತಮ್ಮ ಕೈಯಿಂದಲೇ ಮೂರ್ನಾಲ್ಕು ಸಾವಿರ ರೂ. ಹಣ ಹಾಕಿ ಮೊಟ್ಟೆ ಖರೀದಿಸಿ ನೀಡುತ್ತಿದ್ದರು. ಸಕಾಲದಲ್ಲಿ ಹಣ ಬಿಡುಗಡೆ ಯಾಗದೆ ಹಾಗೂ ಗೌರವಧನವೂ ಸೂಕ್ತಕಾಲದಲ್ಲಿ ನೀಡದೆ ಸಂಕಷ್ಟ ಒದಗಿದೆ. ಸ್ಥಳೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮೊಟ್ಟೆ ದರ ನೀಡದೆ ಇರುವುದರಿಂದ ಸಾವಿರಾರು ರೂ. ಕಳೆದುಕೊಳ್ಳುವ ಪರಿಸ್ಥಿತಿ ಕಳೆದ ಹಲವು ವರ್ಷಗಳಿಂದ ಉದ್ಭವವಾಗಿದೆ. ಈ ಸಮಸ್ಯೆ ಕೂಡಲೇ ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಿದರು.

ಅನುಕಂಪದ ಆಧಾರದಲ್ಲಿ ಕೆಲಸ ನೀಡಿ: ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ ಕೆಲಸದ ಅವಧಿಯಲ್ಲಿ ತೀರಿಕೊಂಡಾಗ ಅನುಕಂಪದ ಆಧಾರದಲ್ಲಿ ಕೆಲಸ ನೀಡಬೇಕೆಂಬ ಆದೇಶದಲ್ಲಿ ಮೃತರ ಮಗಳು ಅಥವಾ ಸೊಸೆಗೆ ಅದೇ ಹುದ್ದೆಯನ್ನು ನೀಡಬೇಕು ಎಂದು ಆದೇಶಕ್ಕೆ ತಿದ್ದುಪಡಿ ತರಬೇಕು ಎಂದು ಕೇಳಿಕೊಂಡರು.

ಬಜೆಟ್​​ನಲ್ಲಿ ಅಂಗನವಾಡಿಗಳ ಮಹತ್ವ ಇಳಿಮುಖ: ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡುವ ಭರದಲ್ಲಿ ರಾಜ್ಯದ ಅಂಗನವಾಡಿ ನೌಕರರಿಗೆ ಸಮಸ್ಯೆಯಾಗುವಂತಹ ರೀತಿಯಲ್ಲಿ ಇಂದು ಬಜೆಟ್ ಭಾಷಣದಲ್ಲಿ ಪ್ರಸ್ತಾಪವಾಗಿದೆ. ಐಸಿಡಿಎಸ್ ಮಾರ್ಗದರ್ಶಿ ಸೂತ್ರದಂತೆ ನಡೆಯುವ ಅಂಗನವಾಡಿ ಕೇಂದ್ರಗಳಿಗೆ ತೆರಳಬೇಕಾದ 3 ರಿಂದ 6 ವರ್ಷ ವಯೋಮಾನದ ಮಕ್ಕಳನ್ನು ಪ್ರಾಥಮಿಕ ಶಿಕ್ಷಣ ವಿಭಾಗಕ್ಕೆ ಸೇರಿಸಿದ್ದರಿಂದ ಅಂಗನವಾಡಿಗಳ ಮಹತ್ವ ಇಳಿಮುಖವಾಗುತ್ತಿದ್ದು ಮುಚ್ಚುತ್ತಿವ. ಶಾಲಾಪೂರ್ವ ಶಿಕ್ಷಣ ನೀಡುವ ಅಂಗನವಾಡಿ ನೌರಕರು ಕೇವಲ 3 ವರ್ಷ ಒಳಗಿನವರ ಕೆಲಸಕ್ಕೆ ಸೀಮಿತವಾಗುವ ಅಪಾಯ ಈ ಬಜೆಟ್ ಘೋಷಣೆಯಲ್ಲಿ ಸ್ಪಷ್ಟವಾಗುತ್ತದೆ. ಹಾಗಾಗಿ ಈ ಪ್ರಸ್ತಾಪವನ್ನು ಸರ್ಕಾರ ಹಿಂಪಡೆಯಬೇಕು. ಇನ್ನುಳಿದ ಮಹತ್ವದ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಆಡಳಿತ ಸುಧಾರಣೆಗೆ 56 ಸಾವಿರ ಕೋಟಿ ಅನುದಾನ: ಎಲ್ಲೆಲ್ಲಿ ಎಷ್ಟು ವಿನಿಯೋಗ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.