ETV Bharat / state

ಬಾಲಿವುಡ್​ನ ಖ್ಯಾತ ನಿರ್ಮಾಪಕ ಆನಂದ್ ಪಂಡಿತ್ ಪಾಲಾದ ಕಬ್ಜ ಚಿತ್ರದ ಹಿಂದಿ ವಿತರಣೆ ಹಕ್ಕು

ಕಬ್ಜ ಚಿತ್ರದ ಹಿಂದಿ ಭಾಷೆಯ ವಿತರಣೆ ಹಕ್ಕು ಖ್ಯಾತ ನಿರ್ಮಾಪಕ ಆನಂದ್​ ಪಂಡಿತ್​ ಪಡೆದಿದ್ದಾರೆ.

Kn_Bng
ಕಬ್ಜ ಚಿತ್ರದ ಹಿಂದಿ ವಿತರಣೆ ಹಕ್ಕು ಪಡೆದ ಆನಂದ್​ ಪಂಡಿತ್​
author img

By

Published : Nov 28, 2022, 9:06 PM IST

ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತದಲ್ಲಿ ಟೈಟಲ್ ಮುಖಾಂತರವೇ ಟಾಕ್ ಆಗುತ್ತಿರುವ ಸಿನಿಮಾ ಕಬ್ಜ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಹಾಗೂ ಆರ್ ಚಂದ್ರು ನಿರ್ದೇಶನದ ಕಬ್ಜ ಚಿತ್ರ ಟೀಸರ್ ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದಿದ್ದು, ಟೀಸರ್​ಗೆ ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರಕ್ಕಾಗಿ ಪ್ರೇಕ್ಷಕರು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಬರೀ ಪ್ರೇಕ್ಷಕರಷ್ಟೇ ಅಲ್ಲದೇ, ಬೇರೆ ಚಿತ್ರರಂಗಗಳು ಸಹ ಕಬ್ಜ ಚಿತ್ರಕ್ಕಾಗಿ ಎದುರು ನೋಡುತ್ತಿವೆ. ಹೀಗಾಗಿ ಈ ಚಿತ್ರದ ಬಿಡುಗಡೆಗೆ ನಿರ್ದೇಶಕ ಆರ್​.ಚಂದ್ರು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಕಬ್ಜ ಪ್ಯಾನ್​ ಇಂಡಿಯಾ ಚಿತ್ರ ಆದ್ದರಿಂದ ಏಕಕಾಲಕ್ಕೆ ಹಲವು ಭಾಷೆಗಳಲ್ಲಿ ರಿಲೀಸ್​ ಆಗಲಿದೆ. ಈಗ ಕಬ್ಜ ಹಿಂದಿ ವರ್ಷನ್​ಗೆ ಸಾಕಷ್ಟು ಬೇಡಿಕೆ ಬರ್ತಾ ಇದೆಯಂತೆ. ಸದ್ಯ ನಿರ್ದೇಶಕ ಆರ್ ಚಂದ್ರು ಆಪ್ತ ಮೂಲಗಳು ಹೇಳುವ ಪ್ರಕಾರ ಕಬ್ಜ ಚಿತ್ರದ ಹಿಂದಿ ವರ್ಷನ್​​ ಬಾಲಿವುಡ್ ಖ್ಯಾತ ನಿರ್ಮಾಪಕ ಹಾಗೂ ವಿತರಕ ಆನಂದ್​ ಪಂಡಿತ್ ಪಾಲಾಗಿದೆ.

ಈಗಾಗ್ಲೇ ಬಾಲಿವುಡ್​ನಲ್ಲಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ವಿತರಣೆ ಮಾಡಿರುವ ಅನುಭವ ಇರುವ ಆನಂದ್​ ಪಂಡಿತ್​, ಕಬ್ಜ ಸಿನಿಮಾದ ಹಿಂದಿ ವಿತರಣೆ ಹಕ್ಕನ್ನು ಪಡೆದುಕೊಂಡಿರುವುದರಿಂದ ಬಾಲಿವುಡ್​ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಯಾಕಂದ್ರೆ ಬಾಲಿವುಡ್​ನಲ್ಲಿ ಸಿನಿಮಾ ವ್ಯವಹಾರದ ಬಗ್ಗೆ ಅವರು ಸಾಕಷ್ಟು ತಿಳಿದುಕೊಂಡಿರುವುದರಿಂದ ಕಬ್ಜ ಸಿನಿಮಾದ ಮೇಲೆ ಡಿಮ್ಯಾಂಡ್ ಹೆಚ್ಚಾಗಿದೆ.

ಸದ್ಯ ಹಿಂದಿ ವರ್ಷನ್ ವಿತರಣೆ ಹಕ್ಕು ಆನಂದ್ ಪಂಡಿತ್ ಪಾಲಾಗಿರುವುದರಿಂದ, ಇನ್ನು ಉಳಿದ ಭಾಷೆಗಳಲ್ಲಿ ಕಬ್ಜ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆಯಂತೆ. ಈಗಾಗಲೇ ತೆಲುಗು, ತಮಿಳು, ಮಲೆಯಾಳಂ ಭಾಷೆಯ ವಿತರಣೆ ಹಕ್ಕಿಗಾಗಿ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆಗಳ ಜೊತೆ ಮಾತುಕತೆ ಆಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆರ್​ ಚಂದ್ರು ನಿರ್ದೇಶನದ ಕಬ್ಜ ಚಿತ್ರವು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಏಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಉಪೇಂದ್ರ ಜೊತೆಗೆ ಸುದೀಪ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀಯಾ ಶರಣ್​, ನವಾಬ್​ ಷಾ, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮ ನವಾಬ್ ಷಾ, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಮತ್ತು ಮುರಳಿ ಶರ್ಮಾ ಕಬ್ಜ‌ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್.ಚಂದ್ರು ಅವರೇ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ.

ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್​ ಅವರ ಸಾಹಸ ನಿರ್ದೇಶನ ಚಿತ್ರಕಿದೆ. ಮೊದಲ ಟೀಸರ್​ ಬಿಡುಗಡೆ ಆದ ದಿನದಿಂದಲೂ ಕಬ್ಜ ಚಿತ್ರ ಚಿತ್ರರಂಗದಲ್ಲಿ ಸೌಂಡ್ ಮಾಡುತ್ತಿದೆ. ಅದ್ದೂರಿ ಮೇಕಿಂಗ್​ನ ಝಲಕ್​ ಕಂಡು ಸಿನಿಪ್ರಿಯರು ಫಿದಾ ಆಗಿದ್ದಾರೆ. 29 ಮಿಲಿಯನ್​ಗಿಂತಲೂ ಅಧಿಕ ಬಾರಿ ​​ವೀಕ್ಷಣೆ ಕಂಡಿರುವ ಕಬ್ಜ ಟೀಸರ್ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟಿಸಿದೆ.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳಲಿರುವ ರಾಮ್ ಚರಣ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.