ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಆನೇಕಲ್ ಬಾಲರಾಜ್ (58) ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಕರಿಯ ಸಿನಿಮಾ ನಿರ್ಮಾಣ ಮಾಡಿ ಬಾಲರಾಜ್ ಖ್ಯಾತಿ ಗಳಿಸಿದ್ದರು. ಅವರ ನಿಧನದ ಸುದ್ದಿ ಕೇಳಿ ಸ್ಯಾಂಡಲ್ವುಡ್ನ ಅನೇಕರು ಸಂತಾಪ ಸೂಚಿಸಿದ್ದಾರೆ.
ಇಂದು ಬೆಳಗ್ಗೆ ಜೆ.ಪಿ. ನಗರದ ನಿವಾಸದ ಬಳಿ ವಾಕಿಂಗ್ಗೆ ತೆರಳಿದ್ದಾಗ ವಾಹನವೊಂದು ಡಿಕ್ಕಿ ಹೊಡೆದಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅನೇಕ ಸಿನಿಮಾಗಳ ನಿರ್ಮಾಣ: ಕನ್ನಡ ಚಿತ್ರರಂಗದಲ್ಲಿ ಪ್ರೇಮ್ ನಿರ್ದೇಶನದ ‘ಕರಿಯ’, ಶ್ರೀನಿವಾಸ್ ಪ್ರಭು ನಿರ್ದೇಶನ ಮಾಡಿದ್ದ ‘ಕರಿಯ 2’, ‘ಗಣಪ’ ಸೇರಿದಂತೆ ಅನೇಕ ಸಿನಿಮಾಗಳನ್ನು ಆನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ದರು.
ಇದನ್ನೂ ಓದಿ: ಸುಡುಬಿಸಿಲು.. ದಾಹ ತೀರಿಸಿಕೊಳ್ಳಲು ಬಂದ 5 ಸಿಂಹಗಳು..