ಆನೇಕಲ್: ನಿಖರ ಮಾಹಿತಿ ಕಲೆ ಹಾಕಿ ಆನೇಕಲ್ ವೃತ್ತ ನಿರೀಕ್ಷಕ ಮೋಹನ್ ಎಸ್ ವೈ ಖಾಸಗಿ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿ ಗಾಂಜಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಖಾಸಗಿ ಕಾಲೇಜಿನ ಎಂಟು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ರಾತ್ರಿ ವೇಳೆ ವಿದ್ಯಾರ್ಥಿಗಳು ಗಾಂಜಾ ಮತ್ತಿನಲ್ಲಿನ ಚಲನವಲನಗಳ ಬಗ್ಗೆ ದೂರುಗಳು ಬಂದ ಮಾಹಿತಿ ಬೆನ್ನೆತ್ತಿದ ಪಿಸಿಐ, ಎಂಟು ಮಂದಿ ವಿದ್ಯಾರ್ಥಿಗಳು ಹಾಗೂ ಒಂದು ಇನ್ನೋವಾ ಕಾರು ಮತ್ತು 850 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆನೇಕಲ್-ಚಂದಾಪುರ ಮುಖ್ಯರಸ್ತೆಯ ಬ್ಯಾಗಡದೇನಹಳ್ಳಿ ವ್ಯಾಪ್ತಿಯಲ್ಲಿನ ವಿಬಿಹೆಚ್ಸಿ ವಸತಿ ಸಮುಚ್ಚಯದ ಮೇಲೆ ರಾತ್ರಿ ದಾಳಿ ನಡೆದಿದ್ದು. ವ್ಯಾಪಕ ಶೋಧ ನಡೆಸಿದ ಆನೇಕಲ್ ಪೊಲೀಸ್ ಸಿಬ್ಬಂದಿ, ಗಾಂಜಾ ಚಟುವಟಿಕೆಯಲ್ಲಿ ಬಾಗಿಯಾಗಿದ್ದ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಅನಂತರ ತೀವ್ರ ಪರಿಶೀಲನೆಗೆ ಒಳಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳು ಖಾಸಗಿ ಕಾಲೇಜ್ನಲ್ಲಿ ವ್ಯಾಸಾಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.